Advertisement

ಪ್ಲಾಸ್ಟಿಕ್‌ ಬಳಕೆಯ ದುಷ್ಪರಿಣಾಮ, ಆರೋಗ್ಯ ನೈರ್ಮಲ್ಯೀಕರಣ : ಮಾಹಿತಿ ಕಾರ್ಯಾಗಾರ

10:35 PM Sep 18, 2019 | Sriram |

ಕಾಪು: ಐ.ಎಸ್‌.ಪಿ.ಆರ್‌.ಎಲ್‌. ಪಾದೂರು ಯೋಜನಾ ವತಿಯಿಂದ ಕೇಂದ್ರ ಸರಕಾರದ “ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮದ ಅಂಗವಾಗಿ ಕಾಪು ಪುರಸಭೆಯಲ್ಲಿ ವಿವಿಧ ಸಂಘ-ಸಂಸ್ಥೆ, ಪುರಸಭೆ ಸಿಬಂದಿ ಮತ್ತು ರಿಕ್ಷಾ ಚಾಲಕರಿಗೆ ಪ್ಲಾಸ್ಟಿಕ್‌ ಬಳಕೆಯಿಂದಾಗುವ ದುಷ್ಪರಿಣಾಮ ಮತ್ತು ಪ್ರಥಮ ಚಿಕಿತ್ಸೆ ಮತ್ತು ಆರೋಗ್ಯ ನೈರ್ಮಲ್ಯೀಕರಣದ ಕುರಿತಾಗಿ ಸೆ. 18ರಂದು ವಿಶೇಷ ಮಾಹಿತಿ ಕಾರ್ಯಾಗಾರ ನಡೆಯಿತು.

Advertisement

ಮಾಹಿತಿ ಕಾರ್ಯಾಗಾರ ಉದ್ಘಾಟಿಸಿದ ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಮಾತನಾಡಿ, ನರೇಂದ್ರ ಮೋದಿಯವರು ಭಾರತದ ಪ್ರಧಾನಮಂತ್ರಿಯಾದ ಬಳಿಕ “ಸ್ವಚ್ಛತಾ ಹೀ ಸೇವಾ’ ಎಂಬ ವಿನೂತನ ಕಾರ್ಯಕ್ರಮ ಅನುಷ್ಠಾನಕ್ಕೆ ಬಂದಿದ್ದು, ಅದರ ಮೂಲಕವಾಗಿ ಎಲ್ಲೆಡೆ ಜನಜಾಗೃತಿ ರೂಪಿಸಲಾಗುತ್ತಿದೆ. ಈ ಕಾರಣದಿಂದಾಗಿ ದೇಶದ ಶೇ. 22ರಷ್ಟು ಭಾಗ ಸ್ವತ್ಛ ಭಾರತವಾಗಿ ಮೂಡಿಬರುವಂತಾಗಿದೆ. ಸ್ವಚ್ಛತೆ ಕಾಪಾಡುವಲ್ಲಿ ನಾಗರಿಕರಲ್ಲಿ ಇಚ್ಛಾಶಕ್ತಿಯ ಕೊರತೆಯಿದ್ದು, ನಮ್ಮ ಮನೆ, ಪರಿಸರ, ಗ್ರಾಮ, ಪಟ್ಟಣವನ್ನು ಸ್ವಚ್ಛವಾಗಿರಿಸಲು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಲ್ಲೂ ಜಾಗೃತಿಯ ಅಗತ್ಯವಿದೆ ಎಂದರು.

ಯೇನಪೊಯ ಆಸ್ಪತ್ರೆಯ ನಿವೃತ್ತ ಮೆಡಿಕಲ್‌ ಸೂಪರಿಂಟೆಂಡೆಂಟ್‌ ಡಾ| ರಾಮಚಂದ್ರ ಭಟ್‌ ಮಾತನಾಡಿ, ಆರೋಗ್ಯದ ಕುರಿತಾಗಿ ನಾವು ನಿರಂತರ ಜ್ಞಾನ ಹೊಂದಿದ್ದರೆ ಮಾತ್ರ ನಮ್ಮಿಂದ ಮನುಷ್ಯನ ಜೀವ ಉಳಿಸಲು ಸಾಧ್ಯ. ಹಣ, ಬಟ್ಟೆ, ಚಹಾ, ಉದ್ಯೋಗ ಕೊಟ್ಟರೆ ಅದನ್ನು ಯಾರೂ ಯಾವತ್ತೂ ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಅದುವೇ ಸಾರ್ವಜನಿಕ ಜೀವನದಲ್ಲಿ ನಾವು ಯಾರಿಗಾದರೂ ಪ್ರಥಮ ಚಿಕಿತ್ಸೆ ನೀಡಿ, ಪ್ರಾಣಾಪಾಯದಿಂದ ಪಾರು ಮಾಡಿದರೆ ಅದು ಜೀವಮಾನ ಪರ್ಯಂತ ನೆನಪಿನಲ್ಲಿಟ್ಟುಕೊಳ್ಳುವ ಸೇವೆಯಾಗಿ ಗುರುತಿಸಲ್ಪಡುತ್ತದೆ. ಎಂದರು.

ಪಾದೂರು ಐ.ಎಸ್‌.ಪಿ.ಆರ್‌.ಎಲ್‌. ಯೋಜನಾ ಘಟಕದ ಸಹಾಯಕ ಮ್ಯಾನೇಜರ್‌ ವಿಪಿನ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಕಾಪು ಪುರಸಭೆಯ ಪರಿಸರ ಅಭಿಯಂತರ ರವಿಪ್ರಕಾಶ್‌, ಪುರಸಭೆಯ ಸಿಬಂದಿ, ಮಜೂರು ಮತ್ತು ಕಾಪು ಪರಿಸರದ ರಿಕ್ಷಾ ಚಾಲಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಐ.ಎಸ್‌.ಪಿ.ಆರ್‌.ಎಲ್‌. ಆಡಳಿತ ವಿಭಾಗದ ಸಂಯೋಜಕ ಮಿಲನ್‌ ಕಾರಂತ್‌ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಪ್ಲಾಸ್ಟಿಕ್‌ ಬಳಕೆಯಿಂದ ಮಾರಕ ಕಾಯಿಲೆ
ಪ್ಲಾಸ್ಟಿಕ್‌ ಸ್ವಚ್ಛತೆ ಎಂದರೆ ಅದು ಮನೆಯಿಂದಲೇ ಆರಂಭಗೊಳ್ಳಬೇಕಾದ ನೈಜ ಪ್ರಕ್ರಿಯೆಯಾಗಿದೆ. ಪ್ಲಾಸ್ಟಿಕ್‌ ವಸ್ತುಗಳ ಬಳಕೆಯಿಂದ ಕ್ಯಾನ್ಸರ್‌ ಮೊದಲಾದ ಮಾರಕ ಖಾಯಿಲೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಪ್ಲಾಸ್ಟಿಕ್‌ ಬಳಕೆಯಿಂದ ಕೇವಲ ಮನುಷ್ಯ ಮಾತ್ರವಲ್ಲದೇ ಪರಿಸರ, ಜಲಚರ, ನೀರು, ಪ್ರಾಣಿ, ಪಕ್ಷಿಗಳ ಸಂತತಿಯೂ ನಾಶದ ಭೀತಿಯಲ್ಲಿದೆ. ಈ ಬಗ್ಗೆ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ.
-ರಾಯಪ್ಪ, ಮುಖ್ಯಾಧಿಕಾರಿ, ಕಾಪು ಪುರಸಭೆ

Advertisement

ಮೆಮೊರಿ ಕಾರ್ಡ್‌ಗೆ ಸೀಮಿತವಾಗುತ್ತಿದೆ ಮನುಷ್ಯನ ಜ್ಞಾನ ಶಕ್ತಿ
ಜ್ಞಾನ ಮತ್ತು ಜ್ಞಾಪಕ ಶಕ್ತಿ ಮನುಷ್ಯನ ಜೀವನದಲ್ಲಿ ಅತ್ಯಂತ ಪರಿಣಾಮಕಾರಿಯಾದ ಪಾತ್ರ ನಿರ್ವಹಿಸುತ್ತವೆ. ಆದರೆ ಇತೀ¤ಚಿನ ದಿನಗಳಲ್ಲಿ ಮನುಷ್ಯನ ಜ್ಞಾಪನಾ ಶಕ್ತಿ ಎನ್ನುವುದು ಮೊಬೈಲ್‌ನ ಮೆಮೋರಿ ಕಾರ್ಡ್‌ನೊಳಗೆ ಮಾತ್ರ ತುಂಬಿ ಹೋಗಿದೆ. ಅತಿಯಾದ ಮೊಬೈಲ್‌ ಬಳಕೆ ಮನುಷ್ಯನ ಶ್ರವಣ ಶಕ್ತಿ, ಜ್ಞಾಪಕ ಶಕ್ತಿ ಸಹಿತ ಇತರ ಅಂಗಾಂಗಗಳಿಗೆ ಹಾನಿಯುಂಟು ಮಾಡಿದರೆ, ಮೊಬೈಲ್‌ನ್ನು ಬಟ್ಟೆ, ಕಿಸೆ ಇತ್ಯಾದಿ ಕಡೆಗಳಲ್ಲಿ ಇಡುವುದರಿಂದ ಮನುಷ್ಯ ನಿರ್ವೀರ್ಯನಾಗಿ ಬದುಕುವ ಸಾಧ್ಯತೆಗಳಿವೆ. ಶೇ. 50ರಷ್ಟು ಯುವ ಜನರು ಈ ತೊಂದರೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ನಮ್ಮ ಮನೆಯ ಮಕ್ಕಳಿಗೆ ನಾವು ಎಚ್ಚರಿಕೆ ನೀಡಬೇಕು.
-ಡಾ| ರಾಮಚಂದ್ರ ಭಟ್‌, ನಿವೃತ್ತ ಮೆಡಿಕಲ್‌ ಆಫೀಸರ್‌,
ಕುದುರೆಮುಖ ಕಬ್ಬಿಣ ಕಾರ್ಖಾನೆ

Advertisement

Udayavani is now on Telegram. Click here to join our channel and stay updated with the latest news.

Next