Advertisement

ಪೈಲಟ್‌ ಬಿಡುಗಡೆ ಶಾಂತಿ ಮಾತುಕತೆಯ ಮೊದಲ ಹೆಜ್ಜೆ : PM ಇಮ್ರಾನ್‌ ಖಾನ್

12:12 PM Feb 28, 2019 | udayavani editorial |

ಇಸ್ಲಾಮಾಬಾದ್‌ : ‘ಭಾರತ – ಪಾಕ್‌ ನಡುವೆ ಶಾಂತಿ ನೆಲೆಸಬೇಕು ಎಂಬ ನನ್ನ ಹಂಬಲದ ಪ್ರಕಾರ ಮತ್ತು  ಭಾರತ-ಪಾಕ್‌ ಶಾಂತಿ ಮಾತುಕತೆಯನ್ನು ಆರಂಭಿಸುವ ಮೊದಲ ಹೆಜ್ಜೆಯಾಗಿ ನಾಳೆ ಶುಕ್ರವಾರ ಭಾರತೀಯ ಪೈಲಟ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಬಿಡುಗಡೆ ಮಾಡುವ ಪ್ರಕಟನೆಯನ್ನು ಮಾಡುತ್ತಿದ್ದೇನೆ’ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಂದು ಪಾಕ್‌ ಸದಸನದ ಜಂಟಿ ಅಧಿವೇಶನದಲ್ಲಿ ಘೋಷಿಸಿದರು.

Advertisement

‘ನಮಗೆ ಶಾಂತಿ ಮುಖ್ಯ. ಪ್ರಾದೇಶಿಕ ಶಾಂತಿಯಿಂದ ನಾವು ಆರ್ಥಿಕಾಭಿವೃದ್ಧಿ ಸಾಧಿಸಲು ಸಾಧ್ಯ, ಪುಲ್ವಾಮಾ ಉಗ್ರ ದಾಳಿ ಬಗ್ಗೆ ನಮಗೆ ಸಾಕ್ಷ್ಯ ಕೊಡಿ ಎಂದು ನಾನು ಭಾರತವನ್ನು ಕೇಳಿಕೊಂಡಿದ್ದೇನೆ ಆ ಪ್ರಕಾರ ನಾವು ಕ್ರಮ ತೆಗೆದುಕೊಳ್ಳುವ ಭರವಸೆ ನೀಡುತ್ತಿದ್ದೇನೆ’ ಎಂದು ಇಮ್ರಾನ್‌ ಪುನರುಚ್ಚರಿಸಿದರು. 

ನಾನು ನಿನ್ನೆ ಬುಧವಾರ ಸಂಜೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫೋನ್‌ ಮೂಲಕ ಸಂಪರ್ಕಿಸಲು ಯತ್ನಿಸಿದ್ದೆ; ಅವರಿಗೆ ನಮ್ಮ ಶಾಂತಿ ಸಂದೇಶವನ್ನು ತಲುಪಿಸಲು ಬಯಸಿದ್ದೆ ಎಂದು ಇಮ್ರಾನ್‌ ಖಾನ್‌ ಸದನಕ್ಕೆ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next