Advertisement
ಅವರು ಶನಿವಾರ ಕೋಡಿಯ ಕಡಲ ಕಿನಾರೆಯಲ್ಲಿ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ವತಿಯಿಂದ 50ನೇ ವಾರದ ಸ್ವತ್ಛತಾ ಆಂದೋಲನದ ಹಿನ್ನೆಲೆಯಲ್ಲಿ ಆಯೋಜಿಸಿದ ಎರಡು ದಿನಗಳ “ನಿರ್ವಾಣ 2020′ ಬೀಚ್ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇಲ್ಲಿನ ಕೋಡಿ ಬೀಚ್ ಸೀವಾಕ್ ಆದ ಬಳಿಕ ದಿನದಿಂದ ದಿನಕ್ಕೆ ಜನ ಮನ್ನಣೆ ಗಳಿಸುತ್ತಿದ್ದು, ಪ್ರತಿ ನಿತ್ಯ ಇಲ್ಲಿಗೆ ಬರುವ ಪ್ರವಾಸಿಗರು, ವಿಹಾರಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹಾಗೆಯೇ ಬೀಚ್‌ನ ಸ್ವಚ್ಛತೆ ಕಾಪಾಡುವುದು ಕೂಡ ಅಗತ್ಯ. ಆ ನಿಟ್ಟಿನಲ್ಲಿ ಕ್ಲೀನ್ ಕುಂದಾಪುರ ತಂಡವು ಉತ್ತಮ ಕಾರ್ಯ ಮಾಡುತ್ತಿದೆ ಎಂದು ಭಾರತೀಯ ರೆಡ್‌ಕ್ರಾಸ್‌ನ ಕುಂದಾಪುರ ಘಟಕದ ಸಭಾಪತಿ ಜಯಕರ್ ಶೆಟ್ಟಿ ಹೇಳಿದರು.
Related Articles
ಶಿವರಾಮ ಶೆಟ್ಟಿ, ಆಶಾ ಶೆಟ್ಟಿ, ಶಶಿಧರ, ಆದ್ಯಂತ್, ಅಭಿನಂದನ್, ರಕ್ಷಾ, ಅನುದೀಪ್ ಹೆಗಡೆ, ಸಚಿನ್ ನಕ್ಕತ್ತಾಯ, ಅನಿಲ್ ಕುಮಾರ್ ಶೆಟ್ಟಿ, ವಿಖ್ಯಾತ್, ಸುವಿತ್, ಅವೀಶ್, ಶ್ರೀಚರಣ್ ಇದ್ದರು. ರವಿಕಿರಣ್ ನಿರ್ವಹಿಸಿದರು.
Advertisement
ಪ್ಲಾಸ್ಟಿಕ್ ಮುಕ್ತ ಉತ್ಸವಕೋಡಿಯ ಕಡಲ ಕಿನಾರೆಯಲ್ಲಿ ಆಯೋಜಿಸಿದ ಈ ಎರಡು ದಿನಗಳ ಕಾಲ ನಡೆಯುವ “ನಿರ್ವಾಣ -2020′ ಬೀಚ್ ಉತ್ಸವದಲ್ಲಿ ಪ್ರಮುಖ ಆಕರ್ಷಣೆಯೆಂದರೆ ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮ. ಇಲ್ಲಿ ಅಲಂಕಾರಕ್ಕಾಗಿ ಹಾಕಲಾದ ಎಲ್ಲ ವಸ್ತುಗಳು ಕಾಗದ, ಮತ್ತಿತರ ಪರಿಸರಕ್ಕೆ ಹಾನಿಯಿಲ್ಲದಂತಹ ವಸ್ತು, ಸಾಮಗ್ರಿಗಳನ್ನೇ ಬಳಸಲಾಗಿದೆ. ಇಲ್ಲಿ ತೆರೆಯಲಾದ ಎಲ್ಲ ಮಳಿಗೆಗಳಲ್ಲೂ ಪ್ಲಾಸ್ಟಿಕ್ ಮುಕ್ತ ವಸ್ತುಗಳನ್ನೇ ಮಾರಾಟಕ್ಕೆ ಇಡಲಾಗಿದೆ. ಜನಸ್ನೇಹಿ ಬೀಚ್‌ಗೆ ಯೋಜನೆ
ನಾನು ಇಲ್ಲಿಗೆ ಬಂದ ಅನಂತರ 40 ನೇ ವಾರದ ಕ್ಲೀನ್ ಕುಂದಾಪುರ ಸ್ವತ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದೆ. ಆಗ ಪ್ರೇರಣೆಗೊಂಡು, ನಮ್ಮ ಪೊಲೀಸರನ್ನು ಕೂಡ ಭಾಗಿಯಾಗುವಂತೆ ಸಲಹೆ ನೀಡಿದೆ. ಈಗ 50ನೇ ವಾರದ ಸ್ವತ್ಛತಾ ಆಂದೋಲನ ನಡೆಯುತ್ತಿದೆ. ಇದೊಂದು ಉತ್ತಮ ಸಂದೇಶ ಸಾರುವ ಉತ್ಸವವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇಲ್ಲಿ ಮತ್ತಷ್ಟು ಮೂಲ ಸೌಕರ್ಯ, ಜನಸ್ನೇಹಿಯಾಗಿಸಲು ಸಿಸಿಟಿವಿ ಇನ್ನಿತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕುರಿತಂತೆ ಶಾಸಕರು, ಪುರಸಭೆ ಸಹಕಾರದಲ್ಲಿ ಮಾಡಲು ಯೋಜನೆ ರೂಪಿಸಲಾಗುತ್ತಿದೆ.
-ಹರಿರಾಂ ಶಂಕರ್, ಎಎಸ್‌ಪಿ ಕುಂದಾಪುರ ಪರಿಸರ ಜಾಗೃತಿ
ಈ ಉತ್ಸವ ಪ್ಲಾಸ್ಟಿಕ್ ನಿರ್ಮೂಲನದ ಅವಶ್ಯಕತೆ ಹಾಗೂ ನಮ್ಮ ಸುತ್ತಮುತ್ತ ಇರಬೇಕಾದ ಸ್ವತ್ಛತೆ, ಕಸಗಳ ವಿಲೇವಾರಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶ ನಮ್ಮದು. ಮಹಿಳೆಯರಿಗೆ ಉತ್ತೇಜನ ಕೊಡುವಂತಹ ನಿಟ್ಟಿನಲ್ಲಿ ಮಹಿಳಾ ಉದ್ಯಮಿಗಳ ವ್ಯಾಪಾರ ಮಳಿಗೆ, ಪರಿಸರ ಸ್ನೇಹಿ ಪದಾರ್ಥಗಳ ಮಾರಾಟ ಮಳಿಗೆ ತೆರೆಯಲಾಗಿದೆ. ಒಟ್ಟು 15 ಮಳಿಗೆಗಳು ಇಲ್ಲಿವೆ. 2-3 ಜನರಿಂದ ಆರಂಭಗೊಂಡ ಈ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಈಗ 30 ಮಂದಿಯ ತಂಡವಾಗಿದೆ. ಕಳೆದೊಂದು ವಾರದಿಂದ ಈ ಉತ್ಸವಕ್ಕೆ ಸಿದ್ಧತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡಲು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯ ಸಹಕಾರದ ಅಗತ್ಯವಿದೆ.
-ಡಾ| ರಶ್ಮಿ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್