Advertisement

ಮಧ್ಯಮ ವರ್ಗದ ಕಲ್ಯಾಣಕ್ಕೆ ಯೋಜನೆ

10:41 AM Jan 10, 2019 | |

ಸೊಲ್ಲಾಪುರ: ಸಬಕಾ ಸಾಥ್‌, ಸಬಕಾ ವಿಕಾಸ್‌ ಇದು ಕೇಂದ್ರ ಸರ್ಕಾರದ ಗುರಿಯಾಗಿದ್ದು, ದೇಶದಲ್ಲಿರುವ ಬಡವರು, ಕಾರ್ಮಿಕರು ಮತ್ತು ಮಧ್ಯಮ ವರ್ಗದವರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುವ ಪ್ರಯತ್ನದಲ್ಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಜಿಲ್ಲೆಯ ವಿಕಾಸಕ್ಕಾಗಿ ವಿವಿಧ ಯೋಜನೆಗಳ ಭೂಮಿ ಪೂಜೆಯೊಂದಿಗೆ ಲೋಕಾರ್ಪಣೆ ಮಾಡಿದ ಬಳಿಕ ನಗರದ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯ ಸೊಲ್ಲಾಪುರ-ತುಳಜಾಪುರ- ಉಸ್ಮಾನಾಬಾದ್‌ ರಾಷ್ಟ್ರೀಯ ಚತುಷ್ಪತ ಮಹಾಮಾರ್ಗ, ಸ್ವಚ್ಛ ಭಾರತ ಅಭಿಯಾನ ಅಂತರ್ಗತವಾಗಿ ಮಲಃನಿಸ್ಸಾರಣ ಯಂತ್ರ ಮತ್ತು ಚರಂಡಿ ನೀರಿನ ಪ್ರಕ್ರಿಯೆ ಮಾಡುವ ಮೂರು ಯಂತ್ರಗಳ ಲೋಕಾರ್ಪಣೆ, ಸೊಲ್ಲಾಪುರ ಸ್ಮಾರ್ಟ್‌ ಸಿಟಿಯಲ್ಲಿ ವಿಭಾಗಿತವಾದ ಆಧಾರದ ಮೇಲೆ ನೀರು ಸರಬರಾಜು ಹಾಗೂ ಸ್ವಚ್ಛತೆ ಯಂತ್ರಗಳ ಸುಧಾರಣೆ ವಿಷಯದ ಸಂಕಲ್ಪ, ಉಜನಿ ಅಣೆಕಟ್ಟಿನಿಂದ ಸೊಲ್ಲಾಪುರ ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಮತ್ತು ಅಮೃತ ಯೋಜನೆ ಅಂತರ್ಗತವಾಗಿ ಮಲಃ ನಿಸ್ಸಾರಣ ಯೋಜನೆ ಯಶಸ್ವಿಗಾಗಿ ಮತ್ತು ಪ್ರಧಾನಮಂತ್ರಿ ಆವಾಸ ಯೋಜನೆ ಅಂತರ್ಗತವಾಗಿ 30 ಸಾವಿರ ಮನೆಗಳ ಭೂಮಿ ಪೂಜೆಯನ್ನು ಪ್ರಧಾನಿ ಮೋದಿ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸೊಲ್ಲಾಪುರ-ತುಳಜಾಪುರ-ಉಸ್ಮಾನಾಬಾದ್‌ ರೈಲ್ವೆ ಮಾರ್ಗಕ್ಕಾಗಿ ಒಂದು ಸಾವಿರ ಕೋಟಿ ರೂ. ಮಂಜೂರು ಮಾಡಾಲಗುವುದು. ರಾಜ್ಯದಲ್ಲಿರುವ ನಾಲ್ಕು ವಿಮಾನ ನಿಲ್ದಾಣಗಳ ವಿಕಾಸ ಕಾರ್ಯ ನಡೆಯುತ್ತಿದ್ದು, ಸೊಲ್ಲಾಪುರದಲ್ಲಿಯೂ ವಿಮಾನ ಸೇವೆ ಕೂಡಲೇ ಪ್ರಾರಂಭವಾಗಲಿದೆ. ಜಿಲ್ಲೆಯ ಸಲುವಾಗಿ ಕೊಟ್ಟ ಮಾತನ್ನು ಪೂರ್ಣಗೊಳಿಸುವ ಮೂಲಕ ಗ್ರಾಮಸಡಕ್‌ ಯೋಜನೆ, ರಾಷ್ಟ್ರೀಯ ಮಹಾಮಾರ್ಗ ರಸ್ತೆ ಪ್ರಾಧಿಕರಣ ಮತ್ತು ಸೌಭಾಗ್ಯ ಯೋಜನೆ ಮಾಧ್ಯಮ ಮೂಲಕ ವಿದ್ಯುತ್‌, ನೀರು ಮತ್ತು ಉತ್ತಮ ರಸ್ತೆಗಳ ಅಭಿವೃದ್ಧಿಗಾಗಿ ಕೊಟ್ಟ ಮಾತನ್ನು ಪೂರ್ಣಗೊಳಿಸಿದ್ದೇನೆ. ಕೆಲವು ವಿಕಾಸ ಕಾರ್ಯಗಳು ಪೂರ್ಣಗೊಂಡಿದ್ದು, ಇನ್ನು ಉಳಿದ ಕಾರ್ಯಗಳು ಅಭಿವೃದ್ಧಿ ಹಂತದಲ್ಲಿವೆ ಎಂದರು.

ಸ್ಮಾರ್ಟ್‌ ಸಿಟಿ ಅಂತರ್ಗತವಾಗಿ ಎಲ್ಲ ಸೌಲಭ್ಯಗಳು ನಗರಕ್ಕೆ ದೊರೆಯಲಿವೆ ಎಂದ ಪ್ರಧಾನಿ ಮೋದಿ ಅವರು, ದೇಶದಲ್ಲಿ ಸ್ಮಾರ್ಟ್‌ ಸಿಟಿ ಅಂತರ್ಗತವಾಗಿ ಲಕ್ಷಾಂತರ ಕೋಟಿ ರೂ. ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ ಜಗತ್ತಿನಲ್ಲೇ ಅಭಿವೃದ್ಧಿಗೊಳ್ಳುತ್ತಿರುವ 10 ನಗರಗಳ ಪಟ್ಟಿಯಲ್ಲಿ ಎಲ್ಲಾ ನಗರಗಳು ನಮ್ಮ ದೇಶದ ನಗರಗಳೇ ಇರಲಿವೆ ಎಂದು ವಿಶ್ವಾಸ ವ್ಯಕ್ತಪಟಿಸಿದರು. ವಿಕಾಸವನ್ನೇ ಧ್ಯೆಯ ವಾಗಿಟ್ಟು ಕೊಂಡು ಕೇಂದ್ರ ಸರ್ಕಾರವು ಕಾರ್ಯವನ್ನು ಪ್ರಾರಂಭಿಸಿದೆ. ಸಬಕಾ ಸಾಥ್‌, ಸಬಕಾ ವಿಕಾಸ ಇದೇ ನಮ್ಮ ಕಾರ್ಯದ ಸಂಸ್ಕೃತಿ ಮತ್ತು ಪರಂಪರೆಯಾಗಿದೆ ಎಂದು ಹೇಳಿದರು.

Advertisement

ಸೊಲ್ಲಾಪುರದಲ್ಲಿ 30 ಸಾವಿರ ಮನೆಗಳ ನಿರ್ಮಾಣಕ್ಕಾಗಿ ಶಿಲಾನ್ಯಾಸವನ್ನು ನಾವೇ ಮಾಡಿದ್ದು. ಉದ್ಘಾಟನೆಗೂ ನಾವೇ ಬರುತ್ತೇವೆ ಎಂದಾಗ ಜನರು ಚಪ್ಪಾಳೆ ತಟ್ಟಿದರು. ಅದಕ್ಕಾಗಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಮಹಾರಾಷ್ಟ್ರ ರಾಜ್ಯಪಾಲ ಕೆ. ವಿದ್ಯಾಸಾಗರರಾವ್‌, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಕೇಂದ್ರ ಸಚಿವ ನಿತೀನ ಗಡ್ಕರಿ, ಕೇಂದ್ರ ಗೃಹನಿರ್ಮಾಣ ಸಚಿವ ಹರದೀಪಸಿಂಗ್‌ ಪುರಿ, ಕಂದಾಯ ಸಚಿವ ಚಂದ್ರಕಾಂತ ಪಾಟೀಲ, ಸಹಕಾರ ಸಚಿವ ಸುಭಾಷ ದೇಶಮುಖ, ಜಿಲ್ಲಾ ಉಸ್ತುವಾರಿ ಸಚಿವ ವಿಜಯಕುಮಾರ ದೇಶಮುಖ, ಸಂಸದ ಶರದ ಬನಸೋಡೆ, ಮೇಯರ್‌ ಶೋಭಾ ಬನಶೆಟ್ಟಿ ಮತ್ತು ಮಾಜಿ ಶಾಸಕ ನರಸಯ್ನಾ ಆಡಮ್‌ ಮಾಸ್ತರ್‌ ವೇದಿಕೆಯಲ್ಲಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ವಿಜಯಕುಮಾರ ದೇಶಮುಖ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾನಸಿ ಸೋನಟಕ್ಕೆ ನಿರೂಪಿಸಿದರು.

ಪಗಡಿ ತೊಡಿಸಿ ಸ್ವಾಗತ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮಹಾರಾಷ್ಟ್ರ ಸಿಎಂ ಫಡ್ನವೀಸ್‌ ಅವರು ಪಗಡಿ ತೊಡಿಸಿ ಖಡ್ಗ ನೀಡಿ ಸ್ವಾಗತಿಸಿದರು.

ದೇಶದ ಬಡವರು ಮತ್ತು ಕಾರ್ಮಿಕರ ಸಲುವಾಗಿ ಕೇವಲ ನಾಲ್ಕು ವರ್ಷಗಳಲ್ಲಿ ನಮ್ಮ ಸರ್ಕಾರ 14 ಲಕ್ಷ ಮನೆಗಳನ್ನು ನಿರ್ಮಿಸಿದೆ. ಇನ್ನು ಕೆಲವೇ ದಿನಗಳಲ್ಲಿ 37 ಲಕ್ಷ ಮನೆಗಳನ್ನು ನಿರ್ಮಿಸಲಿದ್ದೇವೆ. 2004 ರಿಂದ 2014 ವರೆಗೆ ಕಾಂಗ್ರೆಸ್‌ ಸರ್ಕಾರ ಕೇವಲ 8 ಲಕ್ಷ ಮನೆಗಳ ನಿರ್ಮಾಣ ಮಾಡಿತ್ತು. ಆದರೆ ನಮ್ಮ ಸರ್ಕಾರ ಕೇವಲ ನಾಲ್ಕು ವರ್ಷದಲ್ಲಿಯೇ ಸೊಲ್ಲಾಪುರದಲ್ಲಿಯೇ 30 ಸಾವಿರ ಮನೆಗಳನ್ನು ನಿರ್ಮಿಸಲು ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next