Advertisement

ಪಿರಿಯಾಪಟ್ಟಣ : ಮುಸುಕಿನ ಜೋಳಕ್ಕೆ ಸೈನಿಕ ಹುಳುಗಳ ಕಾಟ : ವಿಜ್ಞಾನಿಗಳ ಭೇಟಿ

07:46 PM Jun 20, 2022 | Team Udayavani |

ಪಿರಿಯಾಪಟ್ಟಣ: ಕಸಬಾ ಹೋಬಳಿ ಸೇರಿದಂತೆ ತಾಲೂಕಿನ ತಾತನಹಳ್ಳಿ, ಬೇಗೂರು, ಮುತ್ತೂರು, ಭುತನಹಳ್ಳಿ ಆಲನಹಳ್ಳಿ, ನವೀಲೂರು ಹಾರನಹಳ್ಳಿ, ಬೆಟ್ಟದಪುರ, ರಾವಂದೂರು ಹೋಬಳಿಯ ಅನೇಕ ಗ್ರಾಮದ ರೈತರ ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳಕ್ಕೆ ಸೈನಿಕ ಹುಳುಗಳ ಕಾಟ ಎದುರಾದ ಹಿನ್ನೆಲೆಯಲ್ಲಿ ಮಂಡ್ಯ ವಿಸಿ ಫಾಂನ ವಿಜ್ಞಾನಿಗಳ ತಂಡ ಹಾಗೂ ಪಿರಿಯಾಪಟ್ಟಣ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಂಡ್ಯ ವಿಸಿ ಫಾಂನ ವಿಜ್ಞಾನಿ ಡಾ.ಕಿತ್ತೂರ್ ಮಠ್ ಮಾತನಾಡಿ ತಾಲ್ಲೂಕಿನಾಧ್ಯಂತ ಹುಲುಸಾಗಿ ಬೆಳೆದಿರುವ ಮುಸುಕಿನ ಜೋಳದ ಬೆಳೆ ಈಗಾಗಲೇ ಬೆಳವಣಿಗೆಯ ಹಂತದಲ್ಲಿದ್ದು, ಈ ಬೆಳೆಗೆ ಫಾಲ್ ಸೈನಿಕ ಹುಳು ರೋಗ ಎದುರಾಗಿ ರೈತ ಬೆಳೆದ ಮುಸುಕಿನ ಜೋಳದ ಪೈರುಗಳಲ್ಲಿ ಹುಳುಗಳು ಉತ್ಪತ್ತಿಯಾಗಿರುತ್ತವೆ. ಈ ಸೈನಿಕ ಹುಳುಗಳು ವೈ ಆಕಾರದ ಪತಂಗವಾಗಿದ್ದು ಒಂದುವರೆ ಇಂಚು ಉದ್ದವಿರುತ್ತವೆ. ಈ ಹುಳು ಒಂದೇ ಬಾರಿಗೆ ಸಾವಿರಾರು ಮರಿಗಳಿಗೆ ಜನ್ಮ ನೀಡಿ ಆಹಾರವನ್ನು ಅರಸುತ್ತ ಹಸಿರಾಗಿ ಹುಲುಸಾಗಿ ಬೆಳೆದಿರುವ ಜೋಳದ ಹೊಲಗಳಿಗೆ ಲಗ್ಗೆ ಹಿಡುತ್ತ ರಸವತ್ತಾದ ಬೆಳೆಯ ಸುಳಿಯನ್ನು ಹೊಕ್ಕಿ ಜೋಳವನ್ನು ಕಡಿದು ಹಾಕುತ್ತಿವೆ, ಈ ಒಂದು ಹೆಣ್ಣು ಪತಂಗವು ಜೋಳದ ಗರಿಯ ತಳಭಾಗದಲ್ಲಿ ಗುಂಪುಗುಂಪಾಗಿ ನೆಲೆಸಿ 45 ದಿನಗಳ ನಂತರ ಮೊಟ್ಟೆ ಒಡೆದು ಮರಿಗಳು ಹೊರಬಂದು 18 ರಿಂದ 28 ದಿನದವರೆಗೆ ಬೆಳಗ್ಗೆ ಹಾನಿ ಮಾಡುತ್ತವೆ ಮತ್ತು 13 ದಿನಗಳಲ್ಲಿ ಮಣ್ಣಿನಲ್ಲಿ ಸೇರುತ್ತವೆ. 32 ರಿಂದ 45 ದಿನಗಳಲ್ಲಿ ಸೈನಿಕ ಹುಳುಗಳು ಜೀವನ ಚಕ್ರವನ್ನು ಪೂರ್ಣಗೊಳಿಸುತ್ತದೆ ಈ ಕೀಟವು ಹಗಲು ವೇಳೆಯಲ್ಲಿ ಮಣ್ಣು ಕಾಂಡದ ಮಧ್ಯೆ ಮತ್ತು ಗರಿಗಳ ತಳಭಾಗದಲ್ಲಿ ವಾಸಿಸುತ್ತವೆ ಸಂಜೆಯ ವೇಳೆ ಹುಳುಗಳು ಚಟುವಟಿಕೆ ಆರಂಭಿಸಿ ಬೆಳೆಯನ್ನು ಸಂಪೂರ್ಣವಾಗಿ ತಿಂದು ಹಾಕುತ್ತಿದ್ದು, ಇವುಗಳನ್ನು ಹತೋಟಿಯಲ್ಲಿಡಲು ಸ್ಪೊಡೋಪೆರಾ ಪ್ರೋಜಿಪಾರ್ಡಾ ಟ್ರಾಪ್,ಹಾಗೂ ಥಯೋಡಿಕಾರ್ಬಾ 75 ಡಬ್ಲಯೋ ಪಿ.ಲಾರ್ವಾ ಎಂಬಾ ರಾಸಾಯನಿಕಗಳನ್ನು ಸಿಂಪಡಿಸುವ ಮೂಲಕ ಹತೋಟಿ ಮಾಡಬಹುದು ಎಂದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಸಹಾಯಕ ನಿರ್ದೆಶಕ ಪ್ರಸಾದ್ ಮಾತನಾಡಿ ಈ ಬೆಳೆಗೆ ಔಷಧಿಗಳನ್ನು ರೈತರು ಮಧ್ಯಾಹ್ನದ ಸಮಯದಲ್ಲಿ ಸಿಂಪಡಿಸಬಾರದು. ಸಾಯಂಕಾಲ ಐದು ಗಂಟೆಯ ಮೇಲೆ ಸಿಂಪಡಿಸಬೇಕು. ಔಷಧಿ ಸಿಂಪರಣೆ ನಂತರ ಎರಡರಿಂದ ಮೂರು ದಿನ ಹಸು, ಮೇಕೆ ಇತ್ಯಾದಿಗಳು ತಿನ್ನದಂತೆ ಕಾವಲು ಇರಬೇಕು. ನೀವು ಔಷಧಿಯನ್ನು ಸಿಂಪರಣೆ ನಂತರ ಹದಿನೈದು ದಿನಗಳ ಕಾಲ ಯಾವ ಪ್ರಾಣಿಗಳಿಗೂ ಇದನ್ನು ಹಾಕಬಾರದು. ಹಾಕಿದರೆ ಪ್ರಾಣಿಗಳಿಗೆ ರೋಗ ಹಾಗೂ ಸಾವನ್ನು ಅಪ್ಪುವ ಅವಕಾಶ ಇರುತ್ತದೆ ಎಂದರು.

ಈ ಸಂದರ್ಭದಲ್ಲಿ ಮಂಡ್ಯ ವಿಸಿ ಫಾಂನ ವಿಜ್ಞಾನಿ ಡಾ.ವೇದೀಶ್, ಕೃಷಿ ಸಹಾಯಕ ಅಧಿಕಾರಿಗಳಾದ ಮಹೇಶ್, ಹಿತೇಶ್, ವಿಕಾಶ್ ಸೇರಿದಂತೆ ರೈತರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next