Advertisement

ಪ್ಲಾಸ್ಟಿಕ್‌ ನಿಷೇಧಕ್ಕೆ ಆದೇಶವಿದ್ದರೂ ಬಳಕೆ

04:18 PM Jul 14, 2021 | Team Udayavani |

 

Advertisement

ಇನ್ನೂ ಸಂಪೂರ್ಣವಾಗಿ ನಿಷೇಧವಾಗಿಲ್ಲ ಪ್ಲಾಸ್ಟಿಕ್‌ „ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ವಸ್ತುಗಳ ಬಳಕೆ, ಮಾರಾಟ

  • ಕೆ.ಎಸ್‌.ಮಂಜುನಾಥ್‌

ಕುದೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ಲಾಸ್ಟಿಕ್‌ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಇನ್ನೂ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣವಾಗಿ ನಿಂತಿಲ್ಲ.

ಹೌದು, ಕುದೂರು ಗ್ರಾಪಂವ್ಯಾಪ್ತಿಯಪ್ರತಿಯೊಂದುಅಂಗಡಿ-ಮುಂಗಟ್ಟು ಗಳಲ್ಲಿ ಪ್ಲಾಸ್ಟಿಕ್‌ ಲೋಟ, ಕ್ಯಾರಿ ಬ್ಯಾಗ್‌, ಊಟದ ತಟ್ಟೆಗಳು ಸೇರಿದಂತೆವಿವಿಧ ರೀತಿಯಪ್ಲಾಸ್ಟಿಕ್‌ ವಸ್ತುಗಳ ಬಳಕೆ ಮತ್ತು ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದು, ಜಿಲ್ಲಾಧಿಕಾರಿಗಳ ಆದೇಶಕ್ಕೂ ಬೆಲೆ ಇಲ್ಲದಂತಾಗಿದೆ. ಪ್ಲಾಸ್ಟಿಕ್‌ ಮುಕ್ತ ಭಾರತಕ್ಕಾಗಿ ಸರ್ಕಾರಗಳು ಯುದ್ದೋಪಾದಿಯಲ್ಲಿಕಾರ್ಯಚರಣೆ ನಡೆಸಿಅರಿವು ಮೂಡಿಸುತ್ತಿದ್ದರೂ, ಮಾಗಡಿ ತಾಲೂಕಿನಲ್ಲಿ ಮಾತ್ರ ಪ್ಲಾಸ್ಟಿಕ್‌ ಬಳಕೆ ಜೊರಾಗಿಯೇ ನಡೆಯುತ್ತಿದೆ.

ಜಿಲ್ಲಾಧಿಕಾರಿಗಳ ಆದೇಶದಂತೆ ರಾಮನಗರ ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಗಿದೆ. ಆದರೆ, ಅಧಿಕಾರಿಗಳು ಕೇವಲ ರಾಮನಗರ, ಚನ್ನಪಟ್ಟಣದಲ್ಲಿ ಮಾತ್ರದಾಳಿಮಾಡಿ,ಪ್ಲಾಸ್ಟಿಕ್‌ವಶಪಡಿಸಿಕೊಳ್ಳುತ್ತಿದ್ದಾರೆ. ಆದರೆ, ಇತ್ತಕಡೆ ರಾಜಾರೋಷವಾಗಿ ಬಳಸುತ್ತಿದ್ದರೂ, ಇದುವರೆಗೂ ಅಧಿಕಾರಿಗಳೂ ಮಾಗಡಿ ತಾಲೂಕಿನಲ್ಲಿ ಪ್ಲಾಸ್ಟಿಕ್‌ ವಶಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

Advertisement

ನೀರಿಕ್ಷಿತ ಪ್ರಮಾಣದಲ್ಲಿ ನಿಷೇಧವಿಲ್ಲ: ಜಿಲ್ಲೆಯಲ್ಲಿ ಪರಿಸರ ಹಾಗೂ ಜೀವಿಗಳ ಪ್ರಾಣಕ್ಕೆ ಅಪಾಯವಿದೆ. ಹೀಗಾಗಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿ ಹೊರಡಿಸಿರುವ ಆದೇಶ ಕೇವಲ ನೋಟಿಸ್‌ಗೆ ಸೀಮಿತವಾಗಿದೆಯೇ? ಅಂಗಡಿಗಳ ಮೇಲೆ ದಾಳಿ ನೆಡೆಸಿ, ಒಂದಷ್ಟು ಪ್ಲಾಸ್ಟಿಕ್‌ ಚೀಲಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ವರದಿ ಬರುತ್ತಿದ್ದರೂ, ನೀರಿಕ್ಷಿತ ಪ್ರಮಾಣದಲ್ಲಿ ನಿಷೇಧವಾ ಗಿಲ್ಲ ಎಂಬ ಆರೋಪಕೇಳಿಬರುತ್ತಿದೆ.

ಯಾವುದು ನಿಷೇಧ: ಸರ್ಕಾರದ ಆದೇಶದಂತೆ ಮೈಕ್ರಾನಿಗಿಂತ ತೆಳುವಾದ ಪ್ಲಾಸ್ಟಿಕ್‌, ಕ್ಯಾರಿ ಬ್ಯಾಗ್‌, ಭಿತ್ತಿಪತ್ರ, ತೋರಣ, ಭಾವುಟ, ಫ್ಲೆಕ್ಸ್‌, ತಟ್ಟೆ, ಚಮಚ, ಊಟದ ಟೇಬಲ್‌ ಮೇಲೆ ಹರಡುವ ಪ್ಲಾಸ್ಟಿಕ್‌ ಹಾಳೆ, ಥರ್ಮಾಕೋಲ್‌ನಿಂದ ತಯಾರಾದ ವಸ್ತುಗಳ ಬಳಕೆ ನಿಷೇಧಿಸಲಾಗಿದೆ. ನಿಷೇಧವಿದ್ದರೂ ಮಾರಾಟ: ಜಿಲ್ಲಾಡಳಿತ ಪ್ಲಾಸ್ಟಿಕ್‌ ವಸ್ತುಗಳ ತಯಾರಿಕೆ ಹಾಗೂ ಮಾರಾಟ ಬಳಕೆ ನಿಷೇಧಿಸಿ 2019ರ ಅಕ್ಟೋಬರ್‌ 2ರಂದು ಆದೇಶ ಹೊರಡಿಸಿದೆ. ಆದರೂ, ರಾಮನಗರ ಜಿಲ್ಲೆಯಲ್ಲಿ ಇದುವರೆಗೂ ಅನುಷ್ಠಾನಗೊಂಡಿಲ್ಲ ಎಂದು ಅಂಕಿ ಅಂಶಗಳು ಸಾರುತ್ತಿವೆ. ಜಿಲ್ಲೆ ಹಾಗೂ ಗ್ರಾಮೀಣ ಭಾಗದಲ್ಲಿ ಇವತ್ತಿಗೂ ಮದುವೆ, ವಿವಿಧ ಸಮಾರಂಭ, ಅಂಗಡಿಗಳಲ್ಲಿ ರಾಜಾರೋಷವಾಗಿ ಗ್ರಾಹಕರಿಗೆ ವಸ್ತು ಗಳನ್ನು ಪ್ಲಾಸ್ಟಿಕ್‌ಕ್ಯಾರಿಬ್ಯಾಗ್‌ನಲ್ಲಿ ನೀಡಲಾಗುತ್ತಿದೆ.

ಪರಿಣಾಮಕಾರಿ ಅನುಷ್ಠಾನವಿಲ್ಲ:ಕಾಯ್ದೆ ಜಾರಿ ಬಳಿಕ ಆರಂಭದಲ್ಲಿ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ದಾಳಿ ನಡೆಸಿ ಪ್ಲಾಸ್ಟಿಕ್‌ ವಸ್ತುಗಳನ್ನು ವಶಕ್ಕೆಪಡೆಯಲಾಗಿತ್ತು. ಪೇಪರ್‌ ಬ್ಯಾಗ್‌ಗಳು ಜಿಲ್ಲೆಯ ಹಲವಡೆ ಕಂಡು ಬಂದವು. ಆದರೆ, ಅಧಿಕಾರಿಗಳು ಆರಂಭದಲ್ಲಿ ತೋರಿ ಸಿದ ಉತ್ಸಾಹ ಆನಂತರದಲ್ಲಿ ತೊರಲಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಇತ್ತೀಚೆಗೆ ಕೆಲ ದಿನಗಳಿಂದ ಜಿಲ್ಲೆಯ ವಿವಿಧೆಡೆ ದಾಳಿ ಮಾಡಿ, ಪ್ಲಸ್ಟಿಕ್‌ ವಸ್ತುಗಳನ್ನು ವಶಕ್ಕೆ ಪಡೆಯುತ್ತಿರುವುದು ಕೇಳಿ ಬರುತ್ತಿದ್ದರೂ ಕಾಟಾಚಾರದ ದಾಳಿ ಎಂಬಂತಾಗಿದೆ.

ನಿಷೇಧ ಕಡತಕ್ಕೆ ಸೀಮಿತ: ಜಿಲ್ಲೆಯಲ್ಲಿನ ಯಾವುದೇ ನಗರ, ಸ್ಥಳೀಯ ಸಂಸ್ಥೆಗಳು ಇದನ್ನು ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸಿಲ್ಲ. ಈ ಕಾಯ್ದೆ ಅನುಷ್ಠಾನಗೊಳಿಸಲು ಐದಾರು ಇಲಾಖೆಗಳು ಜಂಟಿಯಾಗಿ ಕಾರ್ಯನಿರ್ವಹಿಸಬೇಕು. ಇದರಲ್ಲಿ ಸ್ಥಳೀಯ ಸಂಸ್ಥೆಯ ಪಾತ್ರ ಮಹತ್ವದಾಗಿದೆ. ಆದರೆ, ಈ ಕುರಿತು ಸರಿಯಾಗಿ ಸಭೆ ನಡೆಯುತ್ತಿಲ್ಲ. ಹೀಗಾಗಿ ನಿಷೇಧ ಎನ್ನುವುದು ಬರೀ ಕಡತಕ್ಕೆ ಸೀಮಿತವಾಗಿದೆ ಎಂಬ ಸಂಶಯ ಮೂಡಿ ಬರುತ್ತಿದೆ.

ಜೀವಿಸಂಕುಲಕ್ಕೆ ಅಪಾಯ: ಮನೆಯಲ್ಲಿ ಉಳಿದ ಆಹಾರ ವಸ್ತುಗಳನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿ ಎಲ್ಲೆಂದರಲ್ಲಿ ಎಸೆಯುವ ಪರಿಣಾಮ, ಆ ಚೀಲಗಳಲ್ಲಿ ರುವ ಆಹಾರ ವಸ್ತುಗಳನ್ನು ತಿನ್ನಲು ಬಯಸುವ ಪ್ರಾಣಿ, ಪಕ್ಷಿಗಳು ಆಹಾರವನ್ನು ಪ್ಲಾಸ್ಟಿಕ್‌ ಸಮೇತ ನುಂಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿರುವ ಉದಾಹರಣೆಗಳು ಸಾಕಷ್ಟಿವೆ. ಒಟ್ಟಾರೆಯಾಗಿ ಪ್ಲಾಸ್ಟಿಕ್‌ ಬಳಕೆಯಿಂದ ಮಾನವನ ದೇಹ, ಪರಿಸರ, ಪ್ರಾಣಿ ಪಕ್ಷಿಗಳ ಜೀವಕ್ಕೆ ಅಪಾರ ಹಾನಿಯುಂಟು ಮಾಡುವಲ್ಲಿ ನಾವು ನಮಗೆ ತಿಳಿದೋ ತಿಳಿಯದೆಯೋ ಪ್ರಮುಖ ಪಾತ್ರ ವಹಿಸುತ್ತಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಂಡು ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಿ, ಅದಕ್ಕೆ ಪರ್ಯಾಯವಾಗಿ ಸಿಗುವ ವಸ್ತುಗಳನ್ನು ಬಳಸಿ ಮಾನವನ, ಪ್ರಾಣಿಗಳ ಆರೋಗ್ಯ ಹಾಗೂ ಪರಿಸರವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next