Advertisement
ನಗರದ ಜಿಲ್ಲಾ ಪಂಚಾಯ್ತಿ ಭವನದಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಆದರ್ಶ ಗ್ರಾಮ ಯೋಜನೆ ಮತ್ತು ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಗಳುಪ್ರತ್ಯೇಕಯೋಜನೆಗಳಾಗಿವೆ.ಪ್ರಧಾನಮಂತ್ರಿಆದರ್ಶ ಗ್ರಾಮ ಯೋಜನೆಯಡಿ ಶೇ.50ಕ್ಕಿಂತ ಹೆಚ್ಚಿಗೆ ಪರಿಶಿಷ್ಟ ಜಾತಿ ಸಮುದಾಯ ವಾಸಿಸುವ ಗ್ರಾಮಗಳನ್ನುಆಯ್ಕೆ ಮಾಡಬೇಕಾಗಿದೆ. ಗ್ರಾಮದ ಅಭಿವೃದ್ಧಿಗೆ ತಲಾ 41 ಲಕ್ಷ ರೂ. ಅನುದಾನ ನಿಗದಿಯಾಗಿದೆ. ಇಲ್ಲಿಯವರೆಗೆಏನೇನುಕ್ರಮವಹಿಸಿದ್ದೀರಿ ಎಂದು ಸಂಸದರು ಅಧಿಕಾರಿಗಳನ್ನು ಪ್ರಶ್ನಿಸಿದರು.
Related Articles
Advertisement
820 ಲಕ್ಷ ರೂ. ಅನುದಾನ ಮಂಜೂರು: ಈಗಾಗಲೇ 2018-19ನೇ ಸಾಲು ಮತ್ತು 2019-20ನೇ ಸಾಲಿನಲ್ಲಿಗುರುತಿಸಲಾಗಿರುವ 20 ಗ್ರಾಮಗಳಿಗೆ ಒಟ್ಟು 820 ಲಕ್ಷ ರೂ. ಅನುದಾನ ಮಂಜೂರಾಗಿದೆ. ಈ ಪೈಕಿ 307.70ಲಕ್ಷ ರೂ. ಬಿಡುಗಡೆಯಾಗಿದೆ. ರಾಮನಗರ ತಾಲೂಕಿನದೊಡ್ಡಮಣ್ಣಗುಡ್ಡೆ, ಕಲ್ಲುಗೋಪಹಳ್ಳಿ, ಬೆತ್ತಂಗೆರೆ, ಕನಕಪುರ ತಲೂಕಿನ ದೇವರಹಳ್ಳಿ, ಮೇಡಮಾರನಹಳ್ಳಿ, ಅರಳಾಳು, ಚೌಕಸಂದ್ರ, ಬಿಜ್ಜಹಳ್ಳಿ, ವಾಡೇದೊಡ್ಡಿ, ತೇರಿನ ದೊಡ್ಡಿ, ದೊಡ್ಡತಾಂಡ್ಯ, ಗುಳಹಟ್ಟಿಕಾವಲ್, ಚನ್ನಪ ಟ್ಟಣ ತಾಲೂಕಿನ ದೇವರಹೊಸಹಳ್ಳಿ, ಕಲ್ಲಾಪುರ, ನೀಲಸಂದ್ರ, ಬಾಚಹಳ್ಳಿ, ತಿಮ್ಮಸಂದ್ರ, ಮಂಗಳವಾರಪೇಟೆ. ಮಾಗಡಿತಾಲೂಕಿನ ಮಂಚನಬೆಲೆ, ಹೇಳಿಗೆಹಳ್ಳಿಗಳಿಗೆ ಅನುದಾನಬಿಡುಗಡೆಯಾಗಿದೆ. ಈ ಗ್ರಾಮಗಳಿಗೆ ಒಟ್ಟು 176 ಕಾಮಗಾರಿಗಳನ್ನು ಕ್ರಿಯಾಯೋಜನೆಯಲ್ಲಿ ಸೇರಿಸಲಾಗಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ಸಂಸದರ ಅಸಮಾಧಾನ: ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಡಿ.ಕೆ.ಸುರೇಶ್, ಈ 20 ಗ್ರಾಮಗಳಿಗೆ ಸಿದ್ಧಪಡಿಸಿರುವ ಯೋಜನೆ ಸಮಂಜಸವಾಗಿ ಕಾಣುತ್ತಿಲ್ಲ. ಕಾರ್ಯಕ್ರಮ ಅನುಷ್ಠಾನವಾದರೆ ಅದರ ಫಲಿತಾಂಶ ಗ್ರಾಮದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರಬೇಕು.ಆದರೆ, ಅಧಿಕಾರಿಗಳು ನೀಡಿರುವ ಯೋಜನೆಯ ರೂಪುರೇಷೆಗಳು ತಮಗೆ ಸಮಾಧಾನ ತಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕ್ರಿಯಾ ಯೋಜನೆ ಸಿದ್ಧಪಡಿಸುವಾಗ ಪರಿಶಿಷ್ಟ ಜಾತಿ, ಪಂಗಡದ ಕಾಲೋನಿಗಳ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ಸರ್ಕಾರ ನೀಡಿರುವ ಸೂಚ್ಯಂಕಗಳನ್ನು ನೋಡಿಕೊಂಡು ನರೇಗಾ, ಕೃಷಿ ಇಲಾಖೆ, ಗ್ರಾಮ ಪಂಚಾಯತಿ, ತಾಲೂಕು ಪಂಚಾಯಿತಿ ಮತ್ತಿತರ ಅನುದಾನ ಬಳಸಿಕೊಳ್ಳಲು ಅವಕಾಶವಿದ್ದಲ್ಲಿ ಅವುಗಳನ್ನು ಸಹಬಳಸಿಕೊಂಡುಯೋಜನೆ ಸಿದ್ಧಪಡಿಸಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್. ಕೆ, ಜಿಲ್ಲಾ ಪಂಚಾಯತ್ ಸಿಇಒ ಇಕ್ರಂ, ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.
10 ದಿನಗಳ ಕಾಲ ಗಡುವು :
ಆಯಾ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ ಮತ್ತು ಅಧಿಕಾರಿಗಳು ಜಂಟಿಯಾಗಿ ಆಯ್ಕೆಯಾಗಿರುವ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ಪಟ್ಟಿಮಾಡಬೇಕು. ಹೀಗೆ ಸಿದ್ಧವಾ ಪ ಟ್ಟಿಯನ್ನು ಜಿಲ್ಲಾ ಪಂಚಾಯ್ತಿ ಸಿಇಒ ಅವರ ಬಳಿ ಚರ್ಚಿಸಿ, 10 ದಿನದಲ್ಲಿ ಕ್ರಿಯಾ ಯೋಜನೆ ಸಿದ್ದಪಡಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್ ಸೂಚನೆ ನೀಡಿದರು.