Advertisement

Piriyapatna; 6ನೇ ಬಾರಿ ಜಯ ಸಾಧಿಸಿದ ಮುತ್ಸದ್ದಿ ರಾಜಕಾರಣಿ ಕೆ.ವೆಂಕಟೇಶ್

04:17 PM May 13, 2023 | Team Udayavani |

ಪಿರಿಯಾಪಟ್ಟಣ: ವೆಂಕಟೇಶ್ ಒಬ್ಬ ಸೌಮ್ಯ ಸ್ವಭಾವದ ಹಿರಿಯ ಮುತ್ಸದ್ದಿ ರಾಜಕಾರಣಿ ಯಾವಾಗಲೂ ಯಾರನ್ನು ನಿಂದಿಸುವ, ಗದರಿಸುವ ಸ್ವಭಾವದ ಮನುಷ್ಯರಲ್ಲ, ಯಾವಾಗಲು ತಾಳ್ಮೆ ಹಾಗೂ ಸಂಯಮದಿಂದ ಮಾತನಾಡುತ್ತಾರೆ.

Advertisement

ಇವರು ತಾಲ್ಲೂಕು ಬೋರ್ಡ್ ಅಧ್ಯಕ್ಷರಾಗುವ ಮೂಲಕ ರಾಜಕಾರಣ ಆರಂಭಿಸಿದ ಇವರು ತಮ್ಮ 42 ವರ್ಷಗಳ ಕಾಲದ ಸುದೀರ್ಘ ರಾಜಕಾರಣದಲ್ಲಿ 9 ಚುನಾವಣೆಗಳನ್ನು ಎದುರಿಸಿ 6 ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿ, ಒಮ್ಮೆ ಬಿಡಿಎ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ತಮ್ಮ ಜೀವನದ ಉದ್ದಗಲಕ್ಕೂ ಚಾಣಾಕ್ಷತೆ, ತಾಳ್ಮೆ, ಸಹನೆ, ನಂಬಿಕೆ ಮತ್ತು ವಿಶ್ವಾಸಕ್ಕೆ ಕುಂದು ಬಾರದಂತೆ ಜನರ ವಿಶ್ವಾಸ ಗಳಿಸಿದವರು ಅಧಿಕಾರಿಗಳು ಮತ್ತು ಜನರೊಡನೆ ಸಂಯಮದಿಂದ ಮಾತನಾಡುವುದು ಇವರ ಹೆಗ್ಗಳಿಕೆ, ಇವರು ಪ್ರಥಮ ಬಾರಿಗೆ ಶಾಸಕರಾದ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಅನೇಕ ಗುರುತರವಾದ ಸಮಸ್ಯೆಗಳಿದ್ದು, ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ರಾಜ್ಯದಲ್ಲಿಯೇ ಹೆಚ್ಚು ಜನತಾ ಮನೆಗಳನ್ನು ತಂದ ಕೀರ್ತಿ ವೆಂಕಟೇಶ್ ರವರಿಗೆ ಸಲ್ಲುತ್ತದೆ, ಇವರು ನೀರಾವರಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು, ಪಿರಿಯಾಪಟ್ಟಣದ ಕೂಗಳತೆಯ ದೂರದಲ್ಲಿ ಕಾವೇರಿ ನದಿ ಇದ್ದು, ಈ ನೀರಿಗಾಗಿ ರಾಜ್ಯ-ಅಂತರ್ ರಾಜ್ಯ ಮಟ್ಟದಲ್ಲಿ ಹೋರಾಟ ನಡೆಯುತ್ತಿರುತ್ತದೆ ಇಂಥಹ ಸಂದರ್ಭದಲ್ಲಿ ಸ್ಥಳೀಯ ಮಟ್ಟದಲ್ಲಿ ಈ ನೀರಿನ ಸದ್ಬಳಕೆ ಆಗಬೇಕು ರೈತರ ಕೃಷಿಗೆ ಹಾಗೂ ತಾಲ್ಲೂಕಿನ ಎಲ್ಲರೂ ಕಾವೇರಿ ನೀರನ್ನು ಕುಡಿಯಬೇಕು ಎಂಬ ಮಹದಾಸೆಯಿಂದ ತಾಲ್ಲೂಕಿನಲ್ಲಿ ಮುತ್ತಿನ ಮುಳುಸೋಗೆ ಗ್ರಾಮದ ಬಳಿ ಕಾವೇರಿ ನದಿಯಿಂದ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಿದರು, ಅದೇರೀತಿ ಹಾರಂಗಿ ನೀರಾವರಿ ನಿಗಮದ ಮೂಲಕ ಕರಡಿಲಕ್ಕನ ಕೆರೆ ಏತ ನೀರಾವರಿ ಜಾರಿಗೊಳಿಸಿ ಅನ್ನದಾತರ ಪಾಲಿನ ವಿಶ್ವಾಸಗಳಿಸುವಲ್ಲಿ ಯಶಶ್ವಿಯಾಗುವ ಮೂಲಕ ತಾಲ್ಲೂಕಿನ ಬಹುತೇಕ ರೈತರಿಗೆ ಗಂಗೆ ತಂದ ಭಗೀರಥ ಎನಿಸಿದ್ದಾರೆ.

ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ ತಾಲ್ಲೂಕಿನಲ್ಲಿ ಅನೇಕ ಪದವಿ ಕಾಲೇಜುಗಳು, ಗ್ರಾಮಾಂತರ ಪ್ರದೇಶದ ಪ್ರಮುಖ ಸ್ಥಳಗಳಿಗೆ ಪದವಿ ಪೂರ್ವ ಕಾಲೇಜು, ಐಟಿಐ, ಡಿಪ್ಲೊಮಾ ಕಾಲೇಜುಗಳನ್ನು ಪ್ರಾರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ, ಇನ್ನುಳಿದಂತೆ ಆರೋಗ್ಯ ಕ್ಷೇತ್ರದಲ್ಲಿ ಪಟ್ಟಣದ ಪ್ರಮುಖ ಭಾಗದಲ್ಲಿ 100 ಹಾಸಿಗೆಯುಳ್ಳ ಹೈಟೆಕ್ ಆಸ್ಪತ್ರೆ, ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು,ಉಪ ಆರೋಗ್ಯ ಕೇಂದ್ರಗಳ ಸ್ಥಾಪನೆ ಮಾಡುವ ಜನರ ಆರೋಗ್ಯ ರಕ್ಷಣೆಗೆ ಉತ್ಸಾಹ ತೋರಿದರು. ಇವರ ಅಧಿಕಾರದ ಅವಧಿಯಲ್ಲಿ ಪಟ್ಟಣದ ಹೃದಯ ಭಾಗದಲ್ಲಿ ತಾಲ್ಲೂಕು ಆಡಳಿತ ಭವನ, ಹೈಟೆಕ್ ಪುರಸಭಾ ಕಟ್ಟಡ, ನೂತನ ಅಗ್ನಿ ಶಾಮಕ ಠಾಣೆ, ಡಿ.ದೇವರಾಜು ಅರಸು ಕಲಾ ಭವನ, ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಬಾಬು ಜಗಜೀವನ್ ರಾಮ್, ನೂತನ ಬಸ್ ಡಿಪೋ, ನೂತನ ಉಗ್ರಾಣ, ವಸತಿ ಕ್ಷೇತ್ರದಲ್ಲಿ ಸಾವಿರಾರು ಮನೆಗಳನ್ನು ನಿರ್ಮಾಣ, ಸೇರಿದಂತೆ ತಾಲ್ಲೂಕಿನ ರಸ್ತೆ, ಚರಂಡಿ, ವಿದ್ಯುತ್ ಸ್ಥಾವರ ಸ್ಥಾಪನೆ, ಸೇರಿದಂತೆ ತಾಲ್ಲೂಕಿನ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರೂ ಕಳೆದ 2018 ರ ಚುನಾವಣೆಯಲ್ಲಿ ಸಿದ್ದರಾಮಯ್ಯ ನವರ ಮೇಲಿನ ಸೇಡು ಸಿದ್ದರಾಮಯ್ಯ ನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ವೆಂಕಟೇಶ್ ಮೇಲೆ ಪರಿಣಾಮ ಬೀರುವ ಮೂಲಕ ವೆಂಕಟೇಶ್ ರವರಿಗೂ 2018 ರ ಚುನಾವಣೆಯಲ್ಲಿ ಸೋಲಬೇಕಾಯಿತು. ಆದರೂ ಎದೆಗುಂದದ ವೆಂಕಟೇಶ್ ತಮ್ಮ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುವಲ್ಲಿ ಯಶಸ್ವಿಯಾದರು.

ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದ ಕೆ.ಮಹದೇವ್ ಶಾಸಕರಾಗಿ ಬಂದ ಆರಂಭದ ದಿನಗಳಿಂದಲೇ ವಿವಾದಗಳಿಗೆ ಗುರಿಯಾದರು, ಇವರು ಅಧಿಕಾರಿಗಳ ಮೇಲೆ ಮಾಡಿದ ದರ್ಪ, ದುರಾಡಳಿತ, ಅಧಿಕಾರ ದುರ್ಬಳಕೆ, ತಾಲ್ಲೂಕಿನಲ್ಲಿ ಯಾವುದೇ ಶಾಶ್ವತವಾದ ಯೋಜನೆಗಳನ್ನು ಜಾರಿಗೊಳಿಸಿದೆ ಇರುವುದು, ವೆಂಕಟೇಶ್ ಮತ್ತೇ ಗೆಲುವು ಸಾಧಿಸಲು ಕಾರಣವಾದ ಅಂಶಗಳು.

Advertisement
Advertisement

Udayavani is now on Telegram. Click here to join our channel and stay updated with the latest news.

Next