Advertisement

ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌!

02:23 AM Mar 26, 2021 | Team Udayavani |

ಮಂಗಳೂರು: ಪ್ಲಾಸ್ಟಿಕ್‌ ಸೇರಿದಂತೆ ಇತರ ವಸ್ತುಗಳಿಂದಾಗಿ ಕಡಲು ಮಲಿನವಾಗಿ ಜಲಚರಗಳಿಗೆ ಅಪಾಯ ಎದುರಾಗುತ್ತಿದೆ ಎಂಬ ಆತಂಕ ಇರುವಾಗಲೇ ಮಂಗಳೂರಿನಲ್ಲಿ ಬಲೆಗೆ ಸಿಕ್ಕಿದ ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಪತ್ತೆಯಾಗಿರುವುದು ಆಶ್ಚರ್ಯ ಮೂಡಿಸಿದೆ!

Advertisement

ಅತ್ತಾವರದ ಮೀನು ಮಾರಾಟದ ಮಳಿಗೆಯ ಸಿಬಂದಿ ಮುರು ಮೀನು (ರೀಫ್ ಕಾಡ್‌ ಫಿಶ್‌) ಕತ್ತರಿಸಿ ಶುಚಿಗೊಳಿಸುತ್ತಿದ್ದ ವೇಳೆ ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಪತ್ತೆಯಾಗಿದೆ. “ಜನರು ಪ್ಲಾಸ್ಟಿಕ್‌ಗಳನ್ನು ಸಮುದ್ರ, ನದಿ ಕೆರೆಗಳಿಗೆ ಎಸೆದಲ್ಲಿ ಮೀನಿನ ಸಂತತಿ ಮೇಲೆ ನೇರ ಪರಿಣಾಮ ಬೀರಲಿದೆ’ ಎಂದು ಸಾಮಾಜಿಕ ಜಾಲತಾಣದ ಮೂಲಕ ಅವರು ವಿಡಿಯೋ ಶೇರ್‌ ಮಾಡಿದ್ದಾರೆ.

ಆತಂಕದ ಮುನ್ಸೂಚನೆ :

ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಡೀನ್‌ ಡಾ| ಸೆಂಥಿಲ್‌ ವೇಲ್‌ ಅವರ ಪ್ರಕಾರ “ಪ್ಲಾಸ್ಟಿಕ್‌ಗಳು ನೀರಿನಲ್ಲಿ ಸೇರಿ ಕೆಲವು ಬಾರಿ ಸೂಕ್ಷ್ಮ ಕಣಗಳಾಗಿ ಪರಿವರ್ತನೆಯಾಗುತ್ತವೆ. ಮೀನು ಮರಿಗಳು ಅವುಗಳನ್ನು ತಿಂದು ಸಾಯುತ್ತವೆ. ಜತೆಗೆ ಮೀನುಗಾರಿಕೆ ಸಂದರ್ಭ ಟ್ರಾಲ್‌ ಬೋಟ್‌ಗಳ ಬಲೆಗಳು ಸಮುದ್ರದ ತಳಭಾಗವನ್ನು ತಲುಪುವಾಗ ಶೇ. 40ರಷ್ಟು ಪ್ಲಾಸ್ಟಿಕ್‌ಗಳು ಕೂಡ ಮೀನಿನ ಜತೆ ಬಲೆ ಸೇರುತ್ತವೆ. ಬಲೆಯನ್ನು ಮೇಲೆತ್ತುವಾಗ ಮೀನುಗಳು ಗಾಬರಿಯಲ್ಲಿ ನೀರಿನ ಜತೆ ಪ್ಲಾಸ್ಟಿಕ್‌ ನುಂಗುವ ಸಾಧ್ಯತೆ ಅಧಿಕವಿದೆ. ಹೀಗಾಗಿಯೇ ಸಮುದ್ರದಲ್ಲಿ ಬೂತಾಯಿ ಮೀನಿನ ಪ್ರಮಾಣ ಕಡಿಮೆಯಾಗುತ್ತಿದೆ. ಹವಾಮಾನ ಬದಲಾವಣೆ, ಮಾಲಿನ್ಯ ಹಾಗೂ ಪ್ಲಾಸ್ಟಿಕ್‌ನಿಂದ ಜಲಚರಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುದು ಆತಂಕದ ಮುನ್ಸೂಚನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next