Advertisement

ಪ್ಲಾಸ್ಟಿಕ್‌ ಮುಕ್ತ ಉಡುಪಿ ಸಂಕಲ್ಪ: ರಘುಪತಿ ಭಟ್‌

12:14 AM Oct 03, 2019 | Team Udayavani |

ಉಡುಪಿ: ಸಾರ್ವಜನಿಕರು ಪ್ಲಾಸ್ಟಿಕ್‌ ಮುಕ್ತ ಸ್ವಚ್ಛ ಉಡುಪಿ ನಿರ್ಮಾಣದ ಸಂಕಲ್ಪದ ಮೂಲಕ ಮಹಾತ್ಮಾ ಗಾಂಧಿ ಅವರ 150ನೇ ಜಯಂತಿಯನ್ನು ಅರ್ಥಪೂರ್ಣಗೊಳಿಸಬೇಕು ಎಂದು ಶಾಸಕ ಕೆ. ರಘುಪತಿ ಭಟ್‌ ತಿಳಿಸಿದರು.

Advertisement

ಜಿಲ್ಲಾಡಳಿತ, ಜಿ.ಪಂ., ವಾರ್ತಾ ಇಲಾಖೆ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಭುಜಂಗ ಪಾರ್ಕ್‌ನಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಗಾಂಧೀ ಅವರ ಪ್ರತಿಮೆಗೆ ಮಾಲಾರ್ಪಣೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದ ಪಾಪು ಬಾಪು ಕಿರುಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಜಿಲ್ಲಾಧಿಕಾರಿ ಜಗದೀಶ್‌ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿಯೇ ಗಾಂಧಿ ಆದರ್ಶಗಳ ಪಾಲನೆ ಮಾಡಬೇಕು. ಸ್ವಚ್ಛಮೇವ ಪರಿಕಲ್ಪನೆಯಡಿ ರಾಜ್ಯದ 1,000 ಗ್ರಾಮಗಳಲ್ಲಿ ಘನ-ದ್ರವ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿದ್ದು, ಸ್ವತ್ಛತೆಯ ಮಹತ್ವ ಮನೆಯಿಂದಲೇ ಆರಂಭವಾಗಬೇಕು ಎಂದರು.

ಗಾಂಧಿ ತಣ್ತೀಕ್ಕೆ ಅವಮಾನ
ಗಾಂಧೀ ಚಿಂತಕ ದಯಾನಂದ ಶೆಟ್ಟಿ ದೆಂದೂರು ಮಾತನಾಡಿ, ಗಾಂಧಿ ಅವರು ಪರಿಸರ ಸ್ವತ್ಛತೆಗೆ ವಿಶೇಷ ಆದ್ಯತೆ ನೀಡಿದರು. ಆದರೆ ಇಂದು ಜನರು ಮನೆಯ ಕಸವನ್ನು ರಸ್ತೆಗೆ ಎಸೆಯುವ ದುಷ್ಪ್ರವೃತ್ತಿ ಬೆಳೆಸಿಕೊಳ್ಳುವ ಮೂಲಕ ಗಾಂಧಿ ತಣ್ತೀಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಫ್ಲೆಕ್ಸ್‌ ಬೇಡ
ಶಿಲಾನ್ಯಾಸ, ಗುದ್ದಲಿ ಪೂಜೆ, ಗಣ್ಯರ ಭೇಟಿ ಸಂದರ್ಭದಲ್ಲಿ ಯಾವುದೇ ಫ್ಲೆಕ್ಸ್‌ಗಳನ್ನು ಹಾಕದಂತೆ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಸ್ವಲ್ಪ ದುಬಾರಿಯಾದರೂ ವಸ್ತ್ರದ ಬ್ಯಾನರ್‌ಗಳನ್ನೇ ಬಳಸಬೇಕು. ಜತೆಗೆ ಪರಿಸರಕ್ಕೆ ಪೂರಕ ವಸ್ತುಗಳನ್ನೇ ಬಳಸಬೇಕು. ಸಾರ್ವಜನಿಕರು ವಸ್ತ್ರದ ಚೀಲ ಬಳಸಿ ಪ್ಲಾಸ್ಟಿಕ್‌ ಮುಕ್ತ ಉಡುಪಿ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

Advertisement

ಜಿ.ಪಂ. ಅಧ್ಯಕ್ಷ ದಿನಕರ್‌ ಬಾಬು, ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ ಪೂಜಾರಿ, ನಗರಸಭಾ ಸದಸ್ಯರಾದ ರಶ್ಮಿ ಚಿತ್ತರಂಜನ್‌, ಬಾಲಕೃಷ್ಣ ಶೆಟ್ಟಿ, ಮಾನಸಿ ಪೈ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹಲೋಟ್, ಎಎಸ್ಪಿ ಕುಮಾರ ಚಂದ್ರ, ಪೌರಾಯುಕ್ತ ಆನಂದ್‌ ಕಲ್ಲೋಳಿಕರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ, ವಾರ್ತಾ ಇಲಾಖೆಯ ಶಿವಕುಮಾರ್‌ ಉಪಸ್ಥಿತರಿದ್ದರು.
ಪ್ರಕಾಶ್‌ ಸುವರ್ಣ ಕಟಪಾಡಿ ಸ್ವಾಗತಿಸಿ ದರು, ನಗರಸಭೆಯ ಅಧಿಕಾರಿ ಧನಂಜಯ್‌ ವಂದಿಸಿದರು. ಕಾರ್ಯಕ್ರಮದ ಬಳಿಕ ವಿವಿಧ ವಿದ್ಯಾರ್ಥಿಗಳು, ಸ್ವಯಂಸೇವಕರು ಸ್ವತ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮದ್ಯದ ಬಾಟಲಿಯ ಸ್ವಾಗತ!
ಶಾಸಕ ರಘುಪತಿ ಭಟ್‌, ಡಿಸಿ ಜಿ. ಜಗದೀಶ್‌, ಜಿ.ಪಂ. ಸಿಇಒ ಪ್ರೀತಿ ಗೆಹಲೋಟ್ ಅವರು ಸಭಾ ಕಾರ್ಯಕ್ರಮದ ಬಳಿಕ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಜ್ಜರಕಾಡು ಹುತಾತ್ಮರ ಸ್ಮಾರಕ ಸಮೀಪದಲ್ಲಿ ರಾಶಿ ಬಿದ್ದಿದ್ದ ಖಾಲಿ ಮದ್ಯದ ಬಾಟಲಿ ಕಂಡು ಡಿಸಿ ಅವರು ಸಿಡಿಮಿಡಿಗೊಂಡರು. ತತ್‌ಕ್ಷಣ ಪೌರಾಯುಕ್ತರನ್ನು ಕರೆದು ಗಮನ ಹರಿಸುವಂತೆ ಸೂಚಿಸಿದರು.

ಪ್ಲಾಸ್ಟಿಕ್‌ ನಿಷೇಧ ವಿರೋಧಿಗಳು ಒಮ್ಮೆ ಕರ್ವಾಲಿಗೆ ಭೇಟಿ ನೀಡಿ!
ದೇಶದಲ್ಲಿ ಪ್ಲಾಸ್ಟಿಕ್‌ ಈ ನಿಷೇಧಿಸಲಾಗಿದೆ. 10 ವರ್ಷಗಳ ಹಿಂದೆ ಕರ್ವಾಲಿನ 22 ಎಕ್ರೆ ಜಾಗದಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ಸಂಸ್ಕರಣ ಘಟಕ ಆರಂಭಿಸಲಾಗಿತ್ತು. ಆದರೆ ಇಂದು ಅಲ್ಲಿ ಕಸ ಹಾಕಲು ಜಾಗವಿಲ್ಲದಂತೆ ಪ್ಲಾಸ್ಟಿಕ್‌ ತ್ಯಾಜ್ಯವೇ ತುಂಬಿಕೊಂಡಿದೆ. ಪ್ಲಾಸ್ಟಿಕ್‌ ನಿಷೇಧ ಬೇಡ ಎನ್ನುವವರು ಒಮ್ಮೆ ಕರ್ವಾಲಿಗೆ ಭೇಟಿ ನೀಡಿದರೆ ವಿಷಯದ ಗಂಭೀರತೆ ಅರಿವಾಗುತ್ತದೆ ಎಂದು ರಘುಪತಿ ಭಟ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next