Advertisement
2019ರಲ್ಲಿ ಸಣ್ಣಪುಟ್ಟ ಅಪಘಾತಗಳು ಸೇರಿದಂತೆ ಇಟ್ಟು 20 ಅಪಘಾತಗಳು ಸಂಭವಿಸಿದೆ. ಜಗತ್ತಿನಾದ್ಯಂತ ಸಂಭವಿಸಿದ ಇಂತಹ ದುರ್ಘಟನೆಗಳಲ್ಲಿ ಒಟ್ಟು 280 ಮಂದಿ ಸಾವನ್ನಪ್ಪಿದ್ದಾರೆ. ಈ ಕಾರಣದಿಂದ ವಿಮಾನ ಸೇವೆಗೆ ಇದು 3ನೇ ಸುರಕ್ಷಾ ವರ್ಷವಾಗಿದೆ.
1972ರಲ್ಲಿ ಗರಿಷ್ಠ ಅಪಘಾತಗಳು ದಾಖಲೆಯಾಗಿದ್ದವು. ಆ ವರ್ಷ ಒಟ್ಟು 2472 ಮಂದಿ ಅಪಘಾತಗಳಿಂದ ಸಾವನ್ನಪ್ಪಿದ್ದರು. ಬಳಿಕ 1985ರಲ್ಲಿ 2421 ಮಂದಿ ಸಾವನ್ನಪ್ಪಿದ್ದಾರೆ. 1973ರಲ್ಲಿ 2271 ಮಂದಿ ಸಾವನ್ನಪ್ಪಿದ್ದು ಗರಿಷ್ಠ ಪ್ರಕರಣಗಳಾಗಿದೆ. 1972 ನಾಗರಿಕ ವಿಮಾನಗಳಿಗೆ ಕಷ್ಟದ ವರ್ಷಗಳಾಗಿತ್ತು. ಅ ವರ್ಷ ಅತೀ ಹೆಚ್ಚು ದುರ್ಘನೆಗಳು ನಡೆದಿವೆ. 65 ವಿಮಾನ ಅಪಘಾತಗಳು ನಡೆದಿದ್ದು, ಒಟ್ಟು 2472 ಮಂದಿ ಸಾವನ್ನಪ್ಪಿದ್ದಾರೆ. 1948ರಲ್ಲಿ ಒಟ್ಟು 80 ಅಪಘಾತಗಳು ನಡೆದಿವೆ.
Related Articles
Advertisement
1985ರಲ್ಲಿ ಪ್ರತಿಯೊಂದು ಅಪಘಾತದಲ್ಲಿ ಸರಾಸರಿ 62 ಮಂದಿ ಸಾವನ್ನಪ್ಪಿದ್ದಾರೆ. 2015 ಮತ್ತು 2014ರಲ್ಲಿ ಕ್ರಮವಾಗಿ 54 ಮತ್ತು 53 ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕ ಮತ್ತು ರಷ್ಯಾದಲ್ಲಿ ಅತೀ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಭಾರತ ಮತ್ತು ಇಂಗ್ಲೆಂಡ್ ಬಳಿಕದ ಸ್ಥಾನದಲ್ಲಿದೆ.