Advertisement

ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಸಂಗ್ರಹ: ಅಧಿಕಾರಿಗಳಿಂದ ದಾಳಿ

11:05 PM Jul 04, 2019 | Sriram |

ಸುರತ್ಕಲ್‌: ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರ ಮಳಿಗೆಗಳಿಗೆ ಗುರುವಾರ ಆರೋಗ್ಯಾಧಿಕಾರಿ ಡಾ| ಮಂಜಯ್ಯ ಶೆಟ್ಟಿ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳ ತಂಡ ದಾಳಿ ನಡೆಸಿ 50 ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್‌ ವಶಪಡಿಸಿಕೊಂಡಿದೆ.

Advertisement

ಸುರತ್ಕಲ್‌ನ ಮಾರ್ಕೆಟ್‌, ಸೂಪರ್‌ ಬಜಾರ್‌, ಮತ್ತಿತರ ಅಂಗಡಿಗಳಿಗೆ ದಾಳಿ ನಡೆಸಿದಾಗ ಅಗಾಧ ಪ್ರಮಾಣದ ನಿಷೇತ ಪ್ಲಾಸ್ಟಿಕ್‌ ಸಂಗ್ರಹ ಪತ್ತೆಯಾಗಿದೆ.

ವ್ಯಾಪಾರಿಗಳಿಗೆ ನಿಷೇತ ಪ್ಲಾಸ್ಟಿಕ್‌ ಸಂಗ್ರಹದ ಆಧಾರದಲ್ಲಿ ರೂ. ಐದು ಸಾವಿರದಿಂದ ದಂಡ ವಿಧಿಸಲಾಯಿತು. ರಾಜ್ಯ ಸರಕಾರ ಎಲ್ಲ ತರದ ಕ್ಯಾರ ಬ್ಯಾಗ್‌ ಪ್ಲಾಸ್ಟಿಕ್‌ ಲೋಟ, ತಟ್ಟೆ, ಚಮಚ ನಿಷೇ ಧಿಸಲಾಗಿದೆ. ಇದನ್ನು ಮಾರಾಟ ಮಾಡದಂತೆ ಅಥವಾ ಬಳಸದಂತೆ ಎಚ್ಚರಿಸಲಾಯಿತು. ಪಾಲಿಕೆ ಆರೋಗ್ಯಾ ಕಾರಿ ಡಾ| ಮಂಜಯ್ಯ ಶೆಟ್ಟಿ ಮಾಧ್ಯಮದೊಂದಿಗೆ ಮಾತನಾಡಿ, ಈಗಾಗಲೇ ಸರಕಾರ ನಿಷೇತ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿರ್ಮೂಲನೆಗೆ ಕ್ರಮ ಕೈಗೊಂಡಿದ್ದೇವೆ. ವ್ಯಾಪಾರಿಗಳು ಕಾನೂನನ್ನು ಪಾಲಿಸಬೇಕು. ಇಲ್ಲದಿದ್ದಲ್ಲಿ ವ್ಯಾಪಾರಾ ಪರವಾನಿಗೆ ರದ್ದು ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ ಎಂದರು.

ಇದೇ ಸಂದರ್ಭ ಸುರತ್ಕಲ್‌ ಕೃಷ್ಣಾಪುರದಲ್ಲಿ ಮತ್ತೆ ರಸ್ತೆ ಬದಿ ತ್ಯಾಜ್ಯ ಸಂಗ್ರಹವಾಗುತ್ತಿದೆ. ಸೂಕ್ತ ವಿಲೇವಾರಿ ನಡೆಯುತ್ತಿಲ್ಲ ಎಂಬ ಪ್ರಶ್ನೆಗೆ ಆ್ಯಂಟನಿ ವೇಸ್ಟ್‌ ಸಂಸ್ಥೆ ಸಮರ್ಪಕ ತ್ಯಾಜ್ಯ ವಲೇವಾರಿ ಮಾಡಬೇಕು. ಅವರ ವಾಹನ ಹಾಳಾದರೂ ಪರ್ಯಾಯ ವ್ಯವಸ್ಥೆ ಕೈಗೊಂಡು ತ್ಯಾಜ್ಯ ವಿಲೇವಾರಿ ಮಾಡಬೇಕು. ಈ ಬಗ್ಗೆ ಸಂಸ್ಥೆಗೆ ಹಲವು ಬಾರಿ ನೋಟಿಸ್‌ ನೀಡಲಾಗಿದೆ ಎಂದರು.

ಆರೋಗ್ಯ ನಿರೀಕ್ಷಕರು ಭಾಸ್ಕರ್‌, ಪರಿಸರ ಅಭಿಯಂತರ ದಯಾನಂದ ಪೂಜಾರಿ, ಆರೋಗ್ಯ ನಿರೀಕ್ಷಕರಾದ ಅರುಣ್‌ ಕುಮಾರ್‌ ಬಿ.ಕೆ., ಕಿರಣ್‌ ಗಿರಿ ಧರ್‌, ಸಂಜಯ್‌ ಕುಮಾರ್‌, ಸಿಬಂದಿ ಸತೀಶ್‌ ಕೆ., ಅರ್ಜುನ್‌, ಚೇತನ್‌, ಮೋಹನ್‌ ದಾಸ್‌, ಆಂಟನಿ ಸಂಸ್ಥೆಯ ಪೌರ ಕಾರ್ಮಿಕರು ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next