Advertisement

ಸದೃಢ ದೇಹಕ್ಕಾಗಿ ಆಟೋಟಗಳು ಅವಶ್ಯ: ಸ್ವಾಮೀಜಿ

10:45 AM May 15, 2019 | Team Udayavani |

ಅಣ್ಣಿಗೇರಿ: ಸದೃಢ ದೇಹಕ್ಕಾಗಿ ಕ್ರೀಡೆಗಳು ಅವಶ್ಯಕ. ಕುಸ್ತಿ, ಕಬಡ್ಡಿಯಂತಹ ಕ್ರೀಡೆಗಳು ಮನುಷ್ಯನ ಗಟ್ಟಿ ದೇಹಕ್ಕೆ ಪೂರಕವಾಗಿವೆ ಎಂದು ಸ್ಥಳೀಯ ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.

Advertisement

ಹೋರಕೇರಿ ಓಣಿಯ ಶ್ರೀ ಉಳವಿ ಚೆನ್ನಬಸವೇಶ್ವರ ಸೇವಾ ಸಮಿತಿ ವತಿಯಿಂದ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡ ಪುರುಷರ ಹಾಗೂ ಮಹಿಳೆಯರ ಬಯಲು ಕುಸ್ತಿ ಪಂದ್ಯಾವಳಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರತಿ ವರ್ಷ ಪುರುಷರ ಕುಸ್ತಿ ಹಮ್ಮಿಕೊಳ್ಳುತ್ತಿದ್ದ ಕಮಿಟಿ ಈ ಬಾರಿ ಮಹಿಳೆಯರ ಕುಸ್ತಿ ಹಮ್ಮಿಕೊಂಡು ಮಹಿಳೆಯರು ಕುಸ್ತಿಯನ್ನು ಆಡುತ್ತಾರೆ ಎಂಬುದನ್ನು ಜನರಿಗೆ ತಿಳಿಸುವ ಕಾರ್ಯವನ್ನು ಮಾಡಿರುವುದು ಶ್ಲಾಘನೀಯವಾದುದು ಎಂದರು.

ಜಿಪಂ ಉಪಾದ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ. ಅಲ್ಲದೇ ಅವುಗಳನ್ನು ಆಡುವ ಯುವಕರು ಕಡಿಮೆ ಆಗುತ್ತಿದ್ದಾರೆ. ಸದಾ ಕ್ರೀಡೆಯಲ್ಲಿ ತೊಡಗಿಕೊಂಡರೆ ಯಾವಾಗ ಬೇಕಾದರೂ ಕಣದಲ್ಲಿ ಇಳಿಯಬಹುದು ಎಂದು ಹೇಳಿದರು.

ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಕ್ರೀಡೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮಾಡಬೇಕಾಗಿದೆ. ನಾನು ಒಬ್ಬ ಸಂಗ್ರಾಣಿ ಕಲ್ಲು ಎತ್ತುವ ಕ್ರೀಡಾಪಟು. ರಾಜ್ಯಮಟ್ಟದಲ್ಲಿ ಭಾಗವಹಿಸಿದ್ದೇನೆ. ನೀವು ಸಹ ದೇಶಿಯ ಕ್ರೀಡೆಗಳನ್ನು ಆಡುವುದರ ಮೂಲಕ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಪ್ರಯತ್ನಿಸಿ ಎಂದರು.

ಪುರುಷರ ಬಯಲು ಕುಸ್ತಿಯಲ್ಲಿ ಅಲ್ತಾಪ ಗೋಕುಲ ಪ್ರಥಮ, ಮೀರಸಾಬ ಹುಯಿಲಗೋಳ ದ್ವಿತೀಯ, ಪರಶುರಾಮ ಧಾರವಾಡ ತೃತೀಯ ಸ್ಥಾನ ಪಡೆದರು. ಮಹಿಳೆಯ ವಿಭಾಗದಲ್ಲಿ ಮುಂಡರಗಿಯ ಬಸೀರಾ ವಕಾರದ ಪ್ರಥಮ, ವಿಜಯಪುರದ ಶಾಹೀದ ಬೇಗಂ ದ್ವಿತೀಯ ಸ್ಥಾನ ಗಳಿಸಿದರು.

Advertisement

ಕಾರ್ಯಕ್ರಮದಲ್ಲಿ ಹಿರಿಯರಾದ ರಹಿಮಾನಸಾಬ ಕಿಂದರಿ, ದೇವಪ್ಪ ಕೋಳಿವಾಡ, ಚಾಂದಸಾಬ ಭದ್ರಾಪುರ, ದಸ್ತಗಿರಸಾಬ ಸಂಗಟಿ, ಫತ್ತೇಸಾಬ ಹಿರೇನಾಯ್ಕರ, ಇಮಾಮಸಾಬ ದರವಾನ, ಡಿ.ಸಿ. ಕಾಳಪ್ಪನವರ, ಮಂಜಪ್ಪ ಬಸೆನಾಯ್ಕರ, ಮಂಜುನಾಥ ಕಾಳಪ್ಪನವರ, ಈರಪ್ಪ ಗುಡಿ ಹಾಗೂ ವಿವಿಧ ಗ್ರಾಮಗಳ ಕುಸ್ತಿಪಟುಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next