Advertisement
ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಚೇತರಿಸಿಕೊಂಡ ಕೋವಿಡ್ ರೋಗಿಗಳನ್ನು ಸಂಪರ್ಕಿಸಿ, ಅವರ ಮನವೊಲಿಸುವ ಮೂಲಕಪ್ಲಾಸ್ಮಾ ಪಡೆದು ರೋಗಿಗಳಿಗೆ ನೀಡಲಾಗುತ್ತಿದೆ. ಪ್ರತಿದಿನ ಕೋವಿಡ್ ಸೋಂಕಿಗೆ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆ ಶತಕ ದಾಟಿ ಮುಂದುವರಿಯುತ್ತಿದೆ. ಈಗಾಗಲೇ 111 ಮಂದಿ ಸೋಂಕಿತರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ.
Related Articles
Advertisement
83 ಮಂದಿಯಿಂದ ಪ್ಲಾಸ್ಮಾದಾನ : ಮಿಮ್ಸ್‌ನ ರಕ್ತನಿಧಿ ಕೇಂದ್ರದಲ್ಲಿಕೋವಿಡ್ ಸಂದರ್ಭದಲ್ಲಿ ಇದುವರೆಗೂ ಕೇವಲ 83 ಮಂದಿ ಮಾತ್ರ ಪ್ಲಾಸ್ಮಾ ದಾನ ಮಾಡಿದ್ದಾರೆ. ಪ್ರತಿದಿನ 100ಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗುತ್ತಿದ್ದಾರೆ. ಅದರಲ್ಲಿ ಪ್ರತಿದಿನ 5 ಮಂದಿ ಪ್ಲಾಸ್ಮಾ ನೀಡಿದರೆ, ಎಷ್ಟೋ ರೋಗಿಗಳ ಪ್ರಾಣ ಉಳಿಸಬಹುದಾಗಿದೆ. ಈಗಾಗಲೇ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ರಾಮನಗರ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ರೋಗಿಗಳಿಗೂ ಮಿಮ್ಸ್ ರಕ್ತನಿಧಿ ಕೇಂದ್ರದಿಂದ ಪ್ಲಾಸ್ಮಾ ನೀಡಲಾಗಿದೆ.
ಆರೋಗ್ಯಕ್ಕೆ ಯಾವುದೇ ತೊಂದರೆಯಾಗಲ್ಲ : ಪ್ಲಾಸ್ಮಾ ನೀಡುವುದರಿಂದ ಆರೋಗ್ಯಕ್ಕೆ ತೊಂದರೆಯಾಗಲಿದೆ ಎಂಬ ತಪ್ಪುಕಲ್ಪನೆ ಬಿಡಬೇಕು. ಪ್ಲಾಸ್ಮಾ ನೀಡಿದ24 ಗಂಟೆಗಳಲ್ಲಿ ದೇಹದಲ್ಲಿ ಮತ್ತೆ ಬಿಳಿ ರಕ್ತಕಣಗಳ ಉತ್ಪತ್ತಿಯಾಗಲಿದ್ದು, ಆರೋಗ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಆರೋಗ್ಯ ಉತ್ತಮವಾಗಲಿದೆ. ಮತ್ತೆ15 ದಿನಗಳ ನಂತರ ನೀಡಬಹುದಾಗಿದೆ. ವರ್ಷಕ್ಕೆ 24 ಬಾರಿ ನೀಡಬಹುದಾಗಿದೆ. ಇದರ ಬಗ್ಗೆ ಜಾಗೃತಿ ಅಗತ್ಯವಾಗಿದೆ. ಚೇತರಿಸಿಕೊಂಡ ಸೋಂಕಿತರಿಗೆ ತಿಳುವಳಿಕೆ ಹಾಗೂ ಅರಿವು ಮೂಡಿಸಬೇಕಾಗಿದೆ. ಎಲ್ಲ ರೋಗಿಗಳಿಂದ ಪಡೆಯಲು ಸಾಧ್ಯವಿಲ್ಲ. ಆಂಟಿಬಾಟಿಕ್ ಹೆಚ್ಚು ಉತ್ಪತ್ತಿಯಾದವರಲ್ಲಿ ಮಾತ್ರ ಅಗತ್ಯದಷ್ಟು ಮಾತ್ರ ಪ್ಲಾಸ್ಮಾ ಪಡೆಯಲಾಗುತ್ತದೆ.
5 ಸಾವಿರ ರೂ.ಆರೈಕೆಭತ್ಯೆ : ಪ್ಲಾಸ್ಮಾ ನೀಡಿದವರಿಗೆ ಸರ್ಕಾರದಿಂದ ಆರೈಕೆ ಭತ್ಯೆಯಾಗಿ 5 ಸಾವಿರ ರೂ. ನೀಡಲಾಗುತ್ತದೆ. ಯಾವುದೇ ತೊಂದರೆ ಇಲ್ಲದೆ ಚೇತರಿಸಿಕೊಂಡ ಕೋವಿಡ್ ರೋಗಿಗಳು ಸ್ವಯಂ ಪ್ರೇರಿತರಾಗಿ ಪ್ಲಾಸ್ಮಾ ನೀಡಲು ಮುಂದೆ ಬರಬೇಕು. ಐಸಿಎಂಆರ್ ಸೂಚನೆಯಂತೆ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿ ಪ್ಲಾಸ್ಮಾ ಪಡೆಯಲಾಗುತ್ತದೆ.
ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಕಡಿಮೆಮಾಡಲು ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಬಗ್ಗೆ ಜಾಗೃತಿ, ಕೌನ್ಸೆಲಿಂಗ್ ಮಾಡಲಾಗುತ್ತಿದೆ. ಸೋಂಕನ್ನು ಜಿಲ್ಲೆಯಲ್ಲಿ ನಿಯಂತ್ರಿಸಲಾಗುತ್ತಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣ ಹಾಗೂ ಸೋಂಕಿನ ಸಂಖ್ಯೆಕಡಿಮೆ. ಸೋಂಕಿತರಿಗೂ ಉತ್ತಮ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರತಿದಿನ ಹೆಚ್ಚಿನ ರೋಗಿಗಳು ಚೇತರಿಸಿಕೊಂಡು ಬಿಡುಗಡೆಯಾಗುತ್ತಿದ್ದಾರೆ. –ಡಾ.ಎಂ.ವಿ.ವೆಂಕಟೇಶ್, ಜಿಲ್ಲಾಧಿಕಾರಿ, ಮಂಡ್ಯ
ಜಿಲ್ಲೆಯಲ್ಲಿ ಮೃತಪಟ್ಟವರಲ್ಲಿ ವಿವಿಧ ರೋಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸೋಂಕಿನ ಲಕ್ಷಣಗಳುಕಂಡು ಬಂದರೂ ನಿರ್ಲಕ್ಷ್ಯ ಮುಂದುವರೆದಿದೆ. ಅದು ಮೀರಿದಾಗ ಕೊನೆ ಕ್ಷಣದಲ್ಲಿ ಬಂದು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರುಯಾವುದೇ ಲಕ್ಷಣಗಳು ಕಂಡು ಬಂದರೂ ತಕ್ಷಣ ಪರೀಕ್ಷೆ ಹಾಗೂ ಸೂಕ್ತ ಚಿಕಿತ್ಸೆ ಪಡೆಯಬೇಕು. ಪ್ಲಾಸ್ಮಾ ಥೆರಪಿ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಸಾವಿನ ಪ್ರಮಾಣ ಕಡಿಮೆ ಮಾಡಲಾಗುತ್ತಿದೆ. ರೋಗಿಯ ಗುಣಲಕ್ಷಣಗಳ ಮೇಲೆ ವೈದ್ಯರ ಸಲಹೆ ಮೇರೆಗೆ ಪ್ಲಾಸ್ಮಾ ಪಡೆದುಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. –ಡಾ.ಟಿ.ಎನ್.ಧನಂಜಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಮಂಡ್ಯ
ಪ್ಲಾಸ್ಮಾ ನೀಡುವುದರಿಂದ ಆರೋಗ್ಯ ಉತ್ತಮವಾಗಲಿದೆ. ಪ್ಲಾಸ್ಮಾ ನೀಡಿದ 24 ಗಂಟೆಗಳಲ್ಲಿ ಮತ್ತೆ ದೇಹದಲ್ಲಿ ಉತ್ಪತ್ತಿಯಾಗಲಿದೆ. ಒಬ್ಬ ಚೇತರಿಸಿಕೊಂಡ ಸೋಂಕಿತ ವರ್ಷಕ್ಕೆ 24 ಬಾರಿ ನೀಡಬಹುದಾಗಿದೆ. ಆದ್ದರಿಂದಯಾವುದೇ ಭಯ, ಆತಂಕಪಡದೆ ಸ್ವಯಂ ಪ್ರೇರಿತರಾಗಿ ಪ್ಲಾಸ್ಮಾ ನೀಡಲು ಮುಂದಾಗಬೇಕು. –ಮೊಹಮ್ಮದ್ ರಫಿ, ಶುಶ್ರೂಷಕ ಅಧಿಕಾರಿ, ಮಿಮ್ಸ್ ರಕ್ತನಿಧಿ ಕೇಂದ್ರ, ಮಂಡ್ಯ
– ಎಚ್.ಶಿವರಾಜು