ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಸಿನೆಮಾ ಹಿನ್ನೆಲೆ ಗಾಯಕಿ ಸುಶ್ಮಿತಾ ಆತ್ಮಹತ್ಯೆ ಪ್ರಕರಣ ಸಂಬಂಧ ಆಕೆಯ ಪತಿ ಸಹಿತ ಮೂವರು ಆರೋಪಿಗಳನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.
ಸುಶ್ಮಿತಾ ಪತಿ ಶರತ್ ಕುಮಾರ್, ಆತನ ದೊಡ್ಡಮ್ಮ ವೈದೇಹಿ ಮತ್ತು ಸಹೋದರಿ ಗೀತಾ ಬಂಧಿತರು. ಆರೋಪಿಗಳು ಕೃತ್ಯ ಎಸಗಿದ ಬಳಿಕ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ತಲೆಮರೆಸಿಕೊಂಡಿದ್ದು, ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಪತಿ ಕಿರುಕುಳಕ್ಕೆ ಬೇಸತ್ತ ಸುಶ್ಮಿತಾ ಫೆ.17ರಂದು ನಾಗರಬಾವಿಯಲ್ಲಿರುವ ತಾಯಿ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೂ ಮೊದಲು ಆರೋಪಿಗಳ ವಿರುದ್ಧ ತಾಯಿ ಮತ್ತು ಸಹೋದರನಿಗೆ ಕಳುಹಿಸಿರುವ ವಾಟ್ಸ್‌ಆ್ಯಪ್ ಸಂದೇಶ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಿದೆ ಎಂದು ಪೊಲೀಸರು ಹೇಳಿದರು.
ಸುಶ್ಮಿತಾ ಆತ್ಮಹತ್ಯೆಗೂ ಮುನ್ನ ತಾಯಿ ಮತ್ತು ಸಹೋದರನ ವಾಟ್ಸ್ ಆ್ಯಪ್‌ಗೆ ಸಂದೇಶ ಕಳುಹಿಸಿ, “ಪತಿ ಶರತ್ ಕುಮಾರ್, ಆತನ ದೊಡ್ಡಮ್ಮ ಮತ್ತು ಸಹೋದರಿಯ ಮಾತು ಕೇಳಿಕೊಂಡು ಚಿತ್ರಹಿಂಸೆ ಕೊಡುತ್ತಿ¨ªಾನೆ. ಅವರನ್ನು (ಪತಿ, ಆತನ ಕುಟುಂಬದವರನ್ನು) ಸುಮ್ಮನೇ ಬಿಡಬೇಡಿ. ಬಿಟ್ಟರೆ, ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ. ದಯವಿಟ್ಟು ಕ್ಷಮಿಸು ಅಮ್ಮ’ ಎಂದು ಬರೆದಿದ್ದರು.
ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳು ಮಂಡ್ಯ ಜಿÇÉೆಯ ಪಾಂಡವಪುರದಲ್ಲಿ ಸಂಬಂಧಿಕರ ಮನೆಯಲ್ಲಿ ಅಡಗಿಕೊಂಡಿದ್ದರು. ಫೆ. 17ರ ನಂತರ ಈ ಮೂವರು ಮೊಬೈಲ್ ಬಳಸಿಲ್ಲ. ಮೊಬೈಲ್ ಸ್ವಿಚ್x ಆಫ್ ಮಾಡಿಕೊಂಡಿದ್ದರು. ಹೀಗಾಗಿ ಶರತ್‌ಕುಮಾರ್ ಪರಿಚಯಸ್ಥರೊಬ್ಬರ ಮೂಲಕ ಆತನ ಸಂಬಂಧಿಕರನ್ನು ಸಂಪರ್ಕಿಸಿದಾಗ ಆರೋಪಿಗಳು ಪಾಂಡವಪುರದಲ್ಲಿ ಅವಿತುಕೊಂಡಿರುವ ಮಾಹಿತಿ ಸಿಕ್ಕಿತ್ತು. ಶನಿವಾರ ಬೆಳಗ್ಗೆ ಆರೋಪಿಗಳನ್ನು ಬಂಧಿಸಲಾಗಿದೆ. ಹಾಗೆಯೇ ಇದುವರೆಗೂ ಮೂವರಿಗೆ ಆಶ್ರಯ ನೀಡಿದ್ದ ಆತನ ಸಂಬಂಧಿಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ಹೇಳಿದರು.
ವರದಕ್ಷಿಣೆ ಹಣಕ್ಕಾಗಿ ಪೀಡಿಸುತ್ತಿದ್ದ ಪತಿ ಶರತ್ ಕುಮಾರ್ ಇದುವರೆಗೂ ಪತ್ನಿ ಸುಷ್ಮಿತಾ ಜತೆ ದೈಹಿಕ ಸಂಪರ್ಕ ಕೂಡ ಮಾಡಿರಲಿಲ್ಲ ಎನ್ನಲಾಗಿದೆ. ಆಕೆ ತನ್ನ ಸಂಬಳವನ್ನು ಪೂರ್ತಿಯಾಗಿ ಕೊಡುತ್ತಿದ್ದರೂ, ಇನ್ನಷ್ಟು ಹಣ ತರುವಂತೆ ಪೀಡಿಸುತ್ತಿದ್ದ. ನಾಲ್ಕೈದು ಬಾರಿ ತಡರಾತ್ರಿಯೇ ಮನೆಯಿಂದ ಹೊರ ಹಾಕಿದ್ದಾನೆ ಎಂಬುದು ಗೊತ್ತಾಗಿದೆ.
ವಾಹನ ತಯಾರಿಕಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶರತ್ ಕುಮಾರ್ ಹಾಗೂ ಚನ್ನರಾಯನಪಟ್ಟಣದ ಸುಷ್ಮಿತಾ ಜತೆ 2018ರಲ್ಲಿ ಮದುವೆ ಆಗಿದ್ದ. ದಂಪತಿ, ಕುಮಾರಸ್ವಾಮಿ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು ಎಂದು ಪೊಲೀಸರು ಹೇಳಿದರು.
ಡೆತ್‌ನೋಟ್ ಪ್ರಮುಖ ಸಾಕ್ಷ್ಯ
ಪತಿ ಕಿರುಕುಳಕ್ಕೆ ಬೇಸತ್ತ ಸುಶ್ಮಿತಾ ಫೆ.17ರಂದು ನಾಗರಬಾವಿಯಲ್ಲಿರುವ ತಾಯಿ ಮನೆಗೆ ಬಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೂ ಮೊದಲು ಆರೋಪಿಗಳ ವಿರುದ್ಧ ತಾಯಿ ಮತ್ತು ಸಹೋದರನಿಗೆ ಕಳುಹಿಸಿರುವ ವಾಟ್ಸ್‌ಆ್ಯಪ್ ಸಂದೇಶ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಿದೆ ಎಂದು ಪೊಲೀಸರು ಹೇಳಿದರು.