Advertisement

ಟ್ರಂಪ್‌ ನನ್ನ ಜತೆ ಸೆಕ್ಸ್‌ ನಡೆಸಿ ನನ್ನನ್ನು ಇವಾಂಕಾಗೆ ಹೋಲಿಸಿದರು

12:04 PM Mar 28, 2018 | udayavani editorial |

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್‌ ಟ್ರಂಪ್‌ ಅವರ ಗತ ವೈಭವದ ರಾಸ ಲೀಲೆಯ ಆರೋಪಗಳಿಗೆ ಕೊನೆಯೇ ಇಲ್ಲವೇನೋ ಎನ್ನುವ ಸ್ಥಿತಿ ಈಗಿದೆ. ಕೆಲ ಸಮಯದ ಹಿಂದೆ ಓರ್ವ ಪ್ಲೇ ಬಾಯ್‌ ಮಾಡೆಲ್‌, “ಟ್ರಂಪ್‌ ಅವರು ಮೆಲಾನಿಯಾ ಅವರನ್ನು ಮದುವೆಯಾದ ಬಳಿಕ ನನ್ನೊಂದಿಗೆ ಸೆಕ್ಸ್‌ ನಡೆಸಿದ್ದರು’ ಎಂದು ಆರೋಪಿಸಿದ್ದಳು. 

Advertisement

ಈಗ ಇನ್ನೋರ್ವ ಮಾಜಿ ಮಾಡೆಲ್‌, ಕರೆನ್‌ ಮೆಕ್‌ಡೋಗಲ್‌, ಇನ್ನೊಂದು ಸೋಜಿಗದ ವಿಷಯವನ್ನು ಬಹಿರಂಗಪಡಿಸಿದ್ದಾಳೆ : ಟ್ರಂಪ್‌ ನನ್ನ ಜತೆ ಸೆಕ್ಸ್‌ ನಡೆಸಿದ್ದರು; ಅನಂತರ ಆತ ನನ್ನನ್ನು ತನ್ನ ಮಗಳಿಗೆ ಹೋಲಿಸಿ “ನೀನು ನನ್ನ ಮಗಳ ಹಾಗೆ ತುಂಬ ಚೆಲುವೆ, ಚತುರೆ’ ಎಂದು ಹೇಳಿದರು.

ಪ್ಲೇ ಬಾಯ್‌ ಮಾಡೆಲ್‌ ಪತ್ರಕರ್ತ ಆ್ಯಂಡರ್ಸ್‌ನ್‌ ಕೂಪರ್‌ಗೆ ನೀಡಿದ ಸಂದರ್ಶನದಲ್ಲಿ  ಕರೆನ್‌ ಮೆಕ್‌ಡೋಗಲ್‌ ಈವಿಷಯವನ್ನು ಬಹಿರಂಗಪಡಿಸಿರುವುದು ಅನೇಕರಿಗೆ ಆಘಾತ, ಕಸಿವಿಸಿ ಉಂಟು ಮಾಡಿದೆ. 

ಕರೆನ್‌ ಹೇಳಿರುವ ಪ್ರಕಾರ ‘ಟ್ರಂಪ್‌ ನನ್ನನ್ನು ಪ್ಲೇಬಾಯ್‌ ಕಟ್ಟಡದಲ್ಲಿ ಸೆಲೆಬ್ರಿಟಿ ಅಪ್ರಂಟಿಸ್‌ ಶೂಟಿಂಗ್‌ ವೇಳೆ ಭೇಟಿಯಾಗಿ ಅನಂತರ ನನ್ನ ಜತೆಗೆ ಸೆಕ್ಸ್‌ ನಡೆಸಿದ್ದರು. ಆ ಬಳಿಕ ಟ್ರಂಪ್‌ ಆಕೆಗೆ ಹಣ ಕೊಡಲು ಮುಂದಾದರು. ಆದರೆ ವಿಚಲಿತಗೊಂಡ ನಾನು ಅದನ್ನು ನಯವಾಗಿ ತಿರಸ್ಕರಿಸಿದೆ’.

ಹಲವರಿಗೆ ಅತ್ಯಂತ ಆಘಾತ ಉಂಟು ಮಾಡಿರುವ ಸಂಗತಿ ಎಂದರೆ 47ರ ಹರೆಯದ ಮೆಕ್‌ ಡೋಗಲ್‌ ಬಹಿರಂಗಪಡಿಸಿರುವ ವಿಷಯ. ಅದೆಂದರೆ ಸೆಕ್ಸ್‌ ಬಳಿಕ ಟ್ರಂಪ್‌ ಹೇಳಿರುವ ಮಾತು : “ನೀನು ತುಂಬಾ ಚೆಲುವೆ, ಚತುರೆ – ನನ್ನ ಮಗಳು ಇವಾಂಕಾ ಳ ಹಾಗೆ’.

Advertisement

“ಇದರರ್ಥ ಟ್ರಂಪ್‌ಗೆ ತನ್ನ ಮಗಳು ಇವಾಂಕಾ ಬಗ್ಗೆ ಅತೀವವಾದ ಹೆಮ್ಮೆ ಇದೆ. ಟ್ರಂಪ್‌ ದೃಷ್ಟಿಯಲ್ಲಿ ಇವಾಂಕಾ ಅತ್ಯಂದ ಬುದ್ಧಿವಂತ, ಚತುರ ಮಹಿಳೆ, ಮಹಾ ಅಂದಗಾತಿ ! ನಾನೂ ಇವಾಂಕಾ ಳ ಹಾಗೆ ಚೆಲುವೆ, ಚತುರೆ ಎಂದು ಟ್ರಂಪ್‌ ಬಾಯ್ತುಂಬ ಹೊಗಳಿದರು’ ಎಂದು ಮೆಕ್‌ ಡೋಗಲ್‌ ಸಂದರ್ಶನದಲ್ಲಿ ಹೇಳಿದಳು. 

“ಇದಾದ ಬಳಿಕದಲ್ಲಿ ಟ್ರಂಪ್‌ ಜತೆಗೆ ನಾನು ಸೆಕ್ಸ್‌ ನಡೆಸಿದ್ದಾಗಲೆಲ್ಲ ನನಗೆ ಇವಾಂಕಾ ಬಗ್ಗೆ ಹೆಚ್ಚೆಚ್ಚು ವಿಷಯಗಳು ತಿಳಿದು ಬಂದವು’ ಎಂದು ಮೆಕ್‌ ಡೋಗಲ್‌ ಸಂದರ್ಶನದಲ್ಲಿ ಹೇಳಿದಳು. 

Advertisement

Udayavani is now on Telegram. Click here to join our channel and stay updated with the latest news.

Next