Advertisement

ಚಿಕಿತ್ಸೆಗಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅಮೆರಿಕಕ್ಕೆ

07:55 AM Apr 25, 2022 | Team Udayavani |

ತಿರುವನಂತಪುರ: ವೈದ್ಯಕೀಯ ಪರೀಕ್ಷೆ ಮತ್ತು ಅದಕ್ಕೆ ಸಂಬಂಧಿಸಿದ ಚಿಕಿತ್ಸೆ ಸಲುವಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್‌ 18 ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ.

Advertisement

ಇವರೊಂದಿಗೆ ಪತ್ನಿ ಕಮಲಾ, ಆಪ್ತ ಸಹಾಯಕ ಸುನೀಶ್‌ ಕೂಡ ದುಬಾೖ ಮೂಲಕ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ನ್ಯೂಯಾರ್ಕ್‌ನ ಮಾಯೋ ಕ್ಲಿನಿಕ್‌ ಆಸ್ಪತ್ರೆಯಲ್ಲಿ ಕೇರಳ ಸಿಎಂ ಚಿಕಿತ್ಸೆ ಪಡೆಯಲಿದ್ದಾರೆ.

ಈ ಅವಧಿಯಲ್ಲಿ ಪಿಣರಾಯಿ ತಮ್ಮ ಹುದ್ದೆಯ ಅಧಿಕಾರವನ್ನು ಯಾರಿಗೂ ನೀಡಿಲ್ಲ. ಅಮೆರಿಕದಲ್ಲಿದ್ದುಕೊಂಡೇ ಎ.27ರಂದು ವರ್ಚುವಲ್ ಆಗಿ ಸಂಪುಟ ಸಭೆಯಲ್ಲಿ ಪಿಣರಾಯಿ ಪಾಲ್ಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next