Advertisement

ಜನವರಿಯಿಂದ ಕೃಷಿಭೂಮಿಗೆ ಕೋರೆ ನೀರು ಬಳಸುವ ಯೋಜನೆ

06:50 AM Aug 13, 2017 | Team Udayavani |

ವಿಟ್ಲ: ಮಳೆಗಾಲದಲ್ಲಿ ನೀರು ತುಂಬಿ ಬೃಹತ್‌ ಕೆರೆಗಳಾಗಿ ಪರಿವರ್ತನೆಗೊಳ್ಳುವ ಕಲ್ಲಿನ ಕೋರೆಗಳನ್ನು ಸರಕಾರ ಮುಚ್ಚಿಸುತ್ತದೆ. ಇಂತಹ ಕೋರೆಗಳಿಂದ ಅನೇಕ ಜೀವಹಾನಿ ಸಂಭವಿಸಿರುವುದರಿಂದ ಮುಚ್ಚುವುದು ಅನಿವಾರ್ಯ ಎಂಬಂತಾಗಿದೆ. ಆದರೆ ಇಂತಹ ಕೋರೆಯಲ್ಲಿ ಜಲಸಂರಕ್ಷಣೆ ಮಾಡುತ್ತಿರುವ  ಕೃಷಿಕರೋರ್ವರು ಮಾದರಿಯಾಗಿದ್ದಾರೆ.  ಅಳಿಕೆ ಗ್ರಾಮದ ಕಲ್ಲೆಂಚಿಪಾದೆ ಬಾಂಡೀಲು ನಿವಾಸಿ, ಅಳಿಕೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉದ್ಯೋಗಿ ಚಂದ್ರಹಾಸ ಅವರು ಈ ಕಾರ್ಯ ಮಾಡುತ್ತಿದ್ದಾರೆ. ತಮ್ಮ ವರ್ಗ ಭೂಮಿ ಮತ್ತು ಕುಮ್ಕಿಯಲ್ಲಿರುವ ನಿರುಪಯುಕ್ತ ಕಲ್ಲಿನ ಕೋರೆಗಳಲ್ಲಿ ಮಳೆ ನೀರು ಸಂಗ್ರಹಿಸಿ ನೀರು ಇಂಗಿಸುವಂತೆ ಮಾಡಿದ್ದಾರೆ.

Advertisement

ಜಿ.ಪಂ. ಯೋಜನೆ ಇತ್ತು ಕಲ್ಲೆಂಚಿಪಾದೆ ಭಾಗದ ಜನರ ನೀರಿನ ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ಜಿ. ಪಂ. ಮತ್ತು ಸ್ಥಳೀಯರ ಸಹಕಾರದೊಂದಿಗೆ ಈ ಭಾಗದಲ್ಲಿನ ನಿರುಪಯುಕ್ತ ಕಲ್ಲಿನ ಕೋರೆಯನ್ನು ಸ್ವತ್ಛಗೊಳಿಸಿ ಕೆರೆಯಾಗಿ ಅಭಿವೃದ್ಧಿಪಡಿಸಲು ನೀರು ಸಂಗ್ರಹಕ್ಕೆ ದಾರಿ
ಯಾರಾದರೂ ಈಜಾಡಿ ಅವಘಡ ಉಂಟಾಗಬಹುದು ಅಥವಾ ಇನ್ನಿತರ ರೀತಿಯಲ್ಲಿ ದುರಂತ ಸಂಭವಿಸಬಹುದು ಎಂಬ ಭಯದಿಂದ  ಹೆಚ್ಚಿನವರು ಕಲ್ಲಿನ ಕೋರೆಗಳಲ್ಲಿ ನೀರು ಸಂಗ್ರಹಿಸಲು ಹಿಂದೇಟು ಹಾಕುತ್ತಾರೆ. ಆದರೆ ಇದೀಗ ಚಂದ್ರಹಾಸ ಅವರ ಪ್ರಯತ್ನ ಇತರ ಕೆಲವರಿಗೆ ಪ್ರೇರಣೆ
ಯಾಗಲಿದೆ. ಸೂಕ್ತ ಸುರಕ್ಷಾ ಕ್ರಮಗಳೊಂದಿಗೆ ಒಂದಷ್ಟು ಯೋಜಿತವಾಗಿ ಜಲಸಂರಕ್ಷಣೆ ಮಾಡಿದರೆ ನಿಷ್ಪ್ರಯೋಜಕ, ಅಪಾಯಕಾರಿಯಾಗಿ ಉಳಿದಿರುವ ಇಂತಹ ಕಲ್ಲಿನ ಕೋರೆಗಳಿಗೂ ಜೀವ ಬಂದೀತು. ಅಪಾಯವೂ ದೂರವಾದೀತು. ಜಲ ಸಂರಕ್ಷಣೆ ಆಗಲು ಸಾಧ್ಯ.

ಸುರಕ್ಷತಾ ಕ್ರಮ
ನೀರು ಸಂಗ್ರಹಿಸಿದ ಕಲ್ಲಿನ ಕೋರೆಯ ಸುತ್ತ ಬೇಲಿ ಹಾಕಿ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ಫಲಕ ಅಳವಡಿಸಲಾಗಿದೆ.

ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next