Advertisement
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಉಸ್ತುವಾರಿ ಸದಸ್ಯ ಹಾಗೂ ಉಪ ಲೋಕಾಯುಕ್ತ ಸುಭಾಷ್ ಬಿ.ಆಡಿ ಅವರು ಪ್ಲಾಸ್ಟಿಕ್ ನಿಷೇಧ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಕಟ್ಟು ನಿಟ್ಟಿನ ಸೂಚನೆ ನೀಡಿದ ನಂತರ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಅಭಿಯಾನ ಚುರುಕುಗೊಂಡಿದೆ.
Related Articles
Advertisement
ಪ್ಲಾಸ್ಟಿಕ್ ನಿಷೇಧ ಕ್ರಮಗಳ ಅನುಷ್ಠಾನಕ್ಕೆ ಹಾಸನ ನಗರಸಭೆ 4 ತಂಡಗಳನ್ನು ರಚನೆ ಮಾಡಿದೆ. ಆರೋಗ್ಯ ನಿರೀಕ್ಷರ ನೇತೃತ್ವದ ಈ ತಂಡ, ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ನಿಷೇಧಿತ ಪ್ಲಾಸ್ಟಿಕ್ ಮಾರಾಟದ ತಪಾಸಣೆ ಮಾಡುತ್ತಿವೆ. ಹಾಗಾಗಿ ಪ್ಲಾಸ್ಟಿಕ್ ಬ್ಯಾಗ್‌ಗಳ ಬಳಕೆ ಶೇ.80 ಕಡಿಮೆಯಾಗಿದೆ. ಅ.8 ರಂದು ಈರುಳ್ಳಿ ವ್ಯಾಪಾರಿಯೊಬ್ಬರು ಪ್ಲಾಸ್ಟಿಕ್ ಬ್ಯಾಗ್‌ಗಳ ಬಳಕೆ ಮಾಡುತ್ತಿದ್ದಾಗ ದಾಳಿ ನಡೆಸಿ ಈರುಳ್ಳಿಯನ್ನೂ ವಶ ಪಡಿಸಿಕೊಂಡು ಕ್ರಮ ಕೈಗೊಂಡಿದ್ದೇವೆ ಎಂದು ಹಾಸನ ನಗರಸಭೆ ಆಯುಕ್ತ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಪ್ಲಾಸ್ಟಿಕ್ ಮುಕ್ತ ಹಾಸನಾಂಬ ಜಾತ್ರೆ: ಹಾಸನದ ಅ.17 ರಿಂದ ಹಾಸನಾಂಬ ಜಾತ್ರಾ ಮಹೋತ್ಸವ ಆರಂಭವಾಗಲಿದೆ. ಜಾತ್ರೆ ಹಿನ್ನೆಲೆಯಲ್ಲಿ ಹಾಸನಾಂಬ ದೇವಾಲಯದ ಆವರಣವನ್ನು ಪ್ಲಾಸ್ಟಿಕ್ ಮುಕ್ತ ವಲಯವೆಂದು ಘೋಷಣೆ ಮಾಡಲಾಗುವುದು. ದೇಗುಲ ಪರಿಸರದ ಅಂಗಡಿಗಳ ಮಾಲಿಕರು ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ರಸ್ತೆ ಬದಿ ತಾತ್ಕಾಲಿಕವಾಗಿ ಅಂಗಡಿ ಹಾಕುವವರೂ ಪ್ಲಾಸ್ಟಿಕ್ ಕವರ್ ಬಳಸದಂತೆ ಎಚ್ಚರ ವಹಿಸಲಾಗುವುದು ಎಂದರು.
ಲೋಟ,ಬಾಟಲ್, ಪೊಟ್ಟಣ ನಿಂತಿಲ್ಲ : ಹೋಟೆಲ್‌ಗಲ್ಲಿ ತಿನಿಸುಗಳ ಪಾರ್ಸಲ್‌ಗೆ ಪಾಸ್ಟಿಕ್ ಡಬ್ಬಿಗಳು (ಕಂಟೈನರ್‌ಗಳು) ಬಳಕೆ ಯಾಗುತ್ತಿವೆ. ಪ್ಲಾಸ್ಟಿಕ್ ನಿಷೇಧವೆಂದರೆ ಕೇವಲ ಪ್ಲಾಸ್ಟಿಕ್ ಬ್ಯಾಗ್ ನಿಷೇಧವಷ್ಟೇ ಎನ್ನುವಂತಾಗಿದೆ. ಪ್ಲಾಸ್ಟಿಕ್ ಲೋಟ, ನೀರಿನ ಬಾಟೆಲ್, ವಿವಿಧ ಬ್ರ್ಯಾಂಡ್‌ನ ಸಿದ್ಧ ತಿನಿಸುಗಳ ಪೊಟ್ಟಣಗಳು ಇನ್ನೂ ಪ್ಲಾಸ್ಟಿಕ್ ಕವರ್‌ಗಳಲ್ಲಿ ಪೂರೈಕೆಯಾಗುತ್ತಿವೆ. ಆದರೂ ಅಧಿಕಾರಿಗಳು ಗಮನ ಹರಿಸುವುದಿರಲಿ, ಅವುಗಳ ಪೂರೈಕೆ ಮತ್ತು ಮಾರಾಟ ಮಾಡದಂತೆ ಜಾಗೃತಿ ಮೂಡಿಸುವ ಪ್ರಯತ್ನವನ್ನೂ ನಡೆಸಿಲ್ಲದಿರುವುದು ವಿಷಾದನೀಯ ಬೆಳವಣಿಗೆ.
ಪ್ಲಾಸ್ಟಿಕ್ ನಿಷೇಧ ಕುರಿತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಜಾಗೃತಿ ಅಗತ್ಯ. ನಗರ ಪ್ರದೇಶಗಳಲ್ಲಿ 10 ಸೇರಿ ಇದುವರೆಗೆ 80 ಬೀದಿ ನಾಟಕ ಪ್ರದರ್ಶನ ನೀಡಿ ಜಾಗೃತಿ ಮೂಡಿಸುತ್ತಿದ್ದೇವೆ. ಈಗ ಹೋಟೆಲ್‌ಗಳಿಂದ ತಿಂಡಿ ತರಲು, ಮಾಂಸ ದಂಡಿಗಳಿಗೂ ಪಾತ್ರೆ ಕೊಂಡೊಯ್ದು ಖರೀದಿ ಮಾಡುತ್ತಿದ್ದಾರೆ. –ಬಿ.ಟಿ.ಮಾನವ,ಬೀದಿ ನಾಟಕಗಳ ಹಿರಿಯ ಕಲಾವಿದ
-ಎನ್. ನಂಜುಂಡೇಗೌಡ