Advertisement
ತಾಲ್ಲೂಕಿನ ಬೆಟ್ಟದಪುರ ಹೋಬಳಿ ವ್ಯಾಪ್ತಿಗೆ ಬರುವ ಭುವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ನಿತ್ಯಾನಂದ ಪಾಟಿಗಾರ್ ಎಂಬುವವರು ಈ ಆಪಾಧನೆಗೆ ಗುರಿಯಾಗಿದ್ದಾನೆ. ಇತನ ವಿರುದ್ದ ನೊಂದ ವಿದ್ಯಾರ್ಥಿಯ ಸಂಬಂಧಿಕ ಜೋಗನಹಳ್ಳಿ ಗ್ರಾಮದ ಚನ್ನವೀರಯ್ಯ ಎಂಬುವವರು ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಭುವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 8 ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಗೆ ಶಿಕ್ಷಕ ಪ್ರತಿನಿತ್ಯ ಲೈಂಗಿಕ ಪ್ರಚೋದನಕಾರಿ ಸಂದೇಶಗಳನ್ನು ತನ್ನ ಮೊಬೈಲ್ ಮುಖಾಂತರ ಕಳುಹಿಸುತ್ತಿದ್ದು, ಈ ಬಗ್ಗೆ ವಿದ್ಯಾರ್ಥಿನಿಯು ಅದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂಬಂಧಿ ವಿಶ್ವನಾಥನಿಗೆ ಈ ವಿಚಾರವಾಗಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ ಆಗ ವಿಶ್ವನಾಥನು ತನ್ನ ಮೊತ್ತೊಬ್ಬ ಸ್ನೇಹಿತನ ಬಳಿ ಈ ಸಮಸ್ಯೆಯ ಬಗ್ಗೆ ಚರ್ಚಿಸಿದ್ದಾನೆ ಆ ಬಳಿಕ ವಿಶ್ವನಾಥ ನೇರವಾಗಿ ದೈಹಿಕ ಶಿಕ್ಷಕ ನಿತ್ಯಾನಂದ ಪಾಟಿಗಾರ್ ಬಳಿ ಈ ವಿಚಾರವಾಗಿ ಪ್ರಶ್ನಿಸಿದ್ದಾನೆ. ಇದನ್ನೂ ಓದಿ : ಹಳಿ ಮೇಲೆ ನಿಂತ ಕುರಿಗಳಿಗೆ ರೈಲು ಡಿಕ್ಕಿ : ಓರ್ವ ಕುರಿಗಾಹಿ ಸೇರಿ 32 ಕುರಿಗಳ ದಾರುಣ ಸಾವು
Related Articles
Advertisement