Advertisement

ಪ್ಲಾಸ್ಟಿಕ್‌ ಬಳಕೆ ನಮ್ಮಲ್ಲಿ ಇಷ್ಟು !

09:17 AM Oct 03, 2019 | Team Udayavani |

ವಿಶ್ವಸಂಸ್ಥೆಯ ವರದಿಯ ಪ್ರಕಾರ ಜಗತ್ತಿನಾದ್ಯಂತ ಪ್ರತಿ ವರ್ಷ ಸುಮಾರು 5 ಲಕ್ಷ ಕೋಟಿ ಪ್ಲಾಸ್ಟಿಕ್‌ ಬ್ಯಾಗುಗಳನ್ನು ಬಳಸಲಾಗುತ್ತದೆ. ಇದು ಪರಿಸರ ಮತ್ತು ಜೀವಿಗಳಿಗೆ ಮಾರಕವಾಗಿದೆ. ಜಗತ್ತಿನಲ್ಲಿ ಪ್ರಸ್ತುತ ಇರುವ ಪ್ಲಾಸ್ಟಿಕ್‌ಗಳ ಪೈಕಿ ಶೇ. 40 ಪ್ಲಾಸ್ಟಿಕ್‌ “ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌’ ಆಗಿದೆ. ಇಂತಹ ಪ್ಲಾಸ್ಟಿಕ್‌ಗಳು ಒಮ್ಮೆ ಬಳಕೆಯಾದ ಬಳಿಕ ಅವುಗಳು ತ್ಯಾಜ್ಯವಾಗಿ ಬದಲಾಗುತ್ತವೆ. ಸಂಶೋಧನೆಯ ಪ್ರಕಾರ 20ನೇ ಶತಮಾನದ ಉತ್ತರಾರ್ಧದ ಬಳಿಕ ಉತ್ಪಾದನೆಯಾದ ಒಟ್ಟು ಪ್ಲಾಸ್ಟಿಕ್‌ಗಳ ಪೈಕಿ ಶೇ. 79 ಪ್ಲಾಸ್ಟಿಕ್‌ ಪರಿಸರವನ್ನು ಸೇರಿವೆ.

Advertisement

260000 ಟನ್‌
ಭಾರತ ಪ್ರತಿ ದಿನ 26,000 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪಾದನೆ. ಇದರಲ್ಲಿ ದಿಲ್ಲಿ ಪಾಲು ಅತೀ ಹೆಚ್ಚು.

4.4 ಲಕ್ಷ ಟನ್
2017-18ರ ಸಿಪಿಸಿಬಿ ವರದಿ ಅನ್ವಯ ದೇಶದಲ್ಲಿಂದು ವರ್ಷದಲ್ಲಿ ಉತ್ಪಾದನೆಯಾಗುವ ಪ್ಲಾಸ್ಟಿಕ್‌.

15 ಮಿಲಿಯನ್ ಟನ್
ಭಾರತದಿಂದ ವರ್ಷದಲ್ಲಿ ಸಮುದ್ರಕ್ಕೆ ಸೇರುವ ಪ್ಲಾಸ್ಟಿಕ್‌ ತ್ಯಾಜ್ಯಗಳು

5 ಗ್ರಾಂ ಪ್ಲಾಸ್ಟಿಕ್‌
ಮಾನವ ಪ್ರತಿ ವಾರ ಸುಮಾರು 5 ಗ್ರಾಂ. ನಷ್ಟು ಪ್ಲಾಸ್ಟಿಕ್‌ ತನಗರಿವಿಲ್ಲದೇ ಸೇವಿಸುತ್ತಾನೆ. ಎಂದರೆ ಒಂದು ಕ್ರೆಡಿಟ್‌ ಕಾರ್ಡ್‌ನ ಗಾತ್ರಕ್ಕೆ ಸಮ.

Advertisement

5,800 ಮಿಲಿಯನ್‌ ಟನ್‌
1950ರ ಬಳಿಕ 5,800 ಮಿಲಿಯನ್‌ ಟನ್‌ ಅಂದರೆ 58 ಕೋಟಿ ಟನ್‌ ಸಿಂಗಲ್‌ ಯ್ಯೂಸ್‌ ಪ್ಲಾಸ್ಟಿಕ್‌ ಉತ್ಪಾದನೆಯಾಗಿದೆ.

1 ಕೋಟಿ ಟನ್‌ ಸಮುದ್ರಕ್ಕೆ
ಪ್ರತಿ ವರ್ಷ ಸಮುದ್ರಕ್ಕೆ 48 ಲಕ್ಷದಿಂದ 1 ಕೋಟಿ ಟನ್‌ ಪ್ಲಾಸ್ಟಿಕ್‌ ಸೇರುತ್ತವೆ. ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣದಲ್ಲಿ ಶೇ. 10 ಹೆಚ್ಚಾಗುತ್ತಿದೆ.

ಶೇ. 44 ಹೆಚ್ಚು
21ನೇ ಶತಮಾನದಲ್ಲಿ 44 ಶೇ. ಪ್ಲಾಸ್ಟಿಕ್‌ ಉತ್ಪಾದನೆ ಅಧಿಕಗೊಂಡಿದೆ. ಇವುಗಳಲ್ಲಿ ಬಹುತೇಕ ಪ್ಲಾಸ್ಟಿಕ್‌ಗಳು ತ್ಯಾಜ್ಯವಾಗಿವೆ.

40%
ಜಗತ್ತಿನಲ್ಲಿ ಪ್ರಸ್ತುತ ಇರುವ ಪ್ಲಾಸ್ಟಿಕ್‌ಗಳ ಪೈಕಿ ಶೇ. 40 ಪ್ಲಾಸ್ಟಿಕ್‌ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ಆಗಿದೆ.

79%
ಈ ತನಕ ಉತ್ಪಾದನೆಯಾದ ಪ್ಲಾಸ್ಟಿಕ್‌ಗಳ ಪೈಕಿ ಶೇ. 79 ಪ್ಲಾಸ್ಟಿಕ್‌ ಪರಿಸರವನ್ನು
ಸೇರಿವೆ.

4 ಮೌಂಟ್‌ ಎವರೆಸ್ಟ್‌
ಈಗಾಗಲೇ 4 ಎವರೆಸ್ಟ್‌ ಗಳಷ್ಟು ಗಾತ್ರದ ಪ್ಲಾಸ್ಟಿಕ್‌ ತ್ಯಾಜ್ಯ ಸೃಷ್ಟಿಯಾಗಿದೆ.

ದಿಲ್ಲಿ 408.27(10.14%)
ದೇಶದಲ್ಲಿ ಉತ್ಪಾದನೆಯಾಗುವ ಪ್ಲಾಸ್ಟಿಕ್‌ ತ್ಯಾಜ್ಯಗಳ ಪೈಕಿ ಅರ್ಧದಷ್ಟು ಇಲ್ಲಿವೆ.

ಮುಂಬಯಿ 408.27 (6.28%)
ಬೆಂಗಳೂರು 313.72(11.6%
ಕೋಲ್ಕತಾ 425.72 (11.6%)
ಚೆನ್ನೈ  429.39 (9.54%)

Advertisement

Udayavani is now on Telegram. Click here to join our channel and stay updated with the latest news.

Next