Advertisement

ಪಿಲಾರು ಕುಂಜಿಗುಡ್ಡೆ: ಮನೆಯಂಗಳಕ್ಕೆ ಬಂದ ಕಾಡುಕೋಣ!

12:52 PM Jul 29, 2023 | Team Udayavani |

ಶಿರ್ವ: ಇಲ್ಲಿಗೆ ಸಮೀಪದ ಪಿಲಾರು ಕುಂಜಿಗುಡ್ಡೆ ಪೆರ್ಗೊಟ್ಟು ನಿವಾಸಿ ರವಿ ಕುಲಾಲ್ ರವರ ಮನೆಯ ಅಂಗಳಕ್ಕೆ ಶನಿವಾರ ಬೆಳಿಗ್ಗೆ ಕಾಡು ಕೋಣವೊಂದು ಬಂದಿದ್ದು ಮನೆಯ ಮುಂದೆ ಬಾವಿ ಕಟ್ಟೆ ಬಳಿ ಸುತ್ತಾಡಿ ಕಾಡಿಗೆ ತೆರಳಿದೆ.

Advertisement

ಕಳೆದ ಕೆಲವು ಸಮಯಗಳಿಂದ ಈ ಪರಿಸರದಲ್ಲಿ ಕಾಡುಕೋಣಗಳ ಹಿಂಡು ತಿರುಗಾಡುತ್ತಿದ್ದು, ಪರಿಸರದ ಮಲ್ಲಿಗೆ, ಅಡಿಕೆ, ಭತ್ತದ ಗದ್ದೆ ಮತ್ತಿತರ ಕೃಷಿ ಭೂಮಿಗೆ ತುಂಬಾ ಹಾನಿ ಉಂಟು ಮಾಡುತ್ತಿದೆ.

ಪರಿಸರದಲ್ಲಿ ಓಡಾಡುವ ಜನರು ಹಾಗೂ ಶಾಲೆಗೆ ಹೋಗುವ ಮಕ್ಕಳು ತುಂಬಾ ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಕೂಡಲೇ ಸ್ಪಂದಿಸಬೇಕೆಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next