Advertisement
2017 ಸೆ.5 ರಂದು ಗೌರಿಲಂಕೇಶ್ ಮೇಲೆ ಗುಂಡು ಹಾರಿಸಿದ ಪರಶುರಾಮ್ ವಾಗ್ಮೊರೆ ಪಿಸ್ತೂಲ್ ಅನ್ನು ಗಣೇಶ್ ಮಸ್ಕಿಗೆ ಕೊಟ್ಟು ಮರು ದಿನ ವಿಜಯಪುರದ ಕಡೆ ಪ್ರಯಾಣ ಬೆಳೆಸಿದ್ದ. ಬಳಿಕ ಆ ಪಿಸ್ತೂಲ್ ಅನ್ನು ಅಮೋಲ್ ಕಾಳೆ ಪಡೆದುಕೊಂಡಿದ್ದ.
ಅದರಂತೆ ಆರೋಪಿ ಕೊಟ್ಟಿದ್ದಾನೆ. ಆದರೆ, ಆತ ಯಾರು ಎಂಬುದು ಇನ್ನು ನಿಗೂಢವಾಗಿದೆ. ಈ ಮಧ್ಯೆ ಆರೋಪಿ ಸುರೇಶ್‌ನನ್ನು ವಶಕ್ಕೆ ಪಡೆಯುವ ವೇಳೆಯೊಳಗೆ ಪಿಸ್ತೂಲ್ ಐದಾರು ಮಂದಿ ಕೈ ಬದಲಾಗಿರುವ ಸಾಧ್ಯತೆಯಿದೆ. ಇಲ್ಲವಾದಲ್ಲಿ ಈತನೇ ಇತರೆ ಸಾಕ್ಷ್ಯಗಳನ್ನು ಸುಟ್ಟುಹಾಕಿದ್ದಂತೆ ಪಿಸ್ತೂಲ್ ಅನ್ನು ನಾಶ ಮಾಡಿರಬಹುದು ಎಂದು ಎಸ್‌ಐಟಿ ಮೂಲಗಳು ಶಂಕೆ ವ್ಯಕ್ತಪಡಿಸಿವೆ.
Related Articles
Advertisement
8 ದಿನ ಎಸ್‌ಐಟಿ ವಶಕ್ಕೆ ಸುರೇಶ್ ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕುಣಿಗಲ್ ಮೂಲದ ಸುರೇಶ್‌ನನ್ನು 8 ದಿನಗಳ ಕಾಲ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ವಶಕ್ಕೆ ನೀಡಿ 3ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸುರೇಶ್ ಪ್ರಮುಖ ಪಾತ್ರವಹಿಸಿದ್ದು, ಸಾಕ್ಷ್ಯಗಳನ್ನು ನಾಶಪಡಿಸಿದ್ದಾನೆ. ಹೀಗಾಗಿ ಆರೋಪಿಯನ್ನು ವಶಕ್ಕೆ ಪಡೆಯುವಂತೆ ಎಸ್‌ಐಟಿ ಪರ ಸರ್ಕಾರಿ ವಿಶೇಷ ಅಭಿಯೋಜಕ ಶ್ರೀಶೈಲ ವಡವಡಗಿ ಕೋರ್ಟ್‌ಗೆ ಮನವಿ ಮಾಡಿದ್ದರು. ಈ ಸಂಬಂಧ ಸೋಮವಾರವೇ ಅರ್ಜಿಯ ವಿಚಾರಣೆ ಮುಕ್ತಾಯಗೊಳಿಸಿದ್ದ ನ್ಯಾಯಾಧೀಶ ವಿ.ಪ್ರಕಾಶ್ ಕಾಯ್ದಿರಿಸಿದ್ದ ತೀರ್ಪನ್ನು ಮಂಗಳವಾರ ಪ್ರಕಟಿಸಿದರು. ಇದಕ್ಕೆ ಆಕ್ಷೇಪಿಸಿದ ಸುರೇಶ್ ಪರ ವಕೀಲ ಅಮೃತೇಶ್, ತಮ್ಮ ಕಕ್ಷಿದಾರರಿಗೆ ತನಿಖಾಧಿಕಾರಿಗಳು ಈಗಾಗಲೇ ಬಹಳ ಹಿಂಸೆ ನೀಡಿದ್ದಾರೆ. ಹೀಗಾಗಿ 8 ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಬಾರದು. ಮತ್ತೆ ಈತನ ಮೇಲೆ ಹಲ್ಲೆ ನಡೆಸುತ್ತಾರೆ ಎಂದು ವಾದಿಸಿದರು.