Advertisement
ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವಾಲಯ, ನೀತಿ ಆಯೋಗ ವತಿಯಿಂದ ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕರ್ ಸಮಿತಿ, ಲೀಡ್ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್, ಕಾರ್ಪೊ ರೇಶನ್ ಬ್ಯಾಂಕ್ ಸಹಿತ ಬ್ಯಾಂಕ್‌ಗಳು ದ.ಕ. ಜಿಲ್ಲಾಡ ಳಿತ ವತಿಯಿಂದ ಪುರಭವನದಲ್ಲಿ “ಮುದ್ರಾ ಪ್ರೋತ್ಸಾಹಕ ಅಭಿ ಯಾನ’ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ಲಾಸ್ಟಿಕ್ ಪಾರ್ಕ್ ಬಗ್ಗೆ ಈಗಾಗಲೇ ಘೋಷಣೆ ಯಾಗಿದೆ. ದ.ಕ. ಸಂಸದ ನಳಿನ್ ಈ ಬಗ್ಗೆ ಸತತ ಒತ್ತಡ ತಂದಿದ್ದಾರೆ. 30,000 ಮಂದಿಗೆ ಉದ್ಯೋಗ ನೀಡಬಹುದಾದ ಈ ಯೋಜನೆಯ ಅನುಷ್ಠಾನ ಪತ್ರವನ್ನು ನಳಿನ್ ಅವರಿಗೆ ಒಂದು ವಾರದೊಳಗೆ ಹಸ್ತಾಂತರಿಸಲಾಗುವುದು ಎಂದು ಅನಂತಕುಮಾರ್ ತಿಳಿಸಿದರು.
Related Articles
ಮುದ್ರಾ ಪೂರಕ ಮಳಿಗೆಗಳನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ಚೆಕ್ ನೀಡಿದ ಕೇಂದ್ರ ಸರಕಾರದ ಕೌಶಲಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಅವರು, ಪ್ಲಾಸ್ಟಿಕ್ ಪಾರ್ಕ್ ಯೋಜನೆ ಯಶಸ್ವಿಯಾಗಲು ಮಂಗಳೂರಿ ನಲ್ಲಿ ಸಿಐಒಪಿಇಟಿ (ಕೇಂದ್ರ ಪ್ಲಾಸ್ಟಿಕ್ ಎಂಜಿ ನಿಯ ರಿಂಗ್ ತಂತ್ರಜ್ಞಾನ ಸಂಸ್ಥೆ) ಸ್ಥಾಪನೆಯ ಅಗತ್ಯ ವಿದೆ. ಈ ತಂತ್ರಜ್ಞಾನವನ್ನು ಸ್ಥಳೀಯರು ಅರಿಯ ದಿದ್ದರೆ, ಹೊರ ರಾಜ್ಯದವರು ಬಳಸುವ ಸಾಧ್ಯತೆ ಗಳಿವೆ. ಈ ಸಂಸ್ಥೆಯ ಸ್ಥಾಪನೆಗೆ ಚಿಂತನೆ ನಡೆದಿದೆ ಎಂದರು. ಸಂಸದ ನಳಿನ್ ಕುಮಾರ್ ಅವರು ದ.ಕ. ಕ್ಷೇತ್ರವನ್ನು ಮಾದರಿಯ ಕ್ಷೇತ್ರವನ್ನಾಗಿ ರೂಪಿಸಿದ್ದಾರೆಂದು ಅಭಿನಂದಿಸಿದರು.
Advertisement
ನೇರ ಮುಂಗಡ ನೀಡಿ: ನಳಿನ್ಮುದ್ರಾ ಯೋಜನೆಯ ಫಲಾನುಭವಿಗಳು ಅರ್ಜಿ ಸಲ್ಲಿಸಿದ ಕೂಡಲೇ ಬ್ಯಾಂಕ್‌ಗಳು ನೇರ ವಾಗಿ ಮುಂಗಡ ನೀಡಬೇಕೆಂದು ಅಧ್ಯಕ್ಷತೆ ವಹಿಸಿದ್ದ ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಬ್ಯಾಂಕ್ ಅಧಿಕಾರಿಗಳು ಯಾವುದೇ ಸಬೂಬು ನೀಡಬೇಡಿ. ಅರ್ಜಿ ದಾರ ರಿಗೆ ಮಾರ್ಗದರ್ಶನ ನೀಡಿ. ಅವರು ಯಶಸ್ಸು ಪಡೆಯುವಂತೆ ನೋಡಿಕೊಳ್ಳಿ ಎಂದರು. ಯುಪಿಎ ಸರಕಾರದ ಅವಧಿಯಲ್ಲಿ ದ.ಕ.ಕ್ಕೆ
ಕೇವಲ 4,000 ಕೋಟಿ ರೂ. ಅನುದಾನ ನೀಡಿತ್ತು. ಆದರೆ ಪ್ರಧಾನಿ ಮೋದಿ ಅವರು ಎರಡೂವರೆ ವರ್ಷಗಳಲ್ಲಿ ಜಿಲ್ಲೆಗೆ 16,000 ಕೋಟಿ ರೂ. ಅಭಿವೃದ್ಧಿ ಅನುದಾನ ನೀಡಿದ್ದಾರೆ. ಅದಕ್ಕಾಗಿ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಸಿಂಡಿಕೇಟ್ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಮಲ್ಲಿಕಾರ್ಜುನ ರಾವ್, ಕಾರ್ಪೊರೇಶನ್ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ್ ಭಗತ್, ಕೇಂದ್ರ ವಿತ್ತ ಇಲಾಖೆಯ ನಿರ್ದೇಶಕ ಅಶೋಕ್ ಕುಮಾರ್ ಜೈನ್, ಪ್ರಭಾರ ಜಿಲ್ಲಾಧಿಕಾರಿ ಕುಮಾರ್, ಜಿಪಂ ಸಿಇಒ ಡಾ| ಎಂ. ಆರ್. ರವಿ ಉಪಸ್ಥಿತರಿದ್ದರು. ಸಿಂಡಿಕೇಟ್ ಬ್ಯಾಂಕಿನ ಮಹಾಪ್ರಬಂಧಕ ಸತೀಶ್ ಕಾಮತ್ ಸ್ವಾಗತಿಸಿದರು. ಉಪ ಮಹಾ ಪ್ರಬಂಧಕ ಡಿ.ಎಸ್. ಹಿರೇಮs… ಅವರು ಫಲಾನುಭವಿಗಳ ವಿವರ ನೀಡಿದರು. ಕಾರ್ಪ್ ಬ್ಯಾಂಕಿನ ಮಹಾಪ್ರಬಂಧಕ ಸಿ.ಕೆ. ಗೋಪಾಲ್ ಅವರು ವಂದಿಸಿದರು. ಸಾಲಮೇಳದ ವ್ಯಾಖ್ಯಾನ!
ದ.ಕ. ಜಿಲ್ಲೆಯಲ್ಲಿ ಮುದ್ರಾ ಕುರಿತ ಪ್ರೋತ್ಸಾಹಕ ಅಭಿಯಾನ ಔಚಿತ್ಯಪೂರ್ಣ ಎಂದು ಸಚಿವ ಅನಂತಕುಮಾರ್ ಹೇಳಿದರು. ಇಲ್ಲಿಯ ಜನತೆಗೆ “ಲೋನ್ ಮೇಳ’ದ ಬಗ್ಗೆ ತಿಳಿವಳಿಕೆ ಇದೆ. ಆದರೆ ಮುದ್ರಾ ಅಭಿಯಾನ ಈ ಲೋನ್‌ಮೇಳಕ್ಕಿಂತ ವಿಭಿನ್ನ ಎಂದರು. ಸಚಿವ ಅನಂತಕುಮಾರ್ ಹೆಗಡೆ ಕೂಡ ಲೋನ್‌ಮೇಳ ಬಗ್ಗೆ ಉಲ್ಲೇಖೀಸಿದರು. ಅವಿಶ್ರಾಂತ ಚೇತನ
ನಳಿನ್ ಕುಮಾರ್ ಕಟೀಲು ಅವರಿಗೆ ಸಮಸ್ತ ಜನತೆಯ ಪರವಾಗಿ ತಾನು “ಅವಿಶ್ರಾಂತ ಚೇತನ’ ಎಂಬ ಬಿರುದು ನೀಡುವುದಾಗಿ ಸಚಿವ ಅನಂತಕುಮಾರ್ ಹೇಳಿದರು. ಕ್ಷೇತ್ರದ ಅಭಿವೃದ್ಧಿ, ರಾಷ್ಟ್ರಪ್ರೇಮ, ಸಾಮಾಜಿಕ ಕಳಕಳಿಯ ನಳಿನ್ ಅವರ ಬದ್ಧತೆ ಶ್ಲಾಘನೀಯವೆಂದರು.