ಪಿರಿಯಾಪಟ್ಟಣ: ತಾಲೂಕಿನ ಚಿಕ್ಕ ವಡ್ಡರಕೇರಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯನ್ನು ಮಾಲು ಸಮೇತ ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕ ವಡ್ಡರಕೇರಿ ನಿವಾಸಿ ಹರೀಶ್(40) ಬಂಧಿತ. ಆರೋಪಿಯಿಂದ ಸುಮಾರು 14 ಕೆ.ಜಿ ತೂಕದ 12 ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಚಿಕ್ಕ ವಡ್ಡರಕೇರಿ ಗ್ರಾಮದ ಹರೀಶ್ ಎಂಬಾತ ತನ್ನ ತಂದೆಯಿಂದ ಬಳುವಳಿಯಾಗಿ ಬಂದ ಜಮೀನಿನ ಬದುವಿನಲ್ಲಿ ಕನಕಾಂಬರ ಹೂವಿನ ಗಿಡಗಳ ಮದ್ಯದಲ್ಲಿ ಗಾಂಜಾ ಗಿಡಗಳನ್ನು ನೆಟ್ಟು ನೀರು ಗೊಬ್ಬರ ಎರೆದು ಸುಮಾರು 12 ಗಿಡಗಳನ್ನು ಅಕ್ರಮವಾಗಿ ಬೆಳೆದಿದ್ದನು.
ಈ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಸುಂದರ್ ರಾಜ್, ಸಿಪಿಐ ಬಿ.ಆರ್.ಪ್ರದೀಪ್, ಎಸ್ಐ ಗಣೇಶ್ ನೇತೃತ್ವದ ತಂಡ ದಾಳಿ ನಡೆಸಿದಾಗ ಸುಮಾರು 14 ಕೆ.ಜಿ.ಯ 12 ಗಾಂಜಾ ಗಿಡಗಳು ಪತ್ತೆಯಾಗಿದೆ.
ಪ್ರಕರಣವನ್ನು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.
ದಾಳಿಯಲ್ಲಿ ದಾಳಿಯಲ್ಲಿ ಎಸ್ಐ ಗಣೇಶ್, ಎಎಸ್ಐಗಳಾದ ದೊರೆಸ್ವಾಮಿ, ಗೋಪಾಲ್, ಚಿಕ್ಕನಾಯ್ಕ, ಧಪೇದರ್ ಮಿತ್ರಕುಮಾರ್, ಜಯರಾಮೇಗೌಡ, ಸಿಬ್ಬಂದಿಗಳಾದ ಸೈಯದ್ ಕಬೀರುದ್ದೀನ್, ರಾಜರತ್ನಂ, ಹಬೀಬ್, ಅಭಿಜೀತ್, ಗಿರೀಶ್, ಬಷೀರ್, ರಾಜಶೇಖರ್ ಮುಂತಾದವರು ಪಾಲ್ಗೊಂಡಿದ್ದರು.