Advertisement

ಕೆರೆ ತುಂಬಿಸುವ ಯೋಜನೆ ವರದಾನ

08:03 PM Jul 13, 2021 | Team Udayavani |

ಮಲ್ಲಿಕಾರ್ಜುನ ಕಲಕೇರಿ

Advertisement

ಗುಳೇದಗುಡ್ಡ: ಹೊಸ ತಾಲೂಕು ಘೋಷಣೆಯಾದ ಬಳಿಕ ಈ ಮಹತ್ವದ ಕೆರೆಗಳಾಗಿರುವ ಗಂಜಿ ಕೆರೆ, ಪವರ್ತಿ ಕೆರೆಗಳಿಗೆ ನೀರು ತುಂಬಿಸುವ ರೈತರಿಗೆ ವರದಾನವಾಗುವ ಯೋಜನೆ ಜಾರಿಯಾಗುತ್ತಿದೆ.

ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಪ್ರಯತ್ನದ ಫಲ, ಬಿಜೆಪಿ ಸರಕಾರದ ಕಾಳಜಿಯಿಂದ 184 ಹೆಕ್ಟೇರ್‌ ಪ್ರದೇಶಗಳ ಭೂಮಿ ವ್ಯಾಪ್ತಿಗೆ ನೀರು ನೀಡುವ ಕೆರೆಗಳಿಗೆ ನೀರು ಹರಿಯುವ ಸಮಯ ಒದಗಿ ಬಂದಿದೆ. ಈ ಕಾರ್ಯ ಸಫಲವಾಗುವಲ್ಲಿ ಸಿದ್ದರಾಮಯ್ಯ ಅವರು ಸರಕಾರದ ಮೇಲೆ ಒತ್ತಡ ಹಾಕುವ ಮೂಲಕ ತಾಲೂಕಿನ ಜನರ ಪಾಲಿಗೆ ಭಗೀರಥನಂತಾಗಿದ್ದಾರೆ ಎಂಬ ಮಾತು ರೈತ ವಲಯದಲ್ಲಿ ಕೇಳಿ ಬಂದಿದೆ.

ತಾಲೂಕಿನ ಪರ್ವತಿ ಹಾಗೂ ಗಂಜಿ ಕೆರೆಗೆ ನೀರು ತುಂಬಿಸಲು ಅಂದಾಜು 12 ಕೋಟಿ ವೆಚ್ಚದ ಯೋಜನೆ ಮಂಜೂರಿ ಮಾಡಿಸಿದ್ದು, ಅದರಲ್ಲಿ ಈಗಾಗಲೇ 10.77 ಕೋಟಿ ರೂ. ವೆಚ್ಚದ ಟೆಂಡರ್‌ ಆಗಿದ್ದು, ವಿಜಾಪುರ ಸಣ್ಣ ನೀರಾವರಿ ಮತ್ತು ಅಂತರಜಲ ಅಭಿವೃದ್ಧಿ ಇಲಾಖೆಯ ಗುಳೇದಗುಡ್ಡ ತಾಲೂಕಿನ ಪರ್ವತಿ ಹಿರೇಕೆರೆ, ಗಂಜಿಕೆರೆಗಳಿಗೆ ಆಸಂಗಿ ಹತ್ತಿರದ ಮಲಪ್ರಭಾ ನದಿಯ ಬ್ಯಾರೇಜ್‌ ನಿಂದ ನೀರು ತುಂಬಿಸುವ ಯೋಜನೆ ಜಾರಿಗೊಳ್ಳುತ್ತಿದೆ. ಸರಕಾರದ ಮೇಲೆ ಒತ್ತಡ ಹಾಕಿ ಸಿದ್ದರಾಮಯ್ಯನವರು ಯೋಜನೆ ಮಂಜೂರಿ ಮಾಡಿಸಿದ್ದು, ಇಂದು ಆ ಯೋಜನೆಗೆ ಶಂಕುಸ್ಥಾಪನೆ ಸಿಗಲಿದೆ. ಇದರಿಂದ ಹಲವು ವರ್ಷಗಳ ರೈತರ ಕನಸು ಈಗ ನನಸಾಗುವ ಹಂತ ಬಂದಿದೆ.

ನೀರಿನ ಸಂಗ್ರಹಣಾ ಸಾಮರ್ಥ್ಯ: ಪರ್ವತಿ ಕೆರೆಯು ಸುಮಾರು 30 ಎಂಸಿಎಫ್‌ಟಿ ಮತ್ತು ಗಂಜಿಗೆರೆಗೆ 20 ಎಂಸಿಎಫ್‌ಟಿ ನೀರು ಸಂಗ್ರಹ ಮಾಡಬಹುದಾದ ಸಾಮರ್ಥ್ಯವಿದೆ. ಈ ಎರಡು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಂಡರೇ ಮುಂಗಾರಿ ಮತ್ತು ಹಿಂಗಾರಿ ಬೆಳೆಗೆ ಪರ್ವತಿ(ಹಿರೆಕೆರೆ)ಯ 102 ಹೆಕ್ಟೇರು ನೀರು ಮತ್ತು ಗಂಜಿಕೆರೆಗೆ 82 ಹೆಕ್ಟೇರ್‌ ಸೇರಿ ಒಟ್ಟು 184 ಹೆಕ್ಟೇರ್‌ ಭೂಮಿಗೆ ನೀರು ಹರಿಸಬಹುದಾಗಿದೆ.

Advertisement

ಎಷ್ಟು ಗ್ರಾಮಗಳಿಗೆ ನೀರು?: ಅಂದಾಜು 12 ಕೋಟಿ ಯೋಜನೆ ಇದಾಗಿದ್ದು, ಈಗಾಗಲೇ 10ಕೋಟಿ 77 ಲಕ್ಷ ಟೆಂಡರ್‌ ಆಗಿದೆ. ಈ ಕೆರೆ ತುಂಬಿಸುವ ಯೋಜನೆಯಿಂದ ಗುಳೇದಗುಡ್ಡ ಭಾಗದ ಪರ್ವತಿ, ಕೆರೆಖಾನಾಪುರ, ಹುಲ್ಲಿಕೇರಿ, ಮುರುಡಿ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಲು ಸಹ ಅನುಕೂಲ ವಾಗಲಿದೆ. ಕೆರೆಗಳಿಗೆ ನೀರು ತುಂಬಿಸ ಬೇಕೆಂಬುದು ಬಹಳ ದಿನಗಳಿಂದ ಕೇಳಿ ಬರುತ್ತಿತ್ತು. ಆದರೆ, ಆ ಕಾರ್ಯವನ್ನು ವಿಪಕ್ಷ ನಾಯಕ ಸಿದ್ಧರಾಮಯ್ಯನವರು ಕೊನೆಗೂ ಕೆರೆ ತುಂಬಿಸುವ ಯೋಜನೆ ಜಾರಿಗೊಳಿಸಿದ್ದಾರೆ.

ರೇಸಿಂಗ್‌ ಮೇನ್‌: 7550 ಮೀಟರ್‌ ಎಂಎಸ್‌ ಪೈಪ್‌ಗ್ಳನ್ನು 500 ಎಂ.ಎಂ ವ್ಯಾಸ್‌ ಇರುವ ಪೈಪ್‌ ಗಳನ್ನು ಅಳವಡಿಸಲಾಗುತ್ತಿದೆ. 900 ಮೀಟರ್‌, 600 ಮೀಟರ್‌ ವ್ಯಾಸ ಇರುವ ಪೈಪ್‌ಗ್ಳನ್ನು ಆರ್‌ಸಿಸಿ ಪೈಪ್‌ ಗಳನ್ನು ಹತ್ತಿರ ಇರುವ ಗಂಜಿಕೆರೆಗೆ ಅಳವಡಿಸಲಾಗುವುದು. ಎರಡು ಪಂಪ್‌ ಗಳನ್ನು ಅಳವಡಿಸಲಾಗುವುದು 150 ಎಚ್‌ಪಿ ಸಾಮರ್ಥ್ಯ ಇರುವುದು. 150 ಎಚ್‌ಪಿಯ ಸಾಮರ್ಥ್ಯ ಇರುವ ಒಂದು ಪಂಪ್‌ ಹೆಚ್ಚುವರಿಯಾಗಿ ಅಳವಡಿಸಲು ಯೋಜನೆಯಡಿ ಹಾಕಿಕೊಳ್ಳಲಾಗಿದೆ. ಗಂಜಿಕೆರೆ 40ಎಕರೆ ವಿಸ್ತೀರ್ಣ ಹೊಂದಿದ್ದು, ಈ ಕೆರೆಯು ಮಳೆಗಾಲದಲ್ಲಿ 40ಎಕರೆಯಲ್ಲಿನ ಕೆರೆಗೆ ತನ್ನ ವ್ಯಾಪ್ತಿಯಲ್ಲಿ ಅಷ್ಟೇ ನೀರು ಹರಿದು ಬರದೇ ಇನ್ನೂ 10-20 ಎಕರೆಯಷ್ಟು ಭೂಮಿ ಮುಳುಗು ವಷ್ಟು ಈ ಕೆರೆಗೆ ನೀರು ಬರುತ್ತದೆ. ಬೇಸಿಗೆ ಸಮಯದಲ್ಲಿ ನೀರಿಲ್ಲದೇ ಒಣಗುತ್ತಿದ್ದ ಕೆರೆಗಳಿಗೆ ನೀರು ಹರಿಸುತ್ತಿರುವುದು ರೈತರಲ್ಲಿ ಸಂತಸ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next