Advertisement

ವೇಮುಲ ವಿಚಾರದಲ್ಲಿ ರಾಹುಲ್‌ ಕ್ಷಮೆ ಕೇಳಲಿ: ಪಿಯೂಷ್‌

06:00 AM Jun 21, 2018 | Team Udayavani |

ನವದೆಹಲಿ: ಹೈದರಾಬಾದ್‌ ಕೇಂದ್ರ ವಿವಿಯಲ್ಲಿ 2 ವರ್ಷಗಳ ಹಿಂದೆ ಸಂಶೋಧನಾ ವಿದ್ಯಾರ್ಥಿ ರೋಹಿತ್‌ ವೇಮುಲ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಾಂಗ್ರೆಸ್‌ ಮತ್ತು ಇತರ ರಾಜಕೀಯ ಪಕ್ಷಗಳು ಬಿಜೆಪಿ ವಿರುದ್ಧ ರಾಜಕೀಯಕ್ಕಾಗಿ ಬಳಕೆ ಮಾಡಿಕೊಂಡಿವೆ. ಅದಕ್ಕಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಒತ್ತಾಯಿಸಿದ್ದಾರೆ. 

Advertisement

ಮುಸ್ಲಿಂ ಲೀಗ್‌ ಪಕ್ಷ  ಭರವಸೆ ನೀಡಿದ್ದಂತೆ ಹಣ ನೀಡಲಿಲ್ಲ ಎಂದು ವೇಮುಲ ತಾಯಿ ಆರೋಪಿಸಿದ್ದ ಹಿನ್ನೆಲೆಯಲ್ಲಿ ಪಿಯೂಷ್‌ ಗೋಯೆಲ್‌ ಈ ಹೇಳಿಕೆ ನೀಡಿದ್ದಾರೆ.  

ರಾಹುಲ್‌ ಗಾಂಧಿ ಕೂಡ ತಮ್ಮ ರ್ಯಾಲಿಗಳಿಗೆ ರೋಹಿತ್‌ ತಾಯಿ ರಾಧಿಕಾ ಅವರನ್ನು ಕರೆದುಕೊಂಡು ಹೋಗಿದ್ದರು. ಇಂಥ ಕ್ಷುಲ್ಲಕ ರಾಜಕೀಯ ಮಾಡಿದ್ದಕ್ಕೆ ರಾಹುಲ್‌ ಕ್ಷಮೆ ಕೇಳಬೇಕು ಎಂದು ಪಿಯೂಷ್‌ ಹೇಳಿದ್ದಾರೆ. ಮನೆ ಕಟ್ಟಿಸಿಕೊಳ್ಳುವುದಕ್ಕಾಗಿ 20 ಲಕ್ಷ ರೂ. ನೀಡುವ ಭರವಸೆಯನ್ನು ಮುಸ್ಲಿಂ ಲೀಗ್‌ ನೀಡಿತ್ತು. ಇದರಂತೆ ಚೆಕ್‌ ನೀಡಲಾಗಿತ್ತಾದರೂ, ಆ ಚೆಕ್‌ ಬೌನ್ಸ್‌ ಆಗಿದೆ ಎಂದು ರಾಧಿಕಾ ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next