ದಾಂಡೇಲಿ: ರಾಜ್ಯ ಸರಕಾರದ ಆದೇಶದನ್ವಯ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‌ಲಸಿಕೆ ಕುರಿತಂತೆ ಮಹಿಳೆಯರಲ್ಲಿ ಜಾಗೃತಿಮೂಡಿಸುವ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಮಹಿಳೆಯರಿಗಾಗಿ ಪಿಂಕ್ ಬೂತ್ ಎಂಬ ವಿನೂತನ ಕಾರ್ಯಕ್ರಮ ನಡೆಯಿತು.
ಮಹಿಳೆಯರಿಗಾಗಿ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿರುವ ತಾಯಿ ಮತ್ತು ಮಕ್ಕಳಆರೈಕೆ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ನೀಡಲುವ್ಯವಸ್ಥೆ ಮಾಡಲಾಗಿತ್ತು. ಕೋವಿಡ್ ಲಸಿಕೆ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಅವರನ್ನು ಉತ್ತೇಜಿಸಬೇಕೆಂಬ ದೃಷ್ಟಿಯಿಂದ ಕೋವಿಡ್ ಲಸಿಕೆ ಹಾಕುವ ವಿಶಿಷ್ಟ ಪರಿಕಲ್ಪನೆಯಪಿಂಕ್ ಬೂತ್ ಕಾರ್ಯಕ್ರಮವನ್ನು ಸಾರ್ವಜನಿಕಆಸ್ಪತ್ರೆಯ ವೈದ್ಯಾಧಿಕಾರಿ ಡಾ| ರಾಜೇಶ ಪ್ರಸಾದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.
ಪಿಂಕ್ ಬೂತ್ ಕಾರ್ಯಕ್ರಮದ ನಿಮಿತ್ತಆಸ್ಪತ್ರೆಯನ್ನು ಬಲೂನ್ ಹಾಗೂ ಹೂಮಾಲೆಗಳಿಂದ ಅಲಂಕರಿಸಲಾಗಿತ್ತು. ನಗರಸಭೆ ಅಧ್ಯಕ್ಷೆಸರಸ್ವತಿ ರಜಪೂತ ಅವರು ಕೋವಿಡ್ ಲಸಿಕೆಹಾಕಿಸಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆನೀಡಿ, ಮಹಾಮಾರಿ ಕೋವಿಡ್ ನಿಯಂತ್ರಣಕ್ಕೆ ತಮ್ಮ ಜೀವದ ಹಂಗು ತೊರೆದು ಸಾರ್ವಜನಿಕ ಆಸ್ಪತ್ರೆ ವೈದ್ಯರು, ಅಧಿಕಾರಿಗಳು, ದಾದಿಯರು,ಸಿಬ್ಬಂದಿ ಮತ್ತು ಆರೋಗ್ಯ ಕಾರತ್ಯಕರ್ತೆಯರುಶ್ರಮಿಸುತ್ತಿರುವುದು ಅತ್ಯಂತ ಸ್ಮರಣೀಯ. ಡಾ|ರಾಜೇಶ ಪ್ರಸಾದ ನೇತೃತ್ವದಲ್ಲಿ ಸಾರ್ವಜನಿಕ ಆಸ್ಪತ್ರೆ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ನೀಡುತ್ತಿರುವುದನ್ನು ಕೊಂಡಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ| ರಾಜೇಶಪ್ರಸಾದ ಅವರುಕೋವಿಡ್ ಲಸಿಕೆ ಕುರಿತಂತೆ ಮಹಿಳೆಯರನ್ನುಉತ್ತೀಜಿಸಬೇಕು ಮತ್ತು ಮಹಿಳೆಯರಲ್ಲಿ ಜಾಗೃತಿಮೂಡಿಸಬೇಕೆಂಬ ಉದ್ದೇಶದಿಂದ ಸರಕಾರ ಪಿಂಕ್‌ಬೂತ್ ಕಾರ್ಯಕ್ರಮ ಹಮ್ಮಿಕೊಂಡಿದೆ.ನಗರದಲ್ಲಿಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದೆ.ಜನತೆ ಕೋವಿಡ್ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆತೆಗೆದುಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಡಾ| ರಾಜೇಶ ಪ್ರಸಾದ ಕರೆ ನೀಡಿದರು.
ಸಾರ್ವಜನಿಕ ಆಸ್ಪತ್ರೆ ವೈದ್ಯರಾದ ಡಾ|ಚಿದಾನಂದ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದವೈದ್ಯಾಧಿಕಾರಿ ಡಾ| ತ್ರಿವೇಣಿ, ಸಾರ್ವಜನಿಕ ಆಸ್ಪತ್ರೆಸಿಬ್ಬಂದಿಗಳಾದ ಯೋಗೇಂದ್ರ ಪಡುಕೋಣೆ, ನರ್ಸ್ ತುಳಸಾ, ಸಾರ್ವಜನಿಕ ಆಸ್ಪತ್ರೆಯ ದಾದಿಯರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.