Advertisement

ಕೋವಿಡ್‌ ಕಾರ್ಮೋಡ : ಭಾರತ –ದ.ಏಷ್ಯಾದ ಪ್ಲಾಸ್ಮಾ ದಾನಿಗಳಿಗೆ ಯುಕೆ ಕರೆ

10:43 AM Aug 22, 2020 | sudhir |

ಲಂಡನ್‌: ಭಾರತ ಹಾಗೂ ದಕ್ಷಿಣ ಏಷ್ಯಾದ ಪ್ಲಾಸ್ಮಾ ದಾನಿಗಳಿಗೆ ಇಂಗ್ಲೆಂಡ್‌ ಆಹ್ವಾನ ಮಾಡಿದೆ. ಪ್ಲಾಸ್ಮಾ ದಾನ ಮಾಡಿ ಅಲ್ಲಿನ ಜನತೆಯನ್ನು ಉಳಿಸುವಂತೆ ನ್ಯಾಷನಲ್‌ ಹೆಲ್ತ್ ಸರ್ವೀಸ್‌ ಕೂಡ ಕೇಳಿಕೊಂಡಿದೆ.

Advertisement

ಯುರೋಪ್‌ನ ಜನರಿಗಿಂತ ದಕ್ಷಿಣ ಏಷ್ಯಾದ ಜನರಲ್ಲಿ ಪ್ರತಿಕಾಯ ವೃದ್ಧಿಯಾಗಿದೆ. ಇಲ್ಲಿನ ಜನರನ್ನು ಉಳಿಸಲು ಪ್ಲಾಸ್ಮಾ ಥೆರಪಿ ನಡೆಸಿ ಜೀವ ಉಳಿಸಲಾಗುತ್ತಿದೆ ಎಂದು ತಿಳಿಸಿದೆ. ಪ್ರತಿಕಾಯ-ಪ್ಲಾಸ್ಮಾ ಜನರ ಜೀವವನ್ನು ಉಳಿಸಬಲ್ಲದು. ಯುಕೆಯಲ್ಲಿ ಎರಡನೇ ಹಂತದಲ್ಲಿ ಕೋವಿಡ್ ಅಲೆ ಏಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಕ್ರಮದ ಮೊರೆ ಹೋಗಲಾಗಿದೆ.

ಯುಕೆಯ ಈ ಕರೆಗೆ ಏಷ್ಯಾ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಪ್ಲಾಸ್ಮಾ ದಾನ ಮಾಡುವುದರಿಂದ ಜೀವ ಉಳಿಸಬಹುದಾಗಿದೆ. ಪ್ಲಾಸ್ಮಾ ದಾನವು ಸುರಕ್ಷಿತ, ಸ್ವತ್ಛ ಹಾಗೂ ಸುಲಭದ ಮಾರ್ಗವಾಗಿದೆ. ಇದರ ವರ್ಗಾವಣೆ ಅಥವ ದಾನಕ್ಕೆ ಕೇವಲ 45 ನಿಮಿಷವನ್ನು ತೆಗೆದುಕೊಳ್ಳುತ್ತದೆ.

ಪ್ಲಾಸ್ಮಾ ದಾನವು ಕೊರೊನಾದಿಂದ ಬಳಲುತ್ತಿರುವವರಿಗೆ ಸಹಾಯ ಮಾಡುವ ಒಂದು ಮಾರ್ಗವಾಗಿದೆ. ದಾನ ಮಾಡುವ ಮೂಲಕ, ಬೇರೆಯವರು ಬದುಕುಳಿಯಲು ಸಹಾಯ ಕವಾಗುತ್ತದೆ. ಈ ಕನ್ವೆಲೆಸೆಂಟ್‌ ಪ್ಲಾಸ್ಮಾ ಥೆರಪಿ ಒಂದು ಹೊಸ ಚಿಕಿತ್ಸೆಯಾಗಿದೆ. ತೀವ್ರವಾದ ವೈರಸ್‌ ಸೋಂಕಿಗೆ ಒಳಗಾದ ವ್ಯಕ್ತಿಗೆ ಕೋವಿಡ್ ನಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಿಂದ ಪ್ರತಿಕಾಯಗಳನ್ನು ಬಳಸುವುದು ಈ ಚಿಕಿತ್ಸೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next