Advertisement

ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಕಟ್ಟುನಿಟ್ಟು ನಿಷೇಧ: ಜಿಲ್ಲಾಧಿಕಾರಿ

11:50 PM Sep 27, 2019 | Team Udayavani |

ಉಡುಪಿ: ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆ ಮತ್ತು ಗ್ರಾ.ಪಂ.ಗಳು ಸೇರಿದಂತೆ ಜಿಲ್ಲಾದ್ಯಂತ ಅಕ್ಟೋಬರ್‌ 2ರ ಅನಂತರ ಪ್ಲಾಸ್ಟಿಕ್‌ ನಿಷೇಧವನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿ ಗೊಳಿಸಲಾಗುತ್ತಿದ್ದು, ನಿಷೇಧಿತ ಪ್ಲಾಸ್ಟಿಕ್‌ ಬಳಸುವ ಸಾರ್ವಜನಿಕರು ಸೇರಿದಂತೆ ಪ್ರತಿಯೊಬ್ಬರ ಮೇಲೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Advertisement

ಜಿಲ್ಲೆಯಲ್ಲಿ ಸೆ. 27ರಿಂದ ಅ. 2ರ ವರೆಗೆ ಪ್ಲಾಸ್ಟಿಕ್‌ ನಿಷೇಧದ ಕುರಿತು ಅರಿವು ಹಾಗೂ ಜಾಗೃತಿ ಮೂಡಿಸಲಾಗುವುದು. ಈ ಅವಧಿಯಲ್ಲಿ ಯಾವುದೇ ಅಂಗಡಿ, ಸಗಟು ವ್ಯಾಪಾರಿ, ಚಿಲ್ಲರೆ ವ್ಯಾಪಾರಿ ಬಳಿ ಇರುವ ಪ್ಲಾಸ್ಟಿಕ್‌ ವಶಪಡಿಸಿಕೊಳ್ಳಲಾಗುವುದು. ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ತೆರವು ಗೊಳಿಸಲಾಗುವುದು.

ಈ ಬಗ್ಗೆ ಮನೆ ಮನೆಗೆ ಭೇಟಿ ನೀಡಿ ಪ್ಲಾಸ್ಟಿಕ್‌ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಅಕ್ಟೋಬರ್‌ 2ರ ಅನಂತರ ಸಹ ಪ್ಲಾಸ್ಟಿಕ್‌ ಕಂಡು ಬಂದಲ್ಲಿ ಅಂತಹವರ ವಿರುದ್ಧ ಪ್ಲಾಸ್ಟಿಕ್‌ ನಿಷೇಧ ಕಾಯ್ದೆಯಲ್ಲಿ ಸೂಚಿಸಿರುವ ದಂಡನಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಸೂಕ್ತ ಕ್ರಮ
ಕೇಂದ್ರ ಸರಕಾರ ಕೂಡ ಪ್ಲಾಸ್ಟಿಕ್‌ ನಿಷೇಧ ಕುರಿತು ಸೂಚನೆ ನೀಡಿದ್ದು, ಸ್ವತ್ಛತಾ ಸೇವಾ ಕಾರ್ಯಕ್ರಮ ರೂಪಿಸಿದೆ. ಜಿಲ್ಲೆಯಾದ್ಯಂತ ಅ. 2ರಂದು ಬೃಹತ್‌ ಸ್ವತ್ಛತಾ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಪ್ಲಾಸ್ಟಿಕ್‌ ನಿಷೇಧ ಕಟ್ಟು ನಿಟ್ಟಾಗಿ ಜಾರಿಗೆ ಬರಲಿದೆ. ಪ್ಲಾಸ್ಟಿಕ್‌ನಿಂದ ವಸ್ತುಗಳನ್ನು ತಯಾರಿಸುವ ವರು, ಸರಬರಾಜು ಮಾಡುವವರು, ಸಂಗ್ರಹಣೆ ಮಾಡುವವರು, ಸಾಗಾಟ ಮಾಡುವವವರು, ಮಾರಾಟ ಮತ್ತು ವಿತರಣೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾವುದೇ ರೀತಿಯ ಪ್ಲಾಸ್ಟಿಕ್‌ ಕವರ್‌ಗಳ ಬಳಕೆಯನ್ನು ನಿಷೇಧಿಸಿದ್ದು, ಸಾರ್ವಜನಿಕರು ಬಟ್ಟೆಯ ಕೈ ಚೀಲಗಳನ್ನು ಬಳಸುವಂತೆ ತಿಳಿಸಿದರು.

ಲೈಸನ್ಸ್‌ ರದ್ದು
ಫ್ಲೆಕ್ಸ್‌ ಮುದ್ರಿಸುವವರು, ಅಳವಡಿಸು ವವರ ವಿರುದ್ಧ ಮತ್ತು ಬೊಕ್ಕೆಗಳ ತಯಾರಿಕೆಯಲ್ಲಿ ಪ್ಲಾಸ್ಟಿಕ್‌ ಬಳಸುವ ವ್ಯಾಪಾರಿಗಳ ವಿರುದ್ಧ ಸಹ ಕ್ರಮ ಕೈಗೊಳ್ಳಲಾಗುವುದು. ಮೊದಲನೇ ಬಾರಿ ನಿಷೇಧ ಉಲ್ಲಂ ಸಿದರೆ 1,000, 2ನೇ ಬಾರಿ ಉಲ್ಲಂ ಸಿದರೆ 2000 ಮತ್ತು 3ನೇ ಬಾರಿ ಉಲ್ಲಂ ಸಿದರೆ ಅಂತಹ ಪ್ಲಾಸ್ಟಿಕ್‌ ವಸ್ತು ತಯಾರಕರು, ಮಾರಾಟಗಾರರು, ಸಂಗ್ರಹಗಾರರು, ಮಾರಾಟ ಮಾಡುವವರ ಟ್ರೇಡ್‌ ಲೈಸನ್ಸ್‌ ರದ್ದುಗೊಳಿಸಲಾಗು ವುದು. ಬೇರೆಡೆಯಿಂದ ವಾಹನಗಳಲ್ಲಿ ಪ್ಲಾಸ್ಟಿಕ್‌ ವಸ್ತು ತರಿಸಿಕೊಂಡರೆ ಅಂತಹ ವಾಹನ ಮಾಲಕರು ಮತ್ತು ವಾಹನದ ಮೇಲೂ ಸಹ ಮೊಕದ್ದಮೆ ದಾಖಲು ಮಾಡಲಾಗುವುದು. ಪ್ಲಾಸ್ಟಿಕ್‌ ನಿಷೇಧವನ್ನು ಜಾರಿಗೆ ಸಮರ್ಪಕವಾಗಿ ತರುವಲ್ಲಿ ವೈಫ‌ಲ್ಯ ಹೊಂದುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭ ಪೌರಾಯುಕ್ತ ಆನಂದ್‌ ಕಲ್ಲೋಳಿಕರ್‌ ಉಪಸ್ಥಿತರಿದ್ದರು.

Advertisement

ಸೂಚನೆ
ಜಿಲ್ಲೆಯಾದ್ಯಂತ ಸ್ಥಳೀಯಾಡಳಿತ ಗಳು ಮತ್ತು ಗ್ರಾ.ಪಂ.ಗಳಲ್ಲಿ ನಿಗದಿತ ಸ್ಥಳದಲ್ಲಿ ಮಾತ್ರ ಜಾಹೀರಾತು ಮತ್ತು ಪೋಸ್ಟರ್‌ ಅಳವಡಿಕೆ ಬಗ್ಗೆ ಮತ್ತು ಕಡ್ಡಾಯವಾಗಿ ಬಟ್ಟೆ ಅಥವಾ ಪರಿಸರ ಸ್ನೇಹಿ ವಸ್ತುವಿನಿಂದ ತಯಾರಾದ ಜಾಹೀರಾತುಗಳನ್ನು ಸಂಬಂಧ ಪಟ್ಟವರಿಂದ ಸೂಕ್ತ ಅನುಮತಿ ಪಡೆದು ಅಳವಡಿಸುವಂತೆ ಮತ್ತು ರಾ.ಹೆ.ಯಲ್ಲಿ ಯಾವುದೇ ಜಾಹೀರಾತು ಅಳವಡಿಸದಂತೆ ಜಿಲ್ಲಾಧಿಕಾರಿ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next