Advertisement

ಔಷಧೀಯ ಸಸಿ ನೆಡಿ, ಬೆಳೆಸಿ: ನ್ಯಾಯಾಧೀಶ ಜಿ.ಆರ್‌.ಶೆಟ್ಟರ

10:13 AM Jun 09, 2022 | Team Udayavani |

ಕಲಘಟಗಿ: ರೋಗ ಗುಣಪಡಿಸುವಂತಹ ಅಗಾಧ ಶಕ್ತಿ ನಮ್ಮ ದೇಶದ ಮಣ್ಣಿನಲ್ಲಿದ್ದು, ಅದರ ಸಫಲತೆ ಪಡೆಯಲು ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಔಷಧೀಯ ಸಸಿಗಳನ್ನು ನೆಟ್ಟು ಬೆಳೆಸಿ ಮುಂದಿನ ಪೀಳಿಗೆಗೆ ಅದನ್ನು ಧಾರೆ ಎರೆಯಲು ಮುಂದಾಗಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ಜಿ.ಆರ್‌.ಶೆಟ್ಟರ ನುಡಿದರು.

Advertisement

ಕಲಘಟಗಿ ತಾಲೂಕು ಕಾನೂನು ಸೇವಾ ಸಮಿತಿ, ಅಭಿಯೋಜನಾ ಇಲಾಖೆ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಔಷ ಧೀಯ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿರುವುದರಿಂದ ಇಲ್ಲಿ ಯಾವುದೇ ರೀತಿಯ ಮಹಾಮಾರಿ ರೊಗಗಳು ಬಹಳ ದಿನಗಳ ಕಾಲ ಉಳಿಯಲ್ಲ. ನಾವು ಪರಿಸರದ ಜತೆಗೆ ಎಷ್ಟು ಸ್ನೇಹವನ್ನು ಇಟ್ಟುಕೊಳ್ಳುತ್ತೇವೆಯೋ ಅಷ್ಟು ರೋಗದಿಂದ ಮುಕ್ತರಾಗುತ್ತೆವೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡ ಮರಗಳನ್ನು ತಮ್ಮ ಮಕ್ಕಳಂತೆ ಬೆಳೆಸಿ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದರು.

ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ ಮಾತನಾಡಿ, ಪ್ರತಿಯೊಬ್ಬರೂ ಪರಿಸರ ಪ್ರೇಮಿಗಳಾದಲ್ಲಿ ಅರಣ್ಯೀಕರಣ ಹೆಚ್ಚಿಸಲು ಸಹಕಾರಿಯಾಗುತ್ತದೆ. ತಮ್ಮ ಮನೆ ಹಿತ್ತಲಿನಲ್ಲಿ ಔಷಧೀಯ ಗಿಡಗಳನ್ನು ಬೆಳೆಸಬೇಕು. ಇದರಿಂದ ಕುಟುಂಬ ಸದಸ್ಯರು ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಪರಿಶುದ್ಧ ಗಾಳಿಯನ್ನು ಪಡೆಯಲು ಸಾಧ್ಯ. ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಕಾರಣ ಎಲ್ಲರೂ ಕಡ್ಡಾಯವಾಗಿ ಸಸಿ ನೆಟ್ಟು ಅದನ್ನು ಉಳಿಸಿ ಬೆಳೆಸಬೇಕು ಎಂದರು.

ಉಪವಲಯ ಅರಣ್ಯಾಧಿಕಾರಿ ಆರ್‌. ಜೆ.ಕಡೆಮನಿ, ನ್ಯಾಯವಾದಿಗಳಾದ ಮಂಜುನಾಥ ಕಂಪ್ಲಿ, ವಿ.ಬಿ. ಶಿವನಗೌಡ್ರ, ಎಸ್‌. ಜೆ.ಸುಂಕದ, ಆರ್‌.ಎಂ.ತೋಟಗಂಟಿ, ಎಮ್‌. ಎಸ್‌.ಧನಿಗೊಂಡ, ಎಂ.ಜಿ.ಚೌಧರಿ, ಎನ್‌. ಎಸ್‌. ಉಪಾಧ್ಯಾಯ, ಎಸ್‌.ಜಿ.ಕುಲಕರ್ಣಿ, ವಾಸಂತಿ ಖಾನಪೂರ, ಎಸ್‌.ಆಯ್‌.ಕುಂಬಾರ, ಕೆ.ಬಿ.ಗುಡಿಹಾಳ, ಆರ್‌.ವಾಯ್‌.ರೊಳ್ಳಿ, ಅಣ್ಣಪ್ಪ ಒಲೇಕಾರ ಸೇರಿದಂತೆ ಅರಣ್ಯ ಇಲಾಖೆ ಹಾಗೂ ನ್ಯಾಯಾಲಯದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next