Advertisement

ಸುಸಜ್ಜಿತ ಫುಟ್‌ಪಾತ್‌ನಲ್ಲಿ ಹೊಂಡಗಳು!

11:59 AM Apr 07, 2022 | Team Udayavani |

ಸ್ಟೇಟ್‌ಬ್ಯಾಂಕ್‌: ನಗರದ ವಿವಿಧೆಡೆ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಬಿರುಸಿನಿಂದ ನಡೆಯುತ್ತಿದೆ. ಫುಟ್‌ ಪಾತ್‌ ಕಾಮಗಾರಿ ಕೂಡ ವೇಗ ಪಡೆದಿದೆ. ಆದರೆ, ಕಾಮಗಾರಿ ನೆಪದಲ್ಲಿ ಅಲ್ಲಲ್ಲಿ ಅಪಾಯವೂ ಎದುರಾಗಿದೆ!

Advertisement

ವಿವಿಧ ಕಡೆಗಳಲ್ಲಿ ಫುಟ್‌ಪಾತ್‌ ಕೆಲಸ ಮಾಡುವಾಗ ಪಾದಚಾರಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಹೆಚ್ಚು ಆಸ್ಥೆ ವಹಿಸಿದಂತಿಲ್ಲ. ಹೀಗಾಗಿ ಪಾದಚಾರಿಗಳು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ.

ಸ್ಟೇಟ್‌ಬ್ಯಾಂಕ್‌ ವ್ಯಾಪ್ತಿಯಲ್ಲಿ ಫುಟ್‌ಪಾತ್‌ ಕೆಲಸವನ್ನು ಬಹು ಅಂದವಾಗಿಯೇ ಮಾಡಲಾಗಿದೆ. ಆದರೆ, ಫುಟ್‌ಪಾತ್‌ ಕೆಲಸ ಮಾಡಿ ಹೊಂಡ ಇರುವಲ್ಲಿ ಮುಚ್ಚಳ ಹಾಕಿ ಭದ್ರತೆ ಮಾಡಬೇಕಿತ್ತು. ಆದರೆ ಬಹುತೇಕ ಕಡೆಯಲ್ಲಿ ಇಂತಹ ರಕ್ಷಣಾತ್ಮಕ ಕಾರ್ಯ ನಡೆಸಿಲ್ಲ. ಪರಿಣಾಮವಾಗಿ ಫುಟ್‌ಪಾತ್‌ನಲ್ಲಿ ಹೊಂಡಗಳ ದರ್ಶನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next