Advertisement

ಅಂಗಳದಲ್ಲಿ ಹಾಕಿ ಸ್ಟಿಕ್‌ನಲ್ಲೇ ಬಡಿದಾಟ!

01:07 AM Nov 26, 2019 | Team Udayavani |

ಹೊಸದಿಲ್ಲಿ: ಭಾರತೀಯ ಹಾಕಿಯನ್ನೇ ಅವಮಾನಿಸುವಂಥ ಘಟನೆಯೊಂದು ಸೋಮವಾರ “ಜವಾಹರಲಾಲ್‌ ನೆಹರೂ ಹಾಕಿ ಟೂರ್ನಿ’ಯ ಫೈನಲ್‌ ವೇಳೆ ನಡೆದಿದೆ. ಪಂಜಾಬ್‌ ಪೊಲೀಸ್‌-ಪಂಜಾಬ್‌ ನ್ಯಾಶನಲ್‌ ಹಾಕಿ ತಂಡದ ಆಟಗಾರರು ಮೈದಾನದಲ್ಲೇ ಗುದ್ದಾಡಿಕೊಂಡು, ಹಾಕಿ ಸ್ಟಿಕ್‌ನಿಂದ ಬಡಿದಾಡಿಕೊಂಡಿದ್ದಾರೆ.

Advertisement

3ನೇ ಕ್ವಾರ್ಟರ್‌ ವೇಳೆ, ಪಂದ್ಯ 3-3 ಸಮಬಲದಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಸ್ವಲ್ಪ ಹೊತ್ತು ಸ್ಥಗಿತಗೊಂಡ ಪಂದ್ಯ, ಬಳಿಕ ಕೆಲವು ಆಟಗಾರರ ಗೈರಲ್ಲಿ ಮುಂದುವರಿಯಿತು. 6-3ರಿಂದ ಗೆದ್ದ ಪಿಎನ್‌ಬಿ ಚಾಂಪಿಯನ್‌ ಆಯಿತು.

ಘಟನೆಗೆ ಸಂಬಂಧಿಸಿದಂತೆ “ಹಾಕಿ ಇಂಡಿಯಾ’ ಸಂಘಟಕರಿಂದ ವರದಿ ಕೋರಿದ್ದು, ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next