Advertisement

ಗ್ರಾಮಸ್ಥರ ಬೇಡಿಕೆ ಅನುಗುಣವಾಗಿ ಅಭಿವೃದ್ದಿ: ಕೆ.ಮಹದೇವ್

08:28 PM Mar 20, 2022 | Team Udayavani |

ಪಿರಿಯಾಪಟ್ಟಣ : ಗ್ರಾಮಸ್ಥರ ಬೇಡಿಕೆ ಅನುಗುಣವಾಗಿ ಕೆಲಸ ಮಾಡುತ್ತೇನೆ ಮುಂದಿನ ಚುನಾವಣೆಯಲ್ಲೂ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಶಾಸಕ ಕೆ.ಮಹದೇವ್ ಮನವಿ ಮಾಡಿದರು.

Advertisement

ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಕಾಲೋನಿಯಲ್ಲಿ ರೂ.20 ಲಕ್ಷ ವೆಚ್ಚದ ಸಿ.ಸಿ.ರಸ್ತೆ ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಟಿದರು.

ಹಿಂದಿನವರು ಗುಣಮಟ್ಟದ ಕೆಲಸಕ್ಕೆ ಆಧ್ಯತೆ ನೀಡದ ಕಾರಣ ಕಡಿಮೆ ಅವದಿಯಲ್ಲಿಯೇ ರಸ್ತೆಗಳು ಹಾಳಾಗಿ ಹೋಗಿವೆ ಆದ್ದರಿಂದ ಪುನಃ ಅದೇ ರಸ್ತೆಗೆ ಅನುದಾನ ನೀಡಿದ್ದೇನೆ ದೀರ್ಘ ಕಾಲ ಬಾಳಿಕೆ ಬರುವ ರೀತಿಯಲ್ಲಿ ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಬೇಕು. ಇಲ್ಲಿನ ಗ್ರಾಮಸ್ಥರು ನನ್ನ ಎರಡು ಚುನಾವಣೆಗಳಲ್ಲಿ ಕಡಿಮೆ ಮತಗಳು ಬಂದಿದ್ದವು, 3 ನೇ ಬಾರಿ ಸ್ಪರ್ಧೆ ಮಾಡಿದಾಗ ಉತ್ತಮ ಸಹಕಾರ ನೀಡುವ ಮೂಲಕ ನನ್ನ ಗೆಲುವುಗೆ ಸಹಕಾರಿಯಾಗಿದ್ದಾರೆ ಆದ್ದರಿಂದ ಗ್ರಾಮಕ್ಕೆ ಅಗತ್ಯ ಸೌಲಭ್ಯಗಳನ್ನು ನೀಡಲು ಶಿರಸಾವಹಿಸಿ ದುಡಿಯುತ್ತಿದ್ದೇನೆ ಮುಂದೆಯೂ ಸಹಕಾರ ನೀಡಿದರೆ ಇನ್ನು ಹೆಚ್ಚಿನ ಕೆಲಸವನ್ನು ಗ್ರಾಮಕ್ಕೆ ನೀಡುವುದಾಗಿ ತಿಳಿಸಿದರು.

ಇದನ್ನೂ ಓದಿ : ಕೃಷಿಯಲ್ಲಿ ತಂತ್ರಜ್ಞಾನ ಬಳಸಿ ಆರ್ಥಿಕ ಪ್ರಗತಿ ಸಾಧಿಸಿ: ಶಾಸಕ ಕೆ. ಮಹದೇವ್

ಕೆರೆಗೆ ನೀರು ತುಂಬಿಸುವಂತೆ ಒತ್ತಾಯ:
ಬೇಸಿಗೆ ಕಾಲದಲ್ಲಿ ಕೆರೆಕಟ್ಟೆಗಳು ಬತ್ತಿ ಹೋಗುವುದರಿಂದ ಕಲ್ಕೆರೆ ಗ್ರಾಮದಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಜನ ಜಾನುವಾರು ಮತ್ತು ಕೃಷಿ ಚಟುವಟಿಕೆಗೆ ಅಗತ್ಯವಾದ ನೀರಿನ ಸೌಲಭ್ಯ ಸಿಗುತ್ತಿಲ್ಲ ಆದ್ದರಿಂದ ಕೆರೆಗೆ ಬನೀರು ತುಂಬಿಸಿಕೊಟ್ಟರೆ ಪ್ರತಿ ಮನೆಗೂ ಗಂಗಾ ಕಲ್ಯಾಣ ಯೋಜನೆ ನೀಡಿದಷ್ಟೆ ಸಂತೋಷವಾಗುತ್ತದೆ ಆದ್ದರಿಂದ ಕಲ್ಕೆರೆ ಗ್ರಾಮದ ಕೆರೆಗೆ ನೀರು ತುಂಬಿಸುವಂತೆ ಗ್ರಾಮಸ್ಥರು ಶಾಸಕರಿಗೆ ಒತ್ತಾಯ ಮಾಡಿದಾಗ ಕೂಡಲೆ ಅಧಿಕಾರಿಗಳ ಸಭೆ ಕರೆದು ಅನುದಾನ ನೋಡಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಿಡಿಒ ರವಿ, ಮುಖಂಡರಾದ ಅಣ್ಣಯ್ಯಶೆಟ್ಟಿ, ಮಹೆಂದ್ರಕುಂಆರ್, ಶಿವಣ್ಣ, ಜಯಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next