Advertisement

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ರಚನೆ: ಸೀತಾರಾಂ

07:30 AM Mar 02, 2018 | |

ಮಂಗಳೂರು: ಪಿಲಿಕುಳ ನಿಸರ್ಗಧಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದೆ ಎಂದು ಕರ್ನಾಟಕದ ವಿಜ್ಞಾನ, ತಂತ್ರ ಜ್ಞಾನ, ಯೋಜನೆ, ಸಾಂಖೀಕ ಇಲಾಖೆಯ ಸಚಿವ ಎಂ.ಆರ್‌. ಸೀತಾರಾಂ ತಿಳಿಸಿದರು.

Advertisement

ಅವರು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸ್ವಾಮಿ ವಿವೇಕಾನಂದ ತಾರಾಲಯವನ್ನು ಗುರುವಾರ ಉದ್ಘಾಟಿಸಿದರು. ರಾಜ್ಯಪಾಲರ ಅಂಕಿತ ದೊರೆತ ಕೂಡಲೇ ಪ್ರಾಧಿಕಾರ ಅಸ್ತಿತ್ವಕ್ಕೆ ಬರಲಿದೆ. ಖಗೋಳ ಮತ್ತು ವಿಜ್ಞಾನದ ಕುರಿತಾದ ಜ್ಞಾನ ಪ್ರಸರಣ ದಲ್ಲಿ ಈ ತಾರಾಲಯ ನಿರ್ಣಾಯಕ ಪಾತ್ರ ವಹಿಸಲಿದೆ. ಜನತೆಗೆ ವಿಶೇಷ ವಾಗಿ ವಿದ್ಯಾರ್ಥಿ ಗಳಿಗೆ ಈ ಮೂಲಕ ಅನು ಕೂಲ ವಾಗಲಿದೆ. ಈ ತಾರಾಲಯವು ರಾಜ್ಯದ ಹೆಮ್ಮೆ ಎಂದರು.

ಡಾ| ಶಿವರಾಮ ಕಾರಂತ ಜೈವಿಕ ಉದ್ಯಾನ ಸಹಿತ ಪಿಲಿಕುಳ ನಿಸರ್ಗ ಧಾಮವು ಈಗ ಅಂತಾ ರಾಷ್ಟ್ರೀಯ ಮನ್ನಣೆ ಪಡೆದಿದೆ ಎಂದು ಶ್ಲಾಘಿಸಿದರು. ಆರಂಭಿಕವಾಗಿ 11 ಕೋ.ರೂ. ವೆಚ್ಚದ್ದು ಎಂದು ಅಂದಾಜಿಸಲಾಗಿದ್ದ ಈ ಯೋಜನೆ 2014ರಲ್ಲಿ 24 ಕೋ. ರೂ.ಗೇರಿತ್ತು. ಈಗ 35.69 ಕೋ. ರೂ. ವೆಚ್ಚವಾಗಿದೆ. ಹೆಚ್ಚುವರಿ ಮೊತ್ತವನ್ನು ಏಕಗಂಟಿನಲ್ಲಿ ಮುಖ್ಯಮಂತ್ರಿ ಒದ ಗಿಸಿದರು ಎಂದರು.

 ವಸ್ತು ಪ್ರದರ್ಶನ ಉದ್ಘಾಟನೆ
ತಾರಾಲಯದ ಪಕ್ಕದಲ್ಲಿ ಖಗೋಳ ಮತ್ತು ವಿಜ್ಞಾನ ವಸ್ತು ಪ್ರದರ್ಶನವನ್ನು ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿ, ಶುಭ ಹಾರೈಸಿದರು. ತಾರಾಲಯವು ದೇಶದಲ್ಲೇ ವಿಶಿಷ್ಟ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದು ಮಾಹಿತಿ ಪುಸ್ತಕ ಬಿಡುಗಡೆಗೊಳಿಸಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಬಿ.ಎ. ಮೊದಿನ್‌ ಬಾವಾ ಹೇಳಿದರು.

ಶ್ಲಾಘನೀಯ: ಲೋಬೋ ಈ ತಾರಾಲಯದ ಮೂಲಕ ಜ್ಞಾನ ವಿಸ್ತಾರಕ್ಕೆ ಮತ್ತಷ್ಟು ಸೌಲಭ್ಯ ದೊರೆ ತಂತಾಗಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್‌. ಲೋಬೋ ಸಂತಸ ವ್ಯಕ್ತಪಡಿಸಿದರು. ತಾರಾಲಯದ ತಾಂತ್ರಿಕ ಸಲಹಾ ಸಮಿತಿಯ ಡಾ| ಎಚ್‌. ಹೊನ್ನೇ ಗೌಡ, ಪಿಲಿಕುಳ ಕೇಂದ್ರದ ನಿರ್ದೇ ಶಕ ಡಾ| ಕೆ.ವಿ. ರಾವ್‌, ಕಾಂತರಾಜ್‌, ಡಾ| ಪಿ. ಅಯ್ಯಂ ಪೆರುಮಾಳ್‌, ಜಿ. ಅರುಳ್‌ ಜೆರಾಲ್ಡ್‌ ಪ್ರಕಾಶ್‌, ಶಿವಪ್ರಸಾದ್‌ ಖೆನೆಡ್‌ ಅವರನ್ನು ಸಮ್ಮಾನಿಸಲಾಯಿತು.

Advertisement

ಅಭಯಚಂದ್ರ ಕೃತಜ್ಞತೆ
ಮಂಗಳೂರು ಸಹಿತ ಜಿಲ್ಲೆಗೆ ಮಹತ್ವದ ಕೊಡುಗೆ ಒದಗಿಸುತ್ತಿರುವ ಮುಖ್ಯಮಂತ್ರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುವುದಾಗಿ ಅಧ್ಯಕ್ಷತೆ ವಹಿಸಿದ್ದ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಹೇಳಿದರು. ಮೇಯರ್‌ ಕವಿತಾ ಸನಿಲ್‌, ಬಿ.ಎಚ್‌. ಖಾದರ್‌, ಮಹಮ್ಮದ್‌ ಮೋನು, ಮುಡಾ ಅಧ್ಯಕ್ಷ ಕೆ. ಸುರೇಶ್‌ ಬಲ್ಲಾಳ್‌, ಹರಿಪ್ರಸಾದ್‌ ಶೆಟ್ಟಿ, ರಾಯ್‌ ಕ್ಯಾಸ್ಟೆಲಿನೋ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಕುಮಾರ್‌ ಸ್ವಾಗತಿಸಿದರು. ಎಂಪಿ ನಿರೂಪಿಸಿದರು. ಪಿಲಿಕುಳ ಸೊಸೈಟಿಯ ಸದಸ್ಯ ಕಾರ್ಯದರ್ಶಿ ವಿ. ಪ್ರಸನ್ನ ವಂದಿಸಿದರು. ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾ ಹಕ ಸೊಸೈಟಿ, ಪಿಲಿಕುಳ ಪ್ರಾ.ವಿ.ಕೇ. ಸೊಸೈಟಿ ವತಿಯಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 

ಜಗತ್ತಿನ 21ನೇ ಎಂಬ ಪ್ರಖ್ಯಾತಿ
ಸ್ವಾಮಿ ವಿವೇಕಾನಂದ ತಾರಾಲಯವು ದೇಶದ ಪ್ರಥಮ (ಸಿಂಗಾಪುರ ಬಳಿಕ ಏಷ್ಯಾದ ಪ್ರಥಮ) ಆ್ಯಕ್ಟಿವ್‌ 3ಡಿ, 8 ಕೆ ಡಿಜಿಟಲ್‌, ಆಸ್ಟ್ರೊ ಮೆಕ್ಯಾನಿಕಲ್‌ ಹೈಬ್ರಿಡ್‌ ಪ್ರೊಜೆಕ್ಷನ್‌ ಕೇಂದ್ರವೆಂಬ (ಜಗತ್ತಿನ 21ನೇ) ಮನ್ನಣೆಗೆ ಪಾತ್ರವಾಗಿದೆ. 35.69 ಕೋ. ರೂ. ವೆಚ್ಚವಾಗಿದೆ. ನಕ್ಷತ್ರ, ಸೂರ್ಯ-ಚಂದ್ರ, ಗ್ರಹ ಇತ್ಯಾದಿ ಆಕಾಶ ಕಾಯಗಳ ಸಮಗ್ರ ಮಾಹಿತಿಯನ್ನು ಇಲ್ಲಿನ 3ಡಿ ಥಿಯೇಟರ್‌ನಲ್ಲಿ ಪಡೆಯಬಹುದಾಗಿದೆ. ಉದ್ಘಾಟನೆಯ ಬಳಿಕ ಸಚಿವರು, ಅತಿಥಿಗಳು, ಮಾಧ್ಯಮದವರು “ನಾವು ನಕ್ಷತ್ರಗಳು’ ಎಂಬ ತ್ರಿಡಿ ಪ್ರದರ್ಶನ ವೀಕ್ಷಿಸಿದರು. ಈ ಎರಡು ದಿನ ಪಾಸ್‌ ಸಹಿತ ಪ್ರವೇಶವಿದೆ. ಬಳಿಕ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ.

ಪಿಲಿಕುಳದಲ್ಲಿ  ಪ್ರವಾಸಿಗರ ಸಂಚಾರದ ಅನುಕೂಲಕ್ಕೆ ಶೀಘ್ರದಲ್ಲೇ ಬ್ಯಾಟರಿ ಚಾಲಿತ ಎಲೆಕ್ಟ್ರಿಕಲ್‌ ಪರಿಸರ ಸ್ನೇಹಿ ವಾಹನಗಳನ್ನು ಒದಗಿಸಲಾಗುವುದು.
ಸಚಿವ ಸೀತಾರಾಂ

Advertisement

Udayavani is now on Telegram. Click here to join our channel and stay updated with the latest news.

Next