Advertisement
ಪಯಸ್ವಿನಿ ಉಗಮ ಸ್ಥಳದಲ್ಲಿ ಅಧಿಕ ಮಳೆ ಸುರಿಯುತ್ತಿರುವುದು ಪಯಸ್ವಿನಿ ಹರಿವು ಹೆಚ್ಚಳಕ್ಕೆ ಕಾರಣವಾಗಿತ್ತು.
Related Articles
Advertisement
ಪಯಸ್ವಿನಿಯಲ್ಲಿ ನೀರು ಹರಿದರೂ ನಗರದ ಜನರಿಗೆ ಇನ್ನೊಂದು ಸಮಸ್ಯೆ ಎದುರಾಗಿದೆ. ನದಿಯಿಂದ ನೀರೆತ್ತಿ ಶುದ್ಧೀಕರಣಗೊಂಡು ಪೂರೈಕೆ ಆಗಬೇಕು. ಆದರೆ, ಕಲ್ಲುಮುಟ್ಲು ಶುದ್ಧೀಕರಣ ಘಟಕ ಸಮರ್ಪಕ ಸಾಮರ್ಥ್ಯ ಹೊಂದಿಲ್ಲದ ಕಾರಣ ಕೆಂಬಣ್ಣದ ನೀರು ಮನೆ-ಮನೆಗೆ ಹರಿಯುತ್ತಿದೆ. ಹೀಗಾಗಿ ಜನರಿಗೆ ಅನಾರೋಗ್ಯದ ಭೀತಿ ಎದುರಾಗಿದೆ.
ಶುದ್ಧೀಕರಣ ಘಟಕ ನವೀಕರಣಕ್ಕೆ ಪ್ರಸ್ತಾವನೆ
ನ.ಪಂ.ನ ಕುಡಿಯುವ ನೀರು ಸರಬರಾಜು ಮಾಡುವ ಶುದ್ಧೀಕರಣ ಘಟಕ ನವೀಕರಣಕ್ಕೆ 1.25 ಕೋಟಿ ರೂ. ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕೆ ಪ್ರಸ್ತಾವನೆ ತಯಾರಿಸಿ ಸರಕಾರಕ್ಕೆ ಸಲ್ಲಿಸುವ ಉದ್ದೇಶ ನ.ಪಂ. ಮುಂದಿದೆ. ಹಳೆಯ ಜಾಕ್‌ವೆಲ್ ಮತ್ತು ಪೈಪ್‌ಲೈನ್ ಬದಲಾವಣೆಗೆ 1.75 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ನಗರೋತ್ಥಾನ ಯೋಜನೆಯಲ್ಲಿ ಅನುದಾನವನ್ನು ಬಳಸುವ ಉದ್ದೇಶ ಹೊಂದಲಾಗಿದೆ. ಉದ್ದೇಶಿತ ಎಲ್ಲ ಯೋಜನೆಗಳು ಪ್ರಸ್ತಾವನೆ ಹಂತದಲ್ಲಿದ್ದು, ಈ ಮಳೆಗಾಲದಲ್ಲಿ ಈ ಕಾಮಗಾರಿ ಅನುಷ್ಠಾನಗೊಳ್ಳುವುದು ಅನುಮಾನವೆನಿಸಿದೆ.