Advertisement

ಸಂಗೀತ ರಸದೌತಣ ನಾದಸಿರಿ 

09:05 PM Jun 22, 2018 | |

ಸ್ವರಸಂವೇದನಾ ಪ್ರತಿಷ್ಠಾನ ಗಿಳಿಗುಂಡಿ ಸಂಸ್ಥೆಯ ಏಳನೇ ವರ್ಷದ ವಾರ್ಷಿಕ ಸಂಗೀತ ಸಮ್ಮೇಳನ ಇತ್ತೀಚೆಗೆ ಎಳೆಯ ಪ್ರತಿಭಾ ಪ್ರೋತ್ಸಾಹದ ರೂಪದಲ್ಲಿ ಪ್ರಾರಂಭವಾದ ಮೊದಲನೆಯ ಕಾರ್ಯಕ್ರಮದಲ್ಲಿ ಉದಯೋನ್ಮುಖ ಕಲಾವಿದ ಕುಮಾರ್‌ ರಿಶಭ್‌ ಹಾನಗಲ್‌ ಧಾರವಾಡ್‌ ಇವರಿಂದ ಹಾರ್ಮೋನಿಯಂ ವಾದನ ನಡೆಯಿತು. ಆಹಿರ್‌ ಭೈರವ್‌ ರಾಗವನ್ನು ಅವರು ಪ್ರಸ್ತುತ ಪಡಿಸಿದರು. ಗಿಳಿಗುಂಡಿ ಮನೆಯ ಕಲಾವಿದರಾದ ಪ್ರತಿಭಾ ಹೆಗಡೆ ಅವರಿಂದ ಭೈರಾಗಿ ಭೈರವ್‌ ಹಾಗೂ ಕುಮಾರಿ ಸಂಗೀತಾ ಹೆಗಡೆ ಇವರಿಂದ ಜೌನಪುರಿ ಉತ್ತಮವಾಗಿ ಪ್ರಸ್ತುತಗೊಂಡವು. ನಂತರ ಪಂಡಿತಾ ಶುಭದಾ ಪರಾಡ್ಕರ್‌ ಅವರ ಶಿಷ್ಯೆ ಹೇಮಾಲಾ ರಾನಡೆ ಅಪರೂಪದ ರಾಗ ಪಂಚಮ್‌ ಹಾಗೂ ರಾಗ್‌ ಸರಸ್ವತಿ ಹಾಗೂ ಸಾರಂಗ್‌ ಮಿಶ್ರಣದ ರಾಗ್‌ ಅಂಬಿಕಾ ಸಾರಂಗ್‌ ಮೂಲಕ ಶ್ರೋತೃಗಳ ಮನ ತಣಿಸಿದರು. 


ಮಧ್ಯಾಹ್ನದ ಮೊದಲ ಕಛೇರಿಯನ್ನು ನಡೆಸಿಕೊಟ್ಟ ಯುವ ಕಲಾವಿದ ಗಾಂಧಾರ್‌ ದೇಶಪಾಂಡೆ ಬೃಂದಾವನೀ ಸಾರಂಗ್‌ನೊಂದಿಗೆ ಮನಗೆದ್ದರು. ವಿಲಂಬಿತ್‌ ತಿಲವಾಡದಲ್ಲಿ ಖ್ಯಾಲ್‌ನುಮ (ವಿಲಂಬಿತ್‌ ತರಾನಾ) ಹಾಗೂ ದೃತ್‌ ತೀನ್‌ ತಾಳದ ಬಂಧಿಶ್‌ ಅಲ್ಲದೆ ಮಿಶ್ರ ಪೀಲೂವಿನ ಒಂದು ಠುಮ್ರಿಯನ್ನು ಪ್ರಸ್ತುತಪಡಿಸಿದರು. ನಂತರ ಶಾರದಾ ಭಟ್‌ ಕಟ್ಟಿಗೆ ಇವರು ಭೀಮಪಲಾಸಿ ಹಾಗೂ ಮುಲ್ತಾನಿ ರಾಗಗಳನ್ನು ಹಾಡಿದರು. 

Advertisement

 ರಶ್ಮಿ ಪರಾಡ್ಕರ್‌ ಧನಶ್ರೀ ಹಾಗೂ ರಾಮ್‌ ಗೌರಿ ರಾಗಗಳನ್ನು ಪ್ರಸ್ತುತಪಡಿಸಿದರು. ನಂತರದ ಕಛೇರಿಯಲ್ಲಿ ಉಮಾ ಬಾಲಸುಬ್ರಹ್ಮಣ್ಯ ಪೂರ್ವಿ ಹಾಗೂ ಶ್ಯಾಮ್‌ ಕಲ್ಯಾಣ್‌ ರಾಗಗಳನ್ನು ಪ್ರಸ್ತುತಪಡಿಸಿದರು. ಅನಂತರ ರಮಾಕಾಂತ್‌ ಗಾಯಕ್ವಾಡ್‌ ರಾಗ್‌ ಬಾಗೇಶ್ರೀ ಮತ್ತು ಠುಮ್ರಿಗಳೊಂದಿಗೆ ಮನಸೂರೆಗೊಂಡರು. ಗಿಳಿಗುಂಡಿ ಮನೆಯ ಬಾಲೆ ಸುಂದರ ರಾಗ್‌ ಮಾಲಾ ಬಂಧಿಶ್‌ ಹಾಡಿದಳು. ನಂತರ ಗಿಳಿಗುಂಡಿ ಮನೆಯ ಗುರುಪ್ರಸಾದ್‌ ಹೆಗಡೆಯವರ ಸಾರಂಗಿ ವಾದನದಲ್ಲಿ ರಾಗ್‌ ಮಾರೂ ಬಿಹಾಗ್‌ ಪ್ರಸ್ತುತಿಗೊಂಡಿತು. 

ಆಕಾಶವಾಣಿಯ ಕಲಾವಿದರಾದ ಉಸ್ತಾದ್‌ ರಫೀಕ್‌ ಖಾನ್‌ ಇವರಿಂದ ಸಿತಾರ್‌ ವಾದನ ನಡೆಯಿತು. ರಾಗ್‌ ಕೌನ್ಸಿàಕಾನಡಾ, ಹಾಗೂ ಮಿಶ್ರ ಶಿವರಂಜಿನಿಯಲ್ಲಿ ಒಂದು ಧುನ್‌ ಸುಂದರವಾಗಿ ಮೂಡಿ ಬಂದವು. ಕೊನೆಯ ಕಛೇರಿಯಲ್ಲಿ ಹಿರಿಯ ಕಲಾವಿದ ಡಾ| ಪಂಡಿತ್‌ ರಾಮ್‌ ದೇಶಪಾಂಡೆಯವರು ಜೋಗ್‌, ಕಾಫಿ ಕಾನಡಾ, ಹಿಂದೋಳ್‌ ಪಂಚಮ್‌, ಭೈರವಿ ರಾಗಗಳನ್ನು ಪ್ರಸ್ತುತಪಡಿಸಿದರು. 

    ತಬಲಾದಲ್ಲಿ ಗುರುಮೂರ್ತಿ ವೈದ್ಯ, ಡಾ| ಉದಯ್‌ ಕುಲಕರ್ಣಿ , ಭಾರವಿ ದೇರಾಜೆ ಸುರತ್ಕಲ್‌, ಗಜಾನನ ಹೆಗಡೆ ಗಿಳಿಗುಂಡಿ ಹಾಗೂ ಹಾರ್ಮೋನೀಯಮ್‌ನಲ್ಲಿ ಗುರುಪ್ರಸಾದ್‌ ಹೆಗಡೆ ಮತ್ತು ಭರತ್‌ ಹೆಗಡೆ ಹೆಬ್ಬಲಸು ಹಾಗೂ ಸಾರಂಗಿಯಲ್ಲಿ ಗುರುಪ್ರಸಾದ್‌ ಹೆಗಡೆ ಸಾಥ್‌ ನೀಡಿದರು.

 ವಸುಧಾ

Advertisement
Advertisement

Udayavani is now on Telegram. Click here to join our channel and stay updated with the latest news.

Next