Advertisement

ಜನರ ಜೀವಕ್ಕೆ ಬೆಲೆಕೊಡದ ಪಿಣರಾಯಿ ಸರಕಾರ ಕಿತ್ತೆಸೆಯೋಣ: ರೇಣು ಸುರೇಶ್

06:40 AM Aug 05, 2017 | Team Udayavani |

ಪೈವಳಿಕೆ: ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸರಕಾರವು ಕೇರಳದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಈ ಸಣ್ಣ ಅವಧಿಯಲ್ಲಿ  ರಾಜ್ಯದಲ್ಲಿ  ಸಂಘಪರಿವಾರದ 15ಕ್ಕೂ ಹೆಚ್ಚು  ಮಂದಿ ಕಾರ್ಯಕರ್ತರನ್ನು  ಅಮಾನುಷವಾಗಿ ಕಡಿದು ಕೊಲೆ ಮಾಡಲಾಗಿದೆ. ಈ ಮೂಲಕ ಕೇರಳದಲ್ಲಿ  ಅರಾಜಕತೆ ಸೃಷ್ಟಿಯಾಗಿದೆ. ಇದಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ  ಸರಕಾರವನ್ನು  ಕೂಡಲೇ ಅರಬೀ ಸಮುದ್ರಕ್ಕೆ ಕಿತ್ತೆಸೆಯೋಣ ಎಂದು ಭಾರತೀಯ ಜನತಾ ಮಹಿಳಾ ಮೋರ್ಚಾದ ಕೇರಳ ರಾಜ್ಯಾಧ್ಯಕ್ಷೆ ರೇಣು ಸುರೇಶ್‌ ಹೇಳಿದ್ದಾರೆ.

Advertisement

ಭಾರತೀಯ ಜನತಾ ಮಹಿಳಾ ಮೋರ್ಚಾದ ಪೈವಳಿಕೆ  ಪಂ. ಸಮಿತಿಯ ನೇತೃತ್ವದಲ್ಲಿ ಪೈವಳಿಕೆ ಕುಟುಂಬಶ್ರೀ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ  ಮಹಿಳಾ ಸಂಗಮ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು.ಕೇರಳೀಯರಾದ ನಾವು ಎಂದೆಂದಿಗೂ ಧೈರ್ಯ ದಿಂದ ಬದುಕೋಣ. ಗೂಂಡಾಗಳಿಗೆ, ಮಾಫಿಯಾ ಗಳಿಗೆ, ಕೊಲೆಪಾತಕರಿಗೆ, ರಕ್ತದಾಹಿಗಳಿಗೆ ನಾವು ಎಂದಿಗೂ ಹೆದರಿ ಹಿಂಜರಿಯಬಾರದು. ಸತ್ಯ, ಧರ್ಮ, ಆಚಾರ, ಸಂಸ್ಕಾರ, ಸಂಸ್ಕೃತಿಯುಕ್ತವಾಗಿ ಜೀವಿಸುವವರು ಗೊಡ್ಡು  ಬೆದರಿಕೆಗಳಿಗೆ ಅಂಜ ಬಾರದು. ಆರ್‌ಎಸ್‌ಎಸ್‌ ಕಾರ್ಯವಾಹರಾಗಿದ್ದ  ತಿರುವನಂತಪುರದ ರಾಜೇಶ್‌ ಹತ್ಯೆಯಿಂದ ಓರ್ವ ಉತ್ತಮ ಭಾರತೀಯನನ್ನು ಹಾಗೂ ಒಂದು ಮನೆಯ ಮಗನನ್ನು  ಅಲ್ಲದೆ ಹಿಂದೂ ಸಮಾಜದ ಆಸ್ತಿಯೊಂದನ್ನು  ಕಳೆದುಕೊಂಡಿದ್ದೇವೆ. ಈ ಮೂಲಕ ಪಿಣರಾಯಿ ವಿಜಯನ್‌ ಸರಕಾರದ ಪಾಪದ ಕೊಡ ತುಂಬುತ್ತಾ  ಬಂದಿದೆ. ಮಕ್ಕಳನ್ನು, ಗಂಡನನ್ನು, ತಂದೆಯನ್ನು  ಕಳಕೊಂಡು ರೋದಿಸು ತ್ತಿರುವ ಅದೆಷ್ಟೋ ಮನೆಯವರ ಶಾಪ ಸಿಪಿಎಂ ಸರಕಾರಕ್ಕೆ ತಟ್ಟದಿರದು ಎಂದು ಅವರು ರೋಷದಿಂದ ನುಡಿದರು.

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ – ಎನ್‌ಡಿಎ ಸರಕಾರದ ಸಮಾಜ ಮುಖೀ ಚಿಂತನೆಗಳು ಇಡೀ ವಿಶ್ವಕ್ಕೇ ಮಾದರಿ ಯಾಗಿವೆ. ಮೋದಿ ಸರಕಾರದ ಜನಪರ ಮತ್ತು  ಅಭಿವೃದ್ಧಿಪರ ಯೋಜನೆಗಳ ಕುರಿತು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಹಿಳಾ ಮೋರ್ಚಾದ ಕಾರ್ಯ ಕರ್ತೆ ಯರಿಂದ ಆಗಬೇಕು. ಇದಕ್ಕಾಗಿ ನಾವೆಲ್ಲರೂ ಮನೆ ಮನೆ ಸಂಪರ್ಕ ಮಾಡಿ ಕೇಂದ್ರ ಸರಕಾರದ ಯೋಜನೆಗಳನ್ನು  ಅರ್ಹ ಫಲಾನುಭವಿಗಳಿಗೆ ದೊರಕಿಸಲು ಯೋಜನಾ ಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ರೇಣು ಸುರೇಶ್‌ ಅವರು ನೆರೆದ ಜನಸಮೂಹಕ್ಕೆ ಮನವಿ ಮಾಡಿದರು.

ಬಿಜೆಪಿ ರಾಜ್ಯ ಕೌನ್ಸಿಲ್‌ ಸದಸ್ಯೆ ಸರೋಜಾ ಆರ್‌.ಬಲ್ಲಾಳ್‌, ಮಹಿಳಾ ಮೋರ್ಚಾದ ಕಾಸರಗೋಡು ಜಿಲ್ಲಾ  ಪ್ರಧಾನ ಕಾರ್ಯದರ್ಶಿ ಪುಷ್ಪಾಲಕ್ಷಿ$¾ ಎನ್‌.ಕನಿಯಾಲ, ಮಹಿಳಾ ಮೋರ್ಚಾದ ಮಂಜೇಶ್ವರ ಮಂಡಲ ಉಪಾಧ್ಯಕ್ಷೆ  ಗಿರಿಜಾ ಶೆಟ್ಟಿ  ಕುಳಾÂರು, ಒಬಿಸಿ ಮೋರ್ಚಾದ ಮಂಡಲ ಕಾರ್ಯದರ್ಶಿ ರೇಣುಕಾ ಕಯ್ನಾರು, ಬಿಜೆಪಿ ಪೈವಳಿಕೆ ಪಂಚಾಯತ್‌ ಸಮಿತಿಯ ಅಧ್ಯಕ್ಷ ಸದಾಶಿವ ಚೇರಾಲು, ಪಂಚಾ ಯತ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್‌ ಆಟಿಕುಕ್ಕೆ ಮೊದಲಾದವರು ಶುಭಹಾರೈಸಿದರು.

ಮಹಿಳಾ ಮೋರ್ಚಾದ ಪಂಚಾಯತ್‌ ಸಮಿತಿಯ ಅಧ್ಯಕ್ಷೆ ದಿವ್ಯಾ ಬಿ. ನೆತ್ತರಗುಳಿ ಸಮಾರಂಭದ ಅಧ್ಯಕ್ಷತೆ  ವಹಿಸಿದ್ದರು. ಮಹಿಳಾಮೋರ್ಚಾದ ಪಂಚಾಯತ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುಷ್ಪಾ  ಕೊಮ್ಮಂಗಳ ಸ್ವಾಗತಿಸಿದರು. ಪಂಚಾಯತ್‌ ಸಮಿತಿಯ ಕಾರ್ಯದರ್ಶಿ ಅಕ್ಷತಾ ಕನಿಯಾಲತ್ತಡ್ಕ ವಂದಿಸಿದರು. ವಿಜಯಾ ಡಿ. ರೈ ಪೈವಳಿಕೆ ಕಾರ್ಯಕ್ರಮ ನಿರೂಪಿಸಿದರು.

Advertisement

ಇದೇ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾ ನಿಲಯದ ಬಿಎಸ್‌ಡಬ್ಲೂ$Â ಪದವಿ ಪರೀಕ್ಷೆಯಲ್ಲಿ  ದ್ವಿತೀಯ ರ್‍ಯಾಂಕ್‌ ಪಡೆದ ವಿದ್ಯಾರ್ಥಿನಿ ಸರಿತಾ ತಲೆಂಗಳ ಅವರನ್ನು  ಮಹಿಳಾ ಮೋರ್ಚಾದ ಪೈವಳಿಕೆ ಪಂಚಾಯತ್‌ ಸಮಿತಿಯ ವತಿಯಿಂದ ಸಮ್ಮಾನಿಸಲಾಯಿತು.

ಮಹಿಳೆಯರಿಗೆ ನೆಮ್ಮದಿಯ ಬದುಕು
ಭಾರತೀಯ ಜನತಾ ಮಹಿಳಾ ಮೋರ್ಚಾವು ಸ್ತ್ರೀಯರ ಮೇಲಿನ ದೌರ್ಜನ್ಯದ ವಿರುದ್ಧ  ಹಾಗೂ ಬಲಿಷ್ಠ  ಸಂಘಟನೆಯ ಗುರಿಯೊಂದಿಗೆ ಪ್ರಬುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟಿದೆ. ಸಮಾಜದಲ್ಲಿ ಸ್ತ್ರೀಯರಿಗಾಗುತ್ತಿರುವ ಸಂಕಷ್ಟಮಯ ಸನ್ನಿವೇಶಗಳನ್ನು  ಮಹಿಳಾ ಮೋರ್ಚಾ ನೇತೃತ್ವದಲ್ಲಿ ಸಮೀಕ್ಷೆ  ನಡೆಸಿ ಅದಕ್ಕಿರುವ ಪರಿಹಾರ ಕ್ರಮಗಳನ್ನು  ಚಿಂತಿಸುತ್ತಿದೆ. ಈ ಮುಖೇನ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಬಾಳಿಗೆ ಶಾಂತಿ, ನೆಮ್ಮದಿ ದೊರಕಿಸುವ ನಿಟ್ಟಿನಲ್ಲಿ  ಮಹಿಳಾ ಮೋರ್ಚಾವು ವಿಶೇಷ ಕಾರ್ಯಕ್ರಮಗಳನ್ನು ಸಂಘಟಿಸಲಿದೆ.
ರೇಣು ಸುರೇಶ್‌,ಅಧ್ಯಕ್ಷೆ, ಮಹಿಳಾ ಮೋರ್ಚಾ, ಕೇರಳ ರಾಜ್ಯ ಸಮಿತಿ.
 

Advertisement

Udayavani is now on Telegram. Click here to join our channel and stay updated with the latest news.

Next