Advertisement

ಕಂಕನಾಡಿ ಫುಟ್‌ಪಾತ್‌ಗಳಲ್ಲಿ ಹೊಂಡ; ಎಚ್ಚರ ತಪ್ಪಿದರೆ ಅನಾಹುತ!

08:13 PM Aug 02, 2021 | Team Udayavani |

ಮಹಾನಗರ: ನಗರದ ಕಂಕನಾಡಿ ಭಾಗದಲ್ಲಿ ಪಾದಚಾರಿಗಳು ಹೋಗುವಾಗ ಎಚ್ಚರ ವಹಿಸುವುದು ಅಗತ್ಯ; ಒಂದು ವೇಳೆ ಎಚ್ಚರ ವಹಿಸದಿದ್ದರೆ ಗುಂಡಿಗೆ ಬೀಳುವುದು ಗ್ಯಾರಂಟಿ!

Advertisement

ಕಂಕನಾಡಿ ಸರ್ಕಲ್‌ ಅಭಿವೃದ್ಧಿ ಹಿನ್ನೆಲೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರಸ್ತೆಗೆ ಇನ್ನಷ್ಟು ಸ್ಥಳಾವಕಾಶ ನೀಡುವುದು ಈ ಯೋಜನೆಯ ಆಶಯ. ಇದಕ್ಕೆ ಪೂರಕವಾಗಿ ಇದರ ವ್ಯಾಪ್ತಿಯ ಚರಂಡಿ, ಫುಟ್‌ಪಾತ್‌ ಅಭಿವೃದ್ಧಿಗೊಳಿಸಲಾಗುತ್ತಿದೆ. ಹಲವು ತಿಂಗಳುಗಳಿಂದ ಈ ಕಾಮಗಾರಿ ಆರಂಭವಾಗಿದ್ದು, ಸದ್ಯ ನಿಧಾನವಾಗಿದೆ.

ಪಂಪ್‌ವೆಲ್‌ನಿಂದ ಕಂಕನಾಡಿ ಮಾರು ಕಟ್ಟೆ ಕಡೆಗೆ ತಿರುಗುವ (ಉದಯ ಕಿಚನ್‌ ನೆಕ್ಸ್‌ r ಮುಂಭಾಗ) ಭಾಗದಲ್ಲಿ ಚರಂಡಿ ಕೆಲಸ ಮಾಡಿದ್ದರೂ ಅದನ್ನು ಪೂರ್ಣವಾಗಿ ಮುಚ್ಚಲಿಲ್ಲ. ಕೆಲವೆಡೆ ಮಾತ್ರ ಸ್ಲಾ$Âಬ್‌ ಅಳವಡಿಸಲಾಗಿದೆ. ಅಲ್ಲಲ್ಲಿ ಖಾಲಿ ಬಿಟ್ಟು ಹೊಂಡ ಕಾಣುತ್ತಿದೆ. ಪಾದಚಾರಿಗಳ ಗಮನ ಕೊಂಚ ತಪ್ಪಿದರೂ ಹೊಂಡಕ್ಕೆ ಬೀಳುವ ಪರಿಸ್ಥಿತಿಯಿದೆ. ಈ ಮಧ್ಯೆ ಗಣೇಶ್‌ ಮೆಡಿಕಲ್‌ ಭಾಗದಲ್ಲಿಯೂ ಚರಂಡಿ ಕೆಲಸ ಅರ್ಧದಲ್ಲಿಯೇ ಇದೆ. ಇತ್ತ ರಾಧಾ ಮೆಡಿಕಲ್‌ ಭಾಗದಲ್ಲಿಯೂ ಚರಂಡಿ  ,   ಫುಟ್‌ಪಾತ್‌ ಕೆಲಸ ಶುರುವಾಗಿ ಕೆಲವು ತಿಂಗಳುಗಳು ಕಳೆದರೂ ಇನ್ನೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ.

ಮುಂಜಾಗ್ರತೆ ಕ್ರಮ ವಹಿಸಿಲ್ಲ :

ಸ್ಥಳೀಯರಾದ ದಯಾನಂದ ಪಯ್ಯಡೆ ಅವರು ” ಉದಯವಾಣಿ ಸುದಿನ’ ಜತೆಗೆ ಮಾತನಾಡಿ, “ಕಂಕನಾಡಿಯಲ್ಲಿ ಕೆಲವು ಸಮಯದಿಂದ ಚರಂಡಿ, ಫುಟ್‌ಪಾತ್‌ ಕೆಲಸ ಆರಂಭವಾಗಿದೆ. ಆದರೆ ಇನ್ನೂ ಅದು ಮುಗಿದಿಲ್ಲ. ಕಾಮಗಾರಿ ನಡೆಸುವ ಸ್ಥಳದಲ್ಲಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಮುಂಜಾಗ್ರತೆ ಕ್ರಮವನ್ನೂ ಕೈಗೊಂಡಿಲ್ಲ. ಹೀಗಾಗಿ ಫುಟ್‌ಪಾತ್‌ಗಳ ಅರೆ ಬರೆ ಕಾಮಗಾರಿಯಿಂದಾಗಿ ಪಾದಚಾರಿಗಳು ಗುಂಡಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಜನರಿಗೆ ಇದರಿಂದ ಸಮಸ್ಯೆ ಆಗಿದೆ’ ಎನ್ನುತ್ತಾರೆ.

Advertisement

ಕಂಕನಾಡಿಯಲ್ಲಿ ಸರ್ಕಲ್‌ ಅಭಿವೃದ್ಧಿ ಸಂಬಂಧಿಸಿ ಕಾಮಗಾರಿ ಪಾಲಿಕೆ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ. ಕೆಲವು ಸಮಸ್ಯೆಯಿಂದ ಕಾಮಗಾರಿ ತಡವಾಗಿದೆ. ಶೀಘ್ರ ಮುಗಿಸಲು ಸಂಬಂಧಪಟ್ಟವರಿಗೆ ತಿಳಿಸಲಾಗುವುದು. ಪಾದಚಾರಿಗಳಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು.  -ನವೀನ್‌ ಡಿ’ಸೋಜಾ,  ಪಾಲಿಕೆ ಸ್ಥಳೀಯ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next