Advertisement
ಬದುಕಿದ್ದ ಪ್ರಾಣಿಗಳು ಸತ್ತ ಮೇಲೆ, ಕೊಳೆತು ಮಣ್ಣಿನಲ್ಲಿ ಸೇರುವುದು ನಿಸರ್ಗ ನಿಯಮ. ಆದರೆ, ದೇಹದಲ್ಲಿರುವ ನೀರು ಮತ್ತು ಕೊಳೆಯುವ ಭಾಗಗಳನ್ನು ಬದಲಾಯಿಸುವ ಮೂಲಕ ದೇಹವನ್ನು ಪೂರ್ಣವಾಗಿ ರಕ್ಷಿಸಬಹುದು. ಆ ಶಾಸ್ತ್ರವೇ “ಪ್ಲಾಸ್ಟಿನೇಷನ್’ ಎನ್ನುತ್ತಾರೆ. ರಕ್ಷಣೆ ಹೇಗೆ? ಮೃತದೇಹದಿಂದ ನೀರು ಮತ್ತು ಕೊಳೆಯುವ ಭಾಗಗಳನ್ನು ಮೊದಲು ಬೇರ್ಪಡಿಸಲಾಗುತ್ತದೆ. ನಂತರ ಕೊಳೆಯದ ಅಂಗಗಳಿರುವ ಚರ್ಮಭಾಗವನ್ನು ಹೊಲೆದು, ಮೂಲ ಸ್ವರೂಪದಲ್ಲೇ ದೇಹವನ್ನು ರಕ್ಷಿಸಬಹುದು. ಈ ವಿಧಾನವನ್ನು ಸಂಶೋಧಿಸಿದವನು ಜರ್ಮನಿಯ ಅಂಗರಚನಾ ಶಾಸ್ತ್ರಜ್ಞ ಜಾನ್ ಗುಂಥರ್‌ವಾನ್ ಹೇಗೆನ್ಸ್.
ಪ್ಲಾಸ್ಟಿನೈಸೇಷನ್ ವಿಧಾನದಲ್ಲಿ ಜಾನ್, ಸಂರಕ್ಷಿಸಿದ ನೂರಕ್ಕಿಂತ ಅಧಿಕ ಪ್ರಾಣಿಗಳ ದೇಹವನ್ನು ಜರ್ಮನಿಯ ಹೈಡೆನ್‌ಬರ್ಗ್‌ನಲ್ಲಿರುವ ಪ್ರದರ್ಶನಾಲಯದಲ್ಲಿ ಇರಿಸಲಾಗಿದೆ. ಇಲ್ಲಿ ಪುಟ್ಟ ಟೈನಿಯೆಸ್ಟ್ ಕಪ್ಪೆಯಿಂದ ಹಿಡಿದು, 5.1ಮೀ. ಎತ್ತರದ ಜಿರಾಫೆಯೂ ಇದೆ. ಒಂಟೆ, ಜಿಂಕೆ, ನಾಯಿ, ದನ, ಚಿಂಪಾಂಜಿ, ಶಾರ್ಕ್, ಅಕ್ಟೋಪಸ್, ಕುದುರೆ, ಆಡು ಮೊದಲಾದವುಗಳ ಶವವನ್ನು ಜೀವಂತಗೊಳಿಸಿ ನಿಲ್ಲಿಸಿದ ಗುಂಥರ್ ಪ್ರಯತ್ನ ಶ್ಲಾಘನೀಯ!
ತುಂಬಾ ಶ್ರಮ ಬೇಕು
ಹಾಗೆಂದು, ಕೊಳೆಯುವ ಭಾಗಗಳನ್ನು ದೇಹದಿಂದ ತೆಗೆದು ಶಾಶ್ವತವಾಗಿ ಸಂರಕ್ಷಿಸುವ ಕಾರ್ಯ ಅಂದುಕೊಂಡಷ್ಟು ಸುಲಭದ್ದಲ್ಲ. ಒಂದು ಮಾನವ ದೇಹವನ್ನು ಆ ರೀತಿ ಸಿದ್ಧಗೊಳಿಸಲು 35 ಸಾವಿರ ತಾಸುಗಳು ಬೇಕಾದರೆ, ಜಿರಾಫೆಯ ದೇಹವನ್ನು ಸಜ್ಜುಗೊಳಿಸಲು 64 ಸಾವಿರ ತಾಸುಗಳ ಶ್ರಮ ಅಗತ್ಯ.
Related Articles
ಗುಂಥರ್ 1977ರಲ್ಲಿ ಸಂಶೋಧಿಸಿದ ಈ ವಿಧಾನದಲ್ಲಿ ಮೊದಲಿಗೆ, ಇಡೀ ದೇಹವನ್ನು ಸಂರಕ್ಷಿಸಿ ಇಡಲು ಸಾಧ್ಯವಿರಲಿಲ್ಲ. ವೈದ್ಯಕೀಯ ಅಧ್ಯಯನಕ್ಕಾಗಿ, ದೇಹದ ಸಣ್ಣ ಸಣ್ಣ ಮಾದರಿಗಳನ್ನು ಮಾತ್ರ ಇದರ ಮೂಲಕ ಉಳಿಸಿಕೊಳ್ಳಬಹುದಿತ್ತು. ಸಂಶೋದನೆ ಮುಂದುವರಿದ ಹಾಗೆ 1990ರ ಆರಂಭದ ವೇಳೆಗೆ, ದೊಡ್ಡ ದೊಡ್ಡ ಅಂಗಗಳನ್ನು ಸಂರಕ್ಷಿಸುವ ಪ್ರಯತ್ನ ಕೈಗೂಡಿತು. 1995ರ ಹೊತ್ತಿಗೆ ಜಪಾನಿನಲ್ಲಿ ಪ್ಲಾಸ್ಟಿನೈಸೇಷನ್ ಮೂಲಕ ಉಳಿಸಿಕೊಂಡ ಪೂರ್ಣ ಮಾನವ ದೇಹದ ಪ್ರದರ್ಶನ ನಡೆಯಿತು. ಈ ವಿಷಯದಲ್ಲಿ ಪರ, ವಿರೋಧ ಚರ್ಚೆಗಳು ನಡೆದರೂ, ಜಗತ್ತಿನಾದ್ಯಂತ 50ಕ್ಕಿಂತ ಹೆಚ್ಚು ನಗರಗಳಲ್ಲಿ ಈ ಸಾಧನೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಯಿತು.
Advertisement
ಹೈಡೆನ್‌ಬರ್ಗ್ ಪ್ರದರ್ಶನಾಲಯಜೀವಜಗತ್ತಿನ ಅದ್ಭುತ ಜೀವಿಗಳ ಸಂಕೀರ್ಣ ಜೀವಶಾಸ್ತ್ರ, ಪ್ರಾಣಿ ಶಾಸ್ತ್ರ, ಶರೀರ ವಿಜಾnನದ ಬಗೆಗೆ ತಿಳಿದುಕೊಳ್ಳಲು ಜರ್ಮನಿಯ ಹೈಡೆನ್‌ಬರ್ಗ್‌ನಲ್ಲಿರುವ ಪ್ರದರ್ಶನಾಲಯ ಬಹಳ ಸೂಕ್ತವಾಗಿದೆ. ಮೂಳೆ, ನರ, ಸ್ನಾಯುಗಳು ಸೇರಿದಂತೆ ಜೀವಿಗಳ ಒಳ ಅಂಗರಚನೆಯನ್ನು ಇಲ್ಲಿ ಹತ್ತಿರದಿಂದ ಕಾಣಬಹುದು. ಗೂಳಿಯ ಹೃದಯದ ತೂಕ ಎಷ್ಟು? ಆಸ್ಟ್ರಿಚ್ ಯಾಕೆ ಹಾರುವುದಿಲ್ಲ? ಮುಂತಾದ ಸಂದೇಹಗಳಿಗೆ ಇಲ್ಲಿ ಉತ್ತರ ಸಿಗುತ್ತದೆ. 1000 ಮೀ. ವಿಸ್ತಾರವಿರುವ ಮೂರು ಸಭಾಂಗಣಗಳಲ್ಲಿ ಈ ದೇಹಗಳನ್ನು ಇಡಲಾಗಿದೆ. ಪ. ರಾಮಕೃಷ್ಣ ಶಾಸ್ತ್ರಿ