Advertisement

ಜುಗ್ಗನ ಪಿಜ್ಜಾ ಡೆಲಿವರಿ

09:31 PM Mar 25, 2019 | mahesh |

ಪಿಜ್ಜಾ ಡೆಲಿವರಿ ಬಾಯ್‌ ಅವತ್ತು ಸಪ್ಪೆ ಮೋರೆ ಹಾಕ್ಕೊಂಡು ತನ್ನ ಶಾಪ್‌ಗೆ ಬಂದಿದ್ದ. ದಿನಾ ನಗು ನಗ್ತಾ ಇದ್ನಲ್ಲ, ಮೊನ್ನೆಯಷ್ಟೇ ಮದುವೆನೂ ಆಗಿದ್ನಲ್ಲ. ಹೀಗೆ ಸಪ್ಪೆ ಮೋರೆ ಹಾಕ್ಕೊಂಡಿದ್ರೆ, ಗ್ರಾಹಕರು ಏನು ತಿಳ್ಕೊಳ್ಳೋದಿಲ್ಲ ಅಂತ ಆತನ ಗೆಳೆಯರೆಲ್ಲ ಗುಸು ಗುಸು ಅಂತ ಮಾತಾಡಿಕೊಳ್ತಿದ್ರು. ಕೊನೆಗೂ ಅವನ ಮುನಿಸಿಗೆ ಕಾರಣ ಗೊತ್ತಾಯ್ತು…. ಮನೆಯಲ್ಲಿ ಹೆಂಡ್ತಿಗೂ, ಗಂಡನಿಗೂ ಸಣ್ಣ ಜಗಳ ಆಗಿದೆ. ಮದುವೆಯಾಗಿ 6 ತಿಂಗಳಾದರೂ ಏನೂ ತಂದುಕೊಟ್ಟಿಲ್ಲ, ತನ್ನ ಗಂಡ ವಿಪರೀತ ಜುಗ್ಗ ಅಂತ ಮುನಿಸಿಕೊಂಡು, ಪತ್ನಿ ತನ್ನ ಗೆಳತಿಯ ಮನೆಗೆ ಹೋಗಿದ್ದಳಂತೆ. ಆಕೆ ಎಲ್ಲಿದ್ದಾಳೆಂದು ಎರಡು ದಿನದಿಂದ ಹುಡುಕಿ ಹುಡುಕಿ ಸಾಕಾಗಿ, ಪೇಚು ಮೋರೆ ಹಾಕ್ಕೊಂಡು ಆತ ಪಿಜ್ಜಾ ಶಾಪ್‌ಗೆ ಬಂದಿದ್ದ.

Advertisement

ಅಷ್ಟರಲ್ಲೇ ಒಂದು ಪಿಜ್ಜಾ ಆರ್ಡರ್‌ ಕರೆ ಬಂತು. 3 ಪೀಸ್‌ ಬೇಬಿ ಕಾರ್ನ್ ಪಿಜ್ಜಾ ಬೇಕು ಅಂತ. ಎಲ್ಲ ಸಹೋದ್ಯೋಗಿಗಳೂ, ಅವನಿಗೆ ಸಮಾಧಾನ ಹೇಳಿ, ನೀನೇ ಈ ಆರ್ಡರನ್ನು ತಲುಪಿಸಿ ಬಾ ಅಂತೇಳಿ ಕಳಿಸಿದ್ರು. ಇಪ್ಪತ್ತು ನಿಮಿಷದೊಳಗೆ ಆತ ಆ ಅಪರಿಚಿತ ಮನೆಯ ಮುಂದೆ ನಿಂತು ಕರೆ ಮಾಡಿದ. ಎರಡನೇ ಮಹಡಿಗೆ ಬನ್ನಿ ಅಂತೇಳಿ, ಆ ಕಡೆಯಿಂದ ಉತ್ತರ ಬಂತು. ಸೀದಾ ಮೇಲಕ್ಕೆ ಹೋಗಿ, ಮನೆಯ ಬಾಗಿಲು ತಟ್ಟಿದ. ಅವನ ಹೆಂಡತಿ ನಗುತ್ತಾ, ಬಾಗಿಲು ತೆರೆದಳು. ನೋಡಿದರೆ, ಗಂಡನೇ..! ಅವನ ಕೈಯಲ್ಲಿದ್ದ ಪಿಜ್ಜಾ ನೋಡಿ ಅವಳ ಮುಖ ಇನ್ನಷ್ಟು ಅರಳಿತು. ಅವರ ಜತೆಗೆ ತಾನೂ ಒಟ್ಟಿಗೆ ಕುಳಿತು ಪಿಜ್ಜಾ ತಿಂದು, ನಯಾಪೈಸೆಯನ್ನೂ ತೆಗೆದುಕೊಳ್ಳದೇ, ಡೆಲಿವರಿ ಬಾಯ್‌ ಸಂತೋಷದಿಂದ ಡ್ನೂಟಿಗೆ ಬಂದಿದ್ದ.

Advertisement

Udayavani is now on Telegram. Click here to join our channel and stay updated with the latest news.

Next