Advertisement

ಪಿರಿಯಾಪಟ್ಟಣ ತಾಲೂಕಿನಾದ್ಯಂತ ಗಾಳಿ ಮಳೆ ಅಬ್ಬರ, ಹಲವೆಡೆ ಹಾನಿ

08:38 PM Mar 30, 2022 | Team Udayavani |

ಪಿರಿಯಾಪಟ್ಟಣ : ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಬುಧವಾರ ಸಂಜೆ ಸುರಿದ ಗುಡುಗು, ಸಹಿತ ಬಿರುಗಾಳಿ ಮಳೆಗೆ ಹಲವು ಬಡಾವಣೆಗಳು ಜಲಾವೃತಗೊಂಡು ಅನಾಹುತ ಸೃಷ್ಟಿಸಿ ಜನಜೀವನವನ್ನು ಅಸ್ತವ್ಯಸ್ತ ಗೊಂಡಿದೆ.

Advertisement

ಬುಧವಾರ ಸಂಜೆ 6 ಗಂಟೆಗೆ ಪಿರಿಯಾಪಟ್ಟಣ ನಗರ, ಬೆಟ್ಟದಪುರ, ಈಚೂರು ಕೂರ್ಗಲ್, ಹಿಟ್ನೆಹೆಬ್ಬಾಗಿಲು, ರಾವಂದೂರು ಸೇರಿದಂತೆ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಮಳೆ ಬಿದ್ದು ಬಾಳೆ, ತೆಂಗು, ಅಡಿಕೆ ಸೇರಿದಂತೆ ಇನ್ನಿತರ ಮರಗಳು ಮುರಿದು ಬಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಇನ್ನು ಹಲವೆಡೆ ತಗ್ಗು ಪ್ರದೇಶ ಮತ್ತು ಕೊಳಚೆ ಪ್ರದೇಶದ ಮನೆಗಳಿಗೆ ನೀರು ನುಗ್ಗಿತು. ಮರಗಳು,ವಿದ್ಯುತ್ ಕಂಬಗಳು ಧರೆಗುರುಳಿ ಸಂಚಾರಕ್ಕೆ ಧಕ್ಕೆಯಾಯಿತು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅಳವಡಿಸಲಾಗಿದ್ದ ಪ್ಲೆಕ್ಸ್ ಹಾಗೂ ಬ್ಯಾನರ್ ಗಳು ಬಿರುಗಾಳಿಗೆ ಮುರಿದು ಬಿದ್ದಿವೆ. ಬೆಳಗಿನಿಂದ ಬಿಸಿಲ ಧಗೆಯಲ್ಲಿ ಬೆಂದ ಜನರಿಗೆ ಸಂಜೆ 6 ರ ನಂತರ ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ಬಿದ್ದ ಬಿರುಗಾಳಿ ಮಳೆ ತಂಪಾದ ಅನುಭವದ ಜತೆಗೆ ತಾಪವನ್ನೂ ತಟ್ಟಿಸಿತು.

ರಾತ್ರಿ ಸುರಿದ ಮಳೆಗೆ ವಿದ್ಯುತ್ ಹಸ್ತವ್ಯಸ್ತವಾಗಿದ್ದು, ರಾತ್ರಿ ಪೂರಾ ವಿದ್ಯುತ್ ಸರಬರಾಜು ಸ್ಥಗಿತಗೊಂಡು ಜನತೆ ಕತ್ತಲೆಯಲ್ಲೇ ಜೀವನ ಸಾಗಿಸುವಾಂತಾಗಿದೆ.

ಇದನ್ನೂ ಓದಿ : ವಾಕ್ ಸ್ಥಾನದಲ್ಲಿ ಕುಜ ಕಾಣಿಸಿದಾಗ ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾಗುತ್ತೇವೆ : ರಮೇಶ್ ಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next