Advertisement
ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಈ ಉಪಕ್ರಮಕ್ಕೆ ಚಾಲನೆ ನೀಡಿದರು.
Related Articles
Advertisement
ಕೋವಿಡ್ -19ದಿಂದ ಗುಣ ಹೊಂದಿರುವವರು ಚಿಕಿತ್ಸೆಗೆ ಸಹಕರಿಸಬೇಕು. ಇಂಥವರು 2 ವಾರಗಳ ಅಂತರದಲ್ಲಿ ಕನಿಷ್ಠ ಇಬ್ಬರು ಅಥವಾ ಮೂವರಿಗೆ ಪ್ಲಾಸ್ಮಾ ನೆರವು ನೀಡಬಹುದು ಎಂದು ಸಚಿವರು ಮನವಿ ಮಾಡಿಕೊಂಡರು.
ಕೇರಳದಲ್ಲಿ ಯಶಸ್ವಿಪ್ಲಾಸ್ಮಾ ಥೆರಪಿಯು ನೆರೆಯ ಕೇರಳ ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿದೆ. ಹೀಗಾಗಿ ಕರ್ನಾಟಕದಲ್ಲೂ ಅನುಮತಿ ನೀಡುವಂತೆ ಕೋರಿ ಕೇಂದ್ರಕ್ಕೆ ಕರ್ನಾಟಕ ಸರಕಾರ ಮನವಿ ಸಲ್ಲಿಸಿತ್ತು. ಇತ್ತೀಚೆಗಷ್ಟೇ ಕೇಂದ್ರ ಸಾರ್ವಜನಿಕ ಆರೋಗ್ಯ ನಿರ್ದೇಶನಾಲಯವು ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿಯ ವೈದ್ಯ ಡಾ| ವಿಶಾಲ್ ರಾವ್ ಅವರಿಗೆ ಪ್ಲಾಸ್ಮಾ ಚಿಕಿತ್ಸೆ ಒದಗಿಸಲು ಅನುಮತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ಲಾಸ್ಮಾ ಥೆರಪಿಯನ್ನು ಈ ಹಿಂದೆ ಎಬೋಲಾ ಮತ್ತು ಸ್ವೆ„ನ್ ಫ್ಲೂನಂತಹ ಕಾಯಿಲೆಗಳ ವಿರುದ್ಧ ಯಶಸ್ವಿಯಾಗಿ ಉಪಯೋಗಿಸಲಾಗಿದೆ. ಏನಿದು ಪ್ಲಾಸ್ಮಾ ಥೆರಪಿ?
ಈಗಾಗಲೇ ಕೋವಿಡ್ -19 ತಗುಲಿ ಗುಣಮುಖರಾಗಿರುವ ವ್ಯಕ್ತಿಗಳ ರಕ್ತದಲ್ಲಿ ಉತ್ಪತ್ತಿ ಯಾಗಿರುವ ಪ್ರತಿಕಾಯ ( ಆ್ಯಂಟಿ ಬಾಡಿ)ಗಳನ್ನು ತೆಗೆದು, ಅವನ್ನು ಹಾಲಿ ಸೋಂಕಿಗೀಡಾಗಿರುವ ರೋಗಿಯ ರಕ್ತಕ್ಕೆ ನೀಡುವುದು. ರೋಗಿಯ ದೇಹ ಸೇರಿದ ಈ ಪ್ರತಿಕಾಯಗಳು ಅಲ್ಲಿ ಹೊಸ ಪ್ರತಿಕಾಯ ಉತ್ಪಾದನೆಯನ್ನು ಹೆಚ್ಚಿಸಿ ಕೋವಿಡ್ -19 ನಿವಾರಣೆಯಲ್ಲಿ ಸಹಕರಿಸುತ್ತವೆ.