ಹೊಸದಿಲ್ಲಿ: ಕಳೆದ ವರ್ಷ ಡಿಸೆಂಬರ್ 14 ರಂದು ಸೊಮಾಲಿಯಾ ಕಡಲ್ಗಳ್ಳರಿಂದ ಅಪಹರಿಸಲ್ಪಟ್ಟ ವ್ಯಾಪಾರಿ ಹಡಗನ್ನು ಭಾರತೀಯ ನೌಕಾಪಡೆ ಶುಕ್ರವಾರ ಸುತ್ತುವರಿದಿದೆ. ಅಂತಾರಾಷ್ಟ್ರೀಯ ಕಾನೂನನ್ನು ಅನುಸರಿಸಿ, ನೌಕಾಪಡೆಯು ಕಡಲ್ಗಳ್ಳರನ್ನು ಎದುರಿಸಲು ಆತ್ಮರಕ್ಷಣೆಗಾಗಿ ಕ್ರಮಗಳನ್ನು ಕೈಗೊಂಡಿದೆ ಎಂದು ನೌಕಾಪಡೆ ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯ ನೌಕಾಪಡೆಯು ವ್ಯಾಪಾರಿ ಹಡಗಿನ ಸಿಬಂದಿಯೊಂದಿಗೆ ಸಂವಹನ ನಡೆಸಲಾಗಿದೆ. 15ಕ್ಕೂ ಹೆಚ್ಚು ಸಿಬಂದಿಗಳಿದ್ದು ಬಲ್ಗೇರಿಯಾ, ಅಂಗೋಲಾ ಮತ್ತು ಮ್ಯಾನ್ಮಾರ್ ವರೂ ಸೇರಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ ಕರೆಯನ್ನು ಸ್ವೀಕರಿಸಿದ ನಂತರ, ನೌಕಾಪಡೆಯ ಕಡಲ ಗಸ್ತು ಪಡೆ ಹೆಲಿಕಾಪ್ಟರ್ ಪತ್ತೆಹಚ್ಚಲು ಮತ್ತು ಸಹಾಯ ಮಾಡಲು ನಿಯೋಜಿಸಲಾಗಿತ್ತು.
ಭಾರತೀಯ ನೌಕಾಪಡೆಯ ಮೇಲೆ ಕಡಲ್ಗಳ್ಳರು ಗುಂಡಿನ ದಾಳಿ ನಡೆಸಿದ್ದು ಕಮಾಂಡೋಗಳ ಕಾರ್ಯಾಚರಣೆ ನಡೆಯುತ್ತಿದ್ದಾರೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಂದಿ ನೀಡಿದ ಮಾಹಿತಿ ಪ್ರಕಾರ ಹಡಗಿನಲ್ಲಿ ಹೆಚ್ಚಿನ ಸಂಖ್ಯೆಯ ಕಡಲ್ಗಳ್ಳರು ಇದ್ದಾರೆ. ಮೆರೈನ್ ಕಮಾಂಡೋಗಳು ಕಡಲ್ಗಳ್ಳರೊಂದಿಗೆ ಸಂವಹನವನ್ನು ಸಾಧಿಸಿದ್ದು ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ. ಕಡಲ್ಗಳ್ಳರು ಶರಣಾಗದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಕಮಾಂಡೋಗಳಿಗೆ ನೌಕಾಪಡೆ ಅನುಮತಿ ನೀಡಿದೆ.