Advertisement

ಹುಟ್ಟುಹಬ್ಬದಂದು ಗಿಡ ನೆಟ್ಟು ಬೆಳೆಸಿ: ಕೃಷ್ಣಪ್ಪ

11:45 PM Jun 10, 2019 | mahesh |

ಮಹಾನಗರ: ಸುಭದ್ರ ಭವಿಷ್ಯಕ್ಕಾಗಿ ಪರಿಸರ ಉಳಿಸಬೇಕು. ಪ್ರತಿಯೊಬ್ಬರೂ ಹುಟ್ಟುಹಬ್ಬಕ್ಕೆ ಗಿಡವನ್ನು ನೆಟ್ಟು ಬೆಳೆಸುವುದಕ್ಕೆ ಬದ್ಧರಾಗಬೇಕು ಎಂದು ನ್ಯಾಶನಲ್‌ ಮಿನರಲ್‌ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌ ನಿವೃತ್ತ ಉದ್ಯೋಗಿ, ವೃಕ್ಷಪ್ರೇಮಿ ಹಸಿರು ಕೃಷ್ಣಪ್ಪ ಹೇಳಿದರು.

Advertisement

ಶನಿವಾರ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಆಡಳಿತದಲ್ಲಿರುವ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಶ್ರೀ ಭಾರತೀ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಪರಿಸರ ದಿನಾಚರಣೆಯಲ್ಲಿ ಗಿಡವನ್ನು ನೆಟ್ಟು ಅವರು ಮಾತನಾಡಿದರು. ಕಾಡು ಉಳಿಸಿದಾಗ ನಾಡು ಉಳಿಯುತ್ತದೆ. ಗಿಡ ಮರ ಬೆಳೆಸಿ, ಮಂಗಳೂರನ್ನು ಉಳಿಸುವ ಪಣ ತೊಡಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಉಸಿರಾಗಬೇಕು ಎಂದರು.

ನೀರಿನ ದುರ್ಬಳಕೆ ನಿಲ್ಲಿಸಿ
ಆಡಳಿತಾಧಿಕಾರಿ ಪ್ರೊ| ಶಂಕರ ಭಟ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀರಿನ ದುರ್ಬಳಕೆಯನ್ನು ನಿಲ್ಲಿಸಬೇಕು. ದೇಶದಲ್ಲಿ ಶೇ.20ಕ್ಕಿಂತ ಕಡಿಮೆ ಇರುವ ಕಾಡನ್ನು ಶೇ.40ಕ್ಕೆ ಏರಿಸಬೇಕು. ಯುವಕರು ಕರ್ತವ್ಯಬದ್ಧರಾದಾಗ ಇದು ಸಾಧ್ಯವಾಗುತ್ತದೆ. ಸ್ವತ್ಛ ಮತ್ತು ಹಸುರು ದೇಶವನ್ನಾಗಿಸಲು ವಿದ್ಯಾರ್ಥಿ ಜೀವನದಲ್ಲೇ ಪಣತೊಡಬೇಕು ಎಂದು ಹೇಳಿದರು.

ಮರಗಳನ್ನು ನಾಶ ಮಾಡದಿರಿ
ಪದವಿ ಕಾಲೇಜು ಪ್ರಾಂಶುಪಾಲ ಜೀವನ್‌ದಾಸ್‌ ಎ. ಅವರು ಮಾತನಾಡಿ, ಪರಿಸರ ಸ್ವತ್ಛವಾದಾಗ ಗಿಡ ಮರಗಳಲ್ಲಿ ಪ್ರೀತಿ ಹೆಚ್ಚಾದಾಗ ಸಮಾಜಕ್ಕೆ ಪ್ರಯೋಜನವಾಗುತ್ತದೆ. ಆದುದರಿಂದ ಮರಗಳನ್ನು ನಾಶ ಮಾಡದೇ ಉಳಿಸಿ, ಬೆಳೆಸುವ ಪ್ರಯತ್ನವಾಗಬೇಕು ಎಂದರು.

ಪ.ಪೂ. ಪ್ರಾಂಶುಪಾಲೆ ವಿದ್ಯಾ ಭಟ್‌ ಉಪಸ್ಥಿತರಿದ್ದರು. ಪಲ್ಲವಿ ಸ್ವಾಗತಿಸಿದರು. ಧನುಷ್‌ ನಿರೂಪಿಸಿದರು. ಮೋಹಿತ್‌ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಸಿಂಚನಾ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next