Advertisement

ಯಾತ್ರಿಕನ  ಯೇಟ್ಸ್‌  ಕನಸುಗಳು

12:55 PM May 09, 2021 | Team Udayavani |

ನಾ ಬಡವ, ಬರಿ ಕನಸು ಬಳಿಯಿರುವುದೆಲ್ಲ;  ಕನಸುಗಳನೇ ಹಾಸಿ ಬಿಡುವೆ ಕಾಲಡಿಗೆ.  ಮೆಲ್ಲಗಡಿಯಿಡು ನೀನು ನಡೆವಾಗ ಒಲವೆ, ನನ್ನ ಕನಸಿನ ಮೇಲೆಯೇ ನಡೆಯುತಿರುವೆ. – ಎನ್‌.ಎಸ್‌.ಭಟ್‌ ಅನುವಾದಿತ ಯೇಟ್ಸ್‌ ಕವಿತೆ ಒಂದು ರೀತಿಯಲ್ಲಿ ಕನಸನ್ನು ಬೆಂಬತ್ತಿ ನಡೆದು ಮಾಡಿದ ಅನ್ವೇಷಣೆಯ ಕಥೆ ಇದು.  ಪತ್ಛದ್ವೀಪ ಎಂದು ಕರೆಯಲ್ಪಡುವ ಐರ್ಲೆಂಡಿನ  ಸ್ಲೆ  çಗೋ ಪಟ್ಟಣಕ್ಕೆ ನಾನು ಹೋದಾಗ ಡ್ರಂ ಕ್ಲಿಫ್  ಚರ್ಚ್‌ ಗೇಟಿನ ಮುಂದೆ ಕುಳಿತ ಅರೆನಗ್ನ “ಬಡ ಯುವಕನ ಶಿಲ್ಪದ ಎದುರಿಗೆ ಕಪ್ಪು ಶಿಲೆಯ ಮೇಲೆ ಕೊರೆದಿಟ್ಟಿದ್ದು ಮೇಲಿನ ಕವಿತೆಯ ಮೂಲ ಇಂಗ್ಲಿಷ್‌ ಸಾಲುಗಳನ್ನು!

Advertisement

ಐರ್ಲೆಂಡ್‌ ದೇಶದ “ನೋಬೆಲ್’ ಪುರಸ್ಕೃತ (1923) ಯೇಟ್ಸ್‌ ಕವಿಯ ಹೆಸರನ್ನು ಅಜರಾಮರವಾಗಿಸಿದ ಪ್ರಸಿದ್ಧ ಕವಿತೆಯ ಸಾಲುಗಳಿವು. ಒಂದು ಕಾಲದಲ್ಲಿ ರವೀಂದ್ರನಾಥ್‌ ಟಾಗೋರರ ಕವಿತೆಗಳಿಂದ ಪ್ರಭಾವಿತನಾಗಿದ್ದಾಗ ವಿಲಿಯಂ ಯೇಟ್ಸ್‌ ರವೀಂದ್ರನಾಥರ ಕೆಲವು ಕವನಗಳನ್ನು ಅನುವಾದಿಸಿ ಗೀತಾಂಜಲಿಗೆ ಮುನ್ನುಡಿ ಬರೆದಿದ್ದ. ಅವರಿಗೆ 1913ರಲ್ಲಿ ಸಾಹಿತ್ಯದ ನೋಬೆಲ್‌ ಬಹುಮಾನ ದೊರಕುವಲ್ಲಿ ಆತನ ಮತ್ತು ಸ್ಟರ್ಜ್‌ ಮೂರ್‌ ಇವರ ಪಾತ್ರವಿತ್ತು ಎಂದು ಹೇಳುವವರುಂಟು. ನಾನು ಶಾಲೆಯಲ್ಲಿದ್ದಾಗ ಆತನ ಇನ್ನೊಂದು ಕವನವನ್ನು ಓದಿದಾಗಿ ನಿಂದಲೂ ನನಗೂ ಈ ಯೇಟ್ಸ್ ಯಾತ್ರೆಯ ಕನಸಿತ್ತು. ಅದು ಐವತ್ತು ವರ್ಷಗಳ ಅನಂತರ ನನಸಾಗಿತ್ತು!

ಇಂಗ್ಲೆಂಡಿನ ಪಶ್ಚಿಮಕ್ಕೆ ಇರುವ ಈ ಪುಟ್ಟ ನಡುಗಡ್ಡೆಯ ಜನಸಂಖ್ಯೆ ಈಗ 6.6 ಮಿಲಿಯನ್‌. ಅದರಲ್ಲಿ 1.8 ಮಿಲಿಯನ್‌ ಯು.ಕೆ. ಗೆ ಸೇರಿದ ನಾರ್ದರ್ನ್ ಐರ್ಲೆಂಡಿನಲ್ಲಿ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಎರಡು ವರ್ಷಗಳ ಅನಂತರ ಈ ದ್ವೀಪದ ವಿಭಜನೆಯಾಯಿತು. ಪ್ರಾಟೆಸ್ಟಂಟ್‌ ಪಂಗಡದವರ ಬಹುಮತದದ ನಾರ್ದರ್ನ್ ಐರ್ಲೆಂಡ್‌ ಯುನೈಟೆಡ್‌ ಕಿಂಗ್ಡಮ್‌ಗೆ ಸೇರಿತು.

ದಕ್ಷಿಣ ಭಾಗ ಆರ್ಯ ಅನ್ನುವ ಸ್ವತಂತ್ರ ದೇಶವಾಯಿತು. ಇವೆರಡು ಭಾಗಗಳ  ಜನರೂ ಧರ್ಮದ ಹೆಸರಿನಲ್ಲಿ  (ದಕ್ಷಿಣದವರು ಕ್ಯಾಥೊಲಿಕ್‌-ಉತ್ತರದವರು ಕ್ರಿಸ್ತಮತದ ಪ್ರಾಟೆಸ್ಟಂಟರು) 1998ರಲ್ಲಿ ಗುಡ್‌ ಫ್ರೈಡೇ ಒಪ್ಪಂದ ಆಗುವ ತನಕ ಕಾದಾಡುತ್ತ ಬಂದು, ಬಂದೂಕು, ಬಾಂಬು ಸ್ಫೋಟಗಳಿಂದ ಎರಡೂ ದೇಶಗಳಲ್ಲಿ ಮಾರಣ ಹೋಮ ನಡೆಸಿದ್ದು ಭಾರತ- ಪಾಕಿಸ್ಥಾನ ವಿಭಜನೆಯನ್ನು ನೆನಪಿಸುತ್ತದೆ. ಎರಡು ದಶಕಗಳವರೆಗೆ ಶಾಂತ ವಾತಾವರಣ ಆವರಿಸಿತ್ತು. ಇತ್ತೀಚೆಗಷ್ಟೇ ಎರಡು ವಾರಗಳ ಹಿಂದೆ ಮತ್ತೆ ‘The Troubles’ ಮರುಕಳಿಸಿದೆ. ಉತ್ತರದ ರಾಜಧಾನಿ ಬೆಲ್ಫಾÓr… ಮತ್ತೆ ಉರಿಯುತ್ತಿದೆ!

ಭಾರತ ಮತ್ತು ಯೇಟ್ಸ್

Advertisement

ಐರ್ಲೆಂಡಿನ ಗೇಲಿಕ್‌ ಸಂಪ್ರದಾಯದ ಜಾನಪದ ಕಥೆ, ಗೀತೆಗಳನ್ನು ಅತೀವ ಆಸ್ಥೆಯಿಂದ ಅಧ್ಯಯನ ಮಾಡಿದ ಯೇಟ್ಸ್‌ ಐರಿಷ್‌ ರಾಷ್ಟ್ರೀಯ ಚಳವಳಿಯಲ್ಲಿ ಸಕ್ರಿಯವಾಗಿ

ತನ್ನನ್ನು ತೊಡಗಿಸಿಕೊಂಡು ಆಗ ಬ್ರಿಟನ್‌ನ ಭಾಗವಾಗಿದ್ದ ಐರ್ಲೆಂಡಿನ ಸ್ವಾಯತ್ತತೆಗೆ ಹೋರಾಡಿದ. ಈ ಸಾಮ್ಯವೂ ಒಂದು ರೀತಿಯಲ್ಲಿ ಭಾರತ ಮತ್ತು ಪೌರ್ವಾತ್ಯ ವಿಷಯಗಳಲ್ಲಿ ಆತನಿಗೆ ಆಕರ್ಷಣೆ ಉಂಟಾದುದರಲ್ಲಿ ಆಶ್ಚರ್ಯವಿಲ್ಲ. ಮೊದಲಿನಿಂದಲೂ ಅತೀಂದ್ರಿಯತೆ ಮತ್ತು ಅನುಭಾವಗಳಲ್ಲಿ ಆಸ್ಥೆಯಿದ್ದ ಯೇಟ್ಸ್‌ ಭಾರತದ ಸರಸ್ವತಿ ಪುತ್ರರಾದ ಮೋಹಿನಿ ಚಟರ್ಜಿ, ರವೀಂದ್ರನಾಥ ಟಾಗೋರ್‌ ಮತ್ತು ಪುರೋಹಿತ ಸ್ವಾಮಿ ಇವರ ಸಂಪರ್ಕ ಒಡನಾಟದಲ್ಲಿದ್ದನು. ಅದರಲ್ಲೂ ಒಂದು ಕಾಲದಲ್ಲಿ ಟಾಗೋರರೊಡನೆ.

ಯೇಟ್ಸ್‌ನ ಕವಿತೆಗಳು ಭಾರತದ ಇಂಗ್ಲಿಷ್‌ ಶಾಲಾ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಯಾಗಿದ್ದವು. ಅದರಲ್ಲಿ ಒಂದು ನಾನು ಮೇಲೆ ಉಲ್ಲೇಖೀಸಿದ “ಇನ್ನಿಸಿ#†à ದ್ವೀಪ’ ಎನ್ನುವ ಕವಿತೆ ಸಹ. ಅದನ್ನು ನಾನು ಶಾಲೆಯಲ್ಲಿದ್ದಾಗ ಕಂಠಪಾಠ ಮಾಡಿದೆ. ಆ ಪದ್ಯದ ಮೋಡಿಗೆ ಆಗಲೇ ನಾನು ಮಾರು ಹೋಗಿದ್ದೆ. ಒಂದು ದಿನ ಅಲ್ಲಿಗೆ ಬೇಟಿ ಕೊಡುವ ಕನಸು ಕಂಡಿದ್ದೆ.

ಅನಿವಾಸಿಯಾಗಿ ನಾಲ್ಕು ದಶಕಗಳನ್ನು ಇಂಗ್ಲಂಡ್‌ನ‌ಲ್ಲಿ ಕಳೆದಿದ್ದರೂ ಆ ಪುಟ್ಟ ನಡುಗಡ್ಡೆಯನ್ನು ನೋಡುವ ಪ್ರಬಲವಾದ ನನ್ನ ಇಚ್ಛೆ ಪೂರೈಸಿದ್ದು ನಾಲ್ಕೈದು ವರ್ಷಗಳ ಕೆಳಗೆ ಐರ್ಲೆಂಡಿಗೆ ಹೋದಾಗಲೇ. ಹಿಂದಿನ ದಿನ ಅಲ್ಲಿಗೆ ತಲುಪಿದೆ. ಆ ರಾತ್ರಿ ಮಲಗುವಾಗ ಮರುದಿನ ಲಾಕ್‌ ಗಿಲ್‌ ಕೆರೆಯ ಮಧ್ಯದ ಇನ್ನಿಸ್‌ ಫ್ರೀ ನೋಡಲು ಮನ ಕಾತೊರೆಯುತ್ತಿತ್ತು. ಆ ಪದ್ಯದ ಮೊದಲ ಸಾಲನ್ನು ಮೆಲಕು ಹಾಕುತ್ತ ನಾಳೆ  I will arise and go and go to Innisfree ಎಂದುಕೊಳ್ಳುತ್ತ ಮಲಗಿ ನಿದ್ರೆಗೆ ಜಾರಿದೆ.

The Lake Isle of Innisfree (1890)  ಬರೀ 12 ಸಾಲುಗಳ ಈ ಸುಂದರವಾದ ಕವನವು ಪ್ರಾಸ, ಲಯ, ಸರಳ ಭಾಷೆ ಮತ್ತು ಸುಂದರ ಪ್ರತಿಮೆಗಳಿಂದ ಪ್ರತಿಯೊಬ್ಬ ಓದುಗನ ಮನ ಸೆಳೆಯುತ್ತದೆ. ಎಂತಲೇ ಆಂಗ್ಲ ಭಾಷೆಯ ಅತ್ಯಂತ ಜನಪ್ರಿಯ 50 ಕವನಗಳ ಪಟ್ಟಿಯಲ್ಲಿ ಅದು ಸೇರ್ಪಡೆಯಾಗಿದೆ.

ಅದರ ಎರಡು ಸಾಲುಗಳು ಹೀಗಿವೆ:

I will arise and go now, for always night and day

I hear lake water lapping with low sounds by the shore;

ಅದನ್ನು ಇತ್ತೀಚೆಗಷ್ಟೇ ನಮ್ಮನ್ನಗಲಿದ ಲಕ್ಷ್ಮೀನಾರಾಯಣ ಭಟ್ಟರು “ಚಿನ್ನದ ಹಕ್ಕಿ’ (1990, ಕಾವ್ಯಾಲಯ) ಎನ್ನುವ ಸಂಗ್ರಹದಲ್ಲಿ ಸಂಪೂರ್ಣ ಕವನವನ್ನು ಅನುವಾದ ಮಾಡಿದ್ದಾರೆ. ಕೊನೆಯ ನಾಲ್ಕು ಸಾಲುಗಳು ಹೀಗಿವೆ: “ಹೋಗುವೆ ಈಗಲೇ ಅಲ್ಲಿಗಿಂದು, ಯಾಕಂದರೆ ಹಗಲಿರುಳೂ ಅಲ್ಲಿ/ ಸರೋವರದ ತೆರೆ ಗುಣುಗುಣಿಸುವುವು ಸವರುತ ದಡವನು ಅಂಚಿನಲಿ/ನಿಲ್ಲುವೆ ದಾರಿಯ ನಡುವೆಯೆ, ಇಲ್ಲವೆ ಪಾದಚಾರಿಗಳ ಹಾದಿಯಲಿ/ಹೃದಯದಿಂದಲೇ ಎದ್ದು ಬರುವ ಆ ಸದ್ದನು ಆಲಿಸಿ ಕೇಳುತಲಿ.’

ಹದಿನಾರೇ ಇರಲಿ, ಐವತ್ತೇ ಇರಲಿ, ಅದೆಷ್ಟೇ ವರ್ಷಗಳ ಹಿಂದೆ ದೇಶ ಬಿಟ್ಟು ಬಂದ ನನ್ನಂತಹ ಅನಿವಾಸಿಗಳ “ಹುಚ್ಚು ಖೋಡಿ ಮನಸ್ಸಿಗೆ’ ತಾನು ಹುಟ್ಟಿದ ಊರು, ಆಟವಾಡಿದ ಜಾಗ, ಆಟದ ಮನೆ ಕಟ್ಟಿದ ನೆನಪುಗಳು

ಯಾವಾಗಲೂ ಹಸುರಾಗಿಯೇ ಇರುತ್ತವೆ. ಪದೇ ಪದೇ “ತವರನ್ನು’ ನೆನೆಯುತ್ತಿರುತ್ತೇವೆ. ಅದೇ ತರದಲ್ಲಿ ತನ್ನ ಇಪ್ಪತ್ತರಲ್ಲಿ ಲಂಡನ್‌ಗೆ ವಲಸೆ ಹೋಗಿದ್ದ

ವಿಲ್ಲಿಯಮ್‌ನಿಗೆ ಒಂದು ದಿನ ಸ್ಟ್ರಾಂಡ್‌ದಲ್ಲಿ ನಡೆದು ಹೋಗುತ್ತಿ¨ªಾಗ ಒಂದು ಅಂಗಡಿಯ ಕಿಟಕಿಯಲ್ಲಿ ಕಂಡ ಕಾರಂಜಿಯ ನೀರಿನ ಜುಳು ಜುಳು ಸದ್ದು ಆತನನ್ನು ತಾನು ಬಾಲ್ಯದಲ್ಲಿ ಆಟವಾಡಿದ ತಿಳಿ ನೇರಳೆ ಬಣ್ಣದ ಹೂಗಳ “ಹೆದರ್‌’ ಕಂಟಿ ತುಂಬಿದ ಇನ್ನಿಸ್‌ ಫ್ರೀ ದ್ವೀಪದತ್ತ ಎಳೆದೊಯ್ದಿತು. ಅದರ ದಡಕ್ಕೆ ಮತ್ತೆ ಮತ್ತೆ ತಿರುಗಿ ಬಂದು ಅಪ್ಪಳಿಸಿದ ನೀರಲೆಗಳನ್ನು ನೆನೆದು ಮೇಲಿನ ಸಾಲುಗಳನ್ನು ಬರೆದನಂತೆ.

ಸ್ಲೈಗೋ ಪಟ್ಟಣದ ಜನವಸತಿ 20,000 ಮಾತ್ರ.  ಆದರೆ ಅದರ ಕೀರ್ತಿಶಾಲಿ ಪುತ್ರನ ಸ್ಮರಣಾರ್ಥ ಒಂದು ಮಾಡರ್ನ್ ಆರ್ಟ್‌ ಕಂಚಿನ ಶಿಲ್ಪವನ್ನು ಊರ ಮಧ್ಯದಲ್ಲಿ ಸ್ಥಾಪಿಸಿದ್ದಾರೆ. ಅದರ ಮೈತುಂಬೆಲ್ಲ ಮೂಡಿಸಿದ ಅವನ ಪ್ರಸಿದ್ಧ ಕವನದ ಸಾಲುಗಳನ್ನು ಕೌತುಕಕದಿಂದ ಓದುವ ಭಕ್ತರು ಅನೇಕ.

ಹತ್ತಿರದಲ್ಲಿಯೇ ಯೇಟ್ಸ್ ಮ್ಯೂಸಿಯಂ ಸಹ ಉಂಟು. ಅದರೊಳಗೆ ನನ್ನಂಥ ಹಲವು ಯಾತ್ರಿಕರನ್ನು ಕಂಡು ಮಾತಾಡಿಸಿದೆ. ಅಲ್ಲಿಂದ ಗಿಲ್‌ ಸರೋವರಕ್ಕೆ ಹೋಗಿ ಮೋಟಾರು ಬೋಟಿನಲ್ಲಿ ಇನ್ನಿಸ್‌ ಫ್ರೀಗೆ ಒಂದು ಪ್ರದಕ್ಷಿಣೆ ಹಾಕಿಬಂದೆ. ಫ್ರಾನ್ಸ್‌ನಲ್ಲಿ ಮೃತನಾದ ಯೇ ಟ್ಸ್‌ ನ ದೇಹಾವಶೇಷಗಳನ್ನು ಸ್ವದೇಶಕ್ಕೆ ತಂದು ಸ್ಥಾಪಿಸಿದ ಪ್ರಸಿದ್ಧ ಸಮಾಧಿಲೇಖನವನ್ನೋದಿ ಊರಿಗೆ ಮರಳಿದೆ.

ಯಾರು ಬಡವರು?

ನನ್ನ ಪ್ರವಾಸದ ಅನಂತರ ಇತ್ತೀಚೆಗೆ ಗೊತ್ತಾದ ವಿಷಯವೆಂದರೆ ಭಾರತ ದೇಶ ಇಬ್ಬರು ಉತ್ಕೃಷ್ಟ “ನೋಬೆಲ್’ ಕವಿಗಳ ಮೈತ್ರಿಯ ಸಂಕೇತವಾಗಿ ಸ್ಲೈಗೋ ದಲ್ಲಿ ರವೀಂದ್ರನಾಥ್‌ ಟಾಗೋರರ ಮೂರ್ತಿಯನ್ನು ಕಾಣಿಕೆಯಾಗಿ ಕೊಟ್ಟದ್ದು. ಆದರೆ ದುರದೃಷ್ಟದ ಸುದ್ದಿಯೆಂದರೆ ಜಗತ್ತಿನ ಸಾವಿರಾರು ಭಗ್ನಪ್ರೇಮಿಗಳ “ರಾಷ್ಟ್ರಗೀತೆ’ಯಂತಿರುವ ಪ್ರಸಿದ್ಧ ಕವನದ ‘ಏಛಿ ಡಿಜಿsಜಛಿs fಟ್ಟ clಟಠಿಜಛಿs ಟf ಏಛಿಚvಛಿn’ ಈ ಲೇಖನದ ಆರಂಭದಲ್ಲಿ ಉದ್ಧರಿಸಿದ ಸಾಲುಗಳ ರಕ್ಷಣೆಗೇನೋ ಅನ್ನುವಂತೆ ಕುಳಿತಿದ್ದ ಬಡ ಯುವಕನ ಅತ್ಯಂತ ಸುಂದರ ಕರಿಶಿಲ್ಪವನ್ನು ದುರುಳರು ಅಪಹರಿಸಿಕೊಂಡು ಹೋಗಿದ್ದಾರೆ ಎಂದು. ಅದರಿಂದಾಗಿ ಈಗ ಸ್ಲೈಗೋ ಬಡವಾಗಿದೆ!

ಯೇಟ್ಸ್‌ಸಮಾಧಿ ಏನನ್ನು ಹೇಳುತ್ತಿದೆ?

ಸ್ಲೆ çಗೋ ಹತ್ತಿರದ ಆತನ ಪ್ರೀತಿಯ ಬೆನ್‌ ಬಲೆºನ್‌ ಗುಡ್ಡದ ಮಡಿಲಲ್ಲಿ ಪವಡಿಸಿರುವ ವಿಲ್ಲಿಯಮ್‌ ಯೇಟ್ಸ್‌ ಕವಿಯ ನಿಗೂಢ ಗೋರಿ ಬರಹ ಅದನ್ನು ಓದಿ ಮುಂದೆ ಹೋಗುವ ಬಹಳಷ್ಟು ಜನರಲ್ಲಿ ಕುತೂಹಲ ಮತ್ತು ಆತನ ಅಭಿಮಾನಿಗಳು ಹಾಗೂ ವಿಮರ್ಶಕರಲ್ಲಿ ಚರ್ಚೆಗೆ ಆಸ್ಪದ ಕೊಟ್ಟಿದೆ. Cast a cold eye on life, on death horseman pass by. ಆತನ ಕೊನೆಯ ಕವಿತೆ Under Ben Bulben ದ ಕೊನೆಯಲ್ಲಿ ಬರುವ ಈ ಬರಿ ಹನ್ನೊಂದು ಶಬ್ದಗಳಲ್ಲಿ ಏನನ್ನು ಹೇಳಲು ಹೊರಟಿದ್ದಾನೆ, ಕವಿ? “ಜೀವನವನ್ನು ನಿಷ್ಠುರ ದೃಷ್ಟಿಯಿಂದ ನೋಡು; ಸತ್ತ ಮೇಲೆ ಮುಂದೆ ಸಾಗು, ಅಶ್ವಾರೋಹಿಯೇ’. ಆ ಗೋರಿಯ ಅಡಿಯಲ್ಲಿಯ ಅಸ್ಥಿ  1939 ರಲ್ಲಿ ಫ್ರಾ®Õ… ದೇಶದಲ್ಲಿ ಅಸು ನೀಗಿದ ಮಹಾಕವಿ- ನಿಜವಾಗಿಯೂ ಆತನವೇ ಎನ್ನುವುದರಲ್ಲಿ ಸಹ ಸಂಶಯವಿರುವ ಹಿನ್ನೆಲೆಯಲ್ಲಿ ಇದನ್ನು ಗಮನಿಸಬೇಕು. ಆತನ ಅಜ್ಜ ಅಲ್ಲಿಯೇ ರೆಕ್ಟರ್‌ ಆಗಿದ್ದ ಚರ್ಚ್‌ಗೆ ಬಂದು ಹಣಿಕಿ ಹಾಕಿ ಈ ಚರಮವಾಕ್ಯವನ್ನು ಗಡಿಬಿಡಿಯಲ್ಲಿ ಓದಿ ಮುಂದೆ ಸಾಗುವ ಟೂರಿಸ್ಟರಿಗೆ ಆತನ ಈ ಕೊನೆಯ ಸಂದೇಶದ ಅರ್ಥ ಅಷ್ಟು ಸುಲಭದಲ್ಲಿ ಆಗಲಿಕ್ಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next