Advertisement

ಮೊಟೆರಾದಲ್ಲಿ ಪಿಂಕ್ ಬಾಲ್ ಟೆಸ್ಟ್: ಟಾಸ್ ಗೆದ್ದ ರೂಟ್, ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ

02:20 PM Feb 24, 2021 | Team Udayavani |

ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಖ್ಯಾತಿಯ ಮೊಟೆರಾ ಸಜ್ಜಾಗಿದೆ. ಇಂದು ಪಿಂಕ್ ಬಾಲ್ ಟೆಸ್ಟ್ ಆಗಿರಲಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

Advertisement

ಈ ಪಂದ್ಯಕ್ಕಾಗಿ ಭಾರತ ತಂಡ ಎರಡು ಬದಲಾವಣೆ ಮಾಡಿಕೊಂಡಿತು. ಕಳೆದ ಪಂದ್ಯವಾಡಿದ್ದ ಮೊಹಮ್ಮ್ ಸಿರಾಜ್ ಮತ್ತು ಕುಲದೀಪ್ ಯಾದವ್ ಈ ಪಂದ್ಯದಿಂದ ಹೊರಗುಳಿದರು. ಇವರ ಬದಲಿಗೆ ಜಸ್ಪ್ರೀತ್ ಬುಮ್ರಾ ಮತ್ತು ವಾಷಿಂಗ್ಟನ್ ಸುಂದರ್ ಸ್ಥಾನ ಪಡೆದರು.

ಇಂಗ್ಲೆಂಡ್ ತಂಡ ಇಂದು ಬರೋಬ್ಬರಿ ನಾಲ್ಕು ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ರೋರಿ ಬರ್ನ್ಸ್, ಲಾರೆನ್ಸ್, ಒಲಿ ಸ್ಟೋನ್ ಮತ್ತು ಮೊಯಿನ್ ಅಲಿ ಬದಲಿಗೆ ಆ್ಯಂಡರ್ಸನ್, ಆರ್ಚರ್, ಬೆರಿಸ್ಟೋ ಮ್ತತು ಜ್ಯಾಕ್ ಕ್ರಾಲಿ ತಂಡಕ್ಕೆ ಮರಳಿದ್ದಾರೆ.

ಭಾರತ: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿ,ಕೀ), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ

ಇಂಗ್ಲೆಂಡ್: ಡೊಮಿನಿಕ್ ಸಿಬ್ಲಿ, ಜ್ಯಾಕ್ ಕ್ರಾಲಿ, ಜಾನಿ ಬೆರಿಸ್ಟೋ , ಜೋ ರೂಟ್ (ನಾ), ಬೆನ್ ಸ್ಟೋಕ್ಸ್, ಒಲಿ ಪೋಪ್, ಬೆನ್ ಫೋಕ್ಸ್ (ವಿ.ಕೀ), ಜೋಫ್ರಾ ಆರ್ಚರ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್

Advertisement
Advertisement

Udayavani is now on Telegram. Click here to join our channel and stay updated with the latest news.

Next