Advertisement

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಯೋಜನೆ

01:23 PM Feb 27, 2020 | Suhan S |

ಬೀಳಗಿ: ಎಲ್ಲ ಸರಕಾರಿ ಶಾಲೆಗಳ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಮಳೆ ನೀರುಕೊಯ್ಲು ನಿರ್ಮಾಣ, ಅಡುಗೆಗೆ ಸಂಬಂ ಧಿಸಿದ ಸಸ್ಯ ಉದ್ಯಾನ ಸೇರಿದಂತೆ ಹಲವು ಮೂಲ ಸೌಕರ್ಯ ಕಡ್ಡಾಯಗೊಳಿಸುವ ಮೂಲಕ, ಸರಕಾರಿ ಶಾಲೆಗಳನ್ನು ಉತ್ತಮ ದರ್ಜೆಯಲ್ಲಿ ಅಭಿವೃದ್ಧಿ ಪಡಿಸುವ ಕುರಿತು ಕಾರ್ಯಯೋಜನೆ ಸಿದ್ಧಗೊಳಿಸುವುದಾಗಿ ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದರು.

Advertisement

ತಾಲೂಕಿನ ಯತ್ನಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಭೇಟಿ ನೀಡಿದ ಅವರು, ಅಲ್ಲಿನ ಮಾದರಿ ಬಿಸಿಯೂಟದ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರಿ ಶಾಲೆಗಳಲ್ಲಿ ಮಕ್ಕಳ ಪೌಷ್ಟಿಕತೆಯ ದೃಷ್ಟಿಯಿಂದ ಗುಣಮಟ್ಟದ ಊಟ ಮತ್ತು ಉತ್ತಮ ಅಕ್ಷರಭ್ಯಾಸ ದೊರಕುವಂತಾಗಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವುದು ಸವಾಲಿನ ಕೆಲಸವಾಗಿದೆ. ಆದರೂ, ಸಂಬಂ ಧಿಸಿದ ಇಲಾಖೆಗಳು ಮತ್ತು ಶಿಕ್ಷಕ ವರ್ಗದವರು ಪ್ರಾಮಾಣಿಕ ಪ್ರಯತ್ನ ಮಾಡುವುದು ಅವಶ್ಯವಿದೆ ಎಂದರು.

ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಗಳೇನು ಕಡಿಮೆಯಿಲ್ಲ. ಶಿಸ್ತು ಬದ್ಧವಾದ ಸಮವಸ್ತ್ರ, ಇಂಗ್ಲಿಷ್‌ ಕಲಿಕೆಯ ವಾತಾವರಣಕ್ಕೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲು ಪಾಲಕರು ಮನಸೋಲುತ್ತಾರೆ. ಸರಕಾರಿ ಶಾಲೆಗಳಲ್ಲಿಯೂ ಕೂಡ ಶಿಸ್ತಿನ ಸಮವಸ್ತ್ರ, ಗುಣಮಟ್ಟದ ಶಿಕ್ಷಣ ನೀಡುವ ಮುಕ್ತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ ಆಗಬೇಕಿದೆ. ಖಾಸಗಿ ಶಾಲೆಯಿಂದ, ಸರಕಾರಿ ಶಾಲೆಗಳಿಗೆ ಮಕ್ಕಳು ಮುಖ ಮಾಡುವಂತಾಗಬೇಕು. ಇದಕ್ಕೆ ಬೇಕಾದ ಎಲ್ಲ ಮೂಲ ಸೌಕರ್ಯ ನೀಡುವ ಮೂಲಕ ಸರಕಾರಿ ಶಾಲೆ ಸದೃಢಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮಕ್ಕಳ ಆರೋಗ್ಯ ದೃಷ್ಟಿಯಿಂದ ಬಾಳೆಹಣ್ಣು ನೀಡಲು ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಬುಧವಾರ ತಾಲೂಕಿನ ಎಲ್ಲ ಶಾಲೆಯ ಮಕ್ಕಳಿಗೆ ಒಂದುದಿನ ಬಾಳೆಹಣ್ಣು ನೀಡಲಾಗಿದೆ. ಇದರ ಖರ್ಚುವೆಚ್ಚದ ಕುರಿತು ತುಲನೆ ಮಾಡುವ ಮೂಲಕ, ಮುಂದೆ ಪ್ರತಿ ವಾರಕ್ಕೊಮ್ಮೆ ಮಕ್ಕಳಿಗೆ ಬಾಳೆಹಣ್ಣು ನೀಡಲು ಸಾಧ್ಯವೇ ಎನ್ನುವ ಚಿಂತನೆ ನಡೆದಿದೆ ಎಂದರು.

ತಾಪಂ ಇಒ ಎಂ.ಕೆ. ತೊದಲಬಾಗಿ, ಡಿಡಿಪಿಐ ಶ್ರೀಶೈಲ ಬಿರಾದಾರ, ಬಿಇಒ ಹನುಮಂತಗೌಡ ಮಿರ್ಜಿ, ಕ್ಷೇತ್ರ ಸಮನ್ವಯಾ ಧಿಕಾರಿ ರಮೇಶ ವಡವಾಣಿ, ಅಕ್ಷರ ದಾಸೋಹ ಜಿಲ್ಲಾ ಶಿಕ್ಷಣಾಧಿಕಾರಿ ಎನ್‌.ವೈ. ಕುಂದರಗಿ, ವಿಷಯ ಪರಿವೀಕ್ಷಕ ಡಿ.ಎಂ.ಯಾವಗಲ್ಲ, ಮುಖ್ಯೋಪಾಧ್ಯಾಯ ಎಂ.ಎಸ್‌. ವಾಡೇದ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next