Advertisement
ಪುತ್ತೂರು ತಾಲೂಕಿನ ಎರಡು ಕಡೆ ಪ್ರಾಯೋಗಿಕ ಅನುಷ್ಠಾನದ ಜತೆಗೆ ಜಿಲ್ಲೆಯ 11 ಕಡೆಗಳಲ್ಲಿ ಮಿಂಚು ಪ್ರತಿಬಂಧಕ ಅಳವಡಿಕೆಗೆ 25 ಲಕ್ಷ ರೂ.ಗಳ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಮಿಂಚು-ಸಿಡಿಲಿನ ತೀವ್ರತೆ ಹೆಚ್ಚಿರುವಲ್ಲಿ ಮಿಂಚು ಪ್ರತಿಬಂಧಕ ಅಳವಡಿಸಿದಾಗ ಅಲ್ಲಿ ಸಿಡಿಲಿನ ಆಘಾತ ಕಡಿಮೆಯಾಗುತ್ತದೆ. ಹೀಗಾಗಿ ತಂತ್ರಜ್ಞರ ಮಾಹಿತಿ ಪಡೆದೇ ಜಿಲ್ಲಾಡಳಿತವು ನಿರ್ಧಾರಕ್ಕೆ ಬಂದಿತ್ತು. ಆದರೆ ಸರಕಾರ ಮಾತ್ರ ಇದಕ್ಕೆ ಇನ್ನೂ ಅವಕಾಶ ನೀಡಿಲ್ಲ.
2014ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಇಬ್ರಾಹಿಂ ಅವರು ತಂತ್ರಜ್ಞರು ಮತ್ತು ಅಧಿಕಾರಿಗಳ ಸಭೆ ನಡೆಸಿ, 11 ಕಡೆ ಗಳಲ್ಲಿ ಮಿಂಚು ಪ್ರತಿಬಂಧಕ ಅಳವಡಿಸುವ ನಿಟ್ಟಿನಲ್ಲಿ 25 ಲಕ್ಷ ರೂ.ಗಳ ಪ್ರಸ್ತಾವನೆಯನ್ನು ರಾಜ್ಯ ಕಂದಾಯ ಇಲಾಖೆಯ ವಿಪತ್ತು ನಿರ್ವಹಣ ವಿಭಾಗದ ಪ್ರಧಾನ ಕಾರ್ಯದರ್ಶಿಗೆ ನೀಡಿದ್ದರು. 11 ಕಡೆಗಳಿಗೆ ಅನುಷ್ಠಾನ
ಪುತ್ತೂರು ತಾಲೂಕಿನ ಒಳ ಮೊಗರು ಗ್ರಾ.ಪಂ. ಕಚೇರಿ ಬಳಿ ಮತ್ತು ಪ್ರಸ್ತುತ ಕಡಬ ತಾಲೂಕಿ ನಲ್ಲಿರುವ ಕೋಡಿಂಬಾಳ ದೊಡ್ಡಕೊಪ್ಪ ಪ್ರದೇಶ ಸೇರಿದಂತೆ ಸುಳ್ಯದ ಜಾಲ್ಸೂರು ಗ್ರಾ.ಪಂ. ಕಚೇರಿ ಬಳಿ, ದೇವಚಳ್ಳ ಗ್ರಾ.ಪಂ. ವ್ಯಾಪ್ತಿ, ಮಂಗಳೂರಿನ ಅಂಬ್ಲಿಮೊಗರು ಗ್ರಾ.ಪಂ. ಗಡಿಪ್ರದೇಶ, ಮಂಜನಾಡಿ ಗ್ರಾ.ಪಂ. ವ್ಯಾಪ್ತಿಯ ಉರುಮನೆ, ಮೆನ್ನಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕ ಸ್ಮಶಾನ ಪರಿಸರ, ಗುರುಪುರ ಗ್ರಾ.ಪಂ. ಕಚೇರಿ ಬಳಿ, ಪೆರ್ಮುದೆ ಗ್ರಾ.ಪಂ. ವ್ಯಾಪ್ತಿ, ಮೂಡುಬಿದಿರೆ ಶಿರ್ತಾಡಿ ಅಂಚೆ ಕಚೇರಿಯ ಬಳಿ, ಬೆಳ್ತಂಗಡಿಯ ಪುದುವೆಟ್ಟು ಗ್ರಾ.ಪಂ. ವ್ಯಾಪ್ತಿಯ ಬೊಳ್ಮನಾರಿನಲ್ಲಿ ಮಿಂಚು ಪ್ರತಿಬಂಧಕ ಅಳವಡಿಕೆಗೆ ಜಿಲ್ಲಾಡಳಿತ ಸ್ಥಳ ನಿಗದಿ ಮಾಡಿತ್ತು. ಇದಕ್ಕೆ ಮಂಜೂರಾತಿ ದೊರೆತರೆ ಪುತ್ತೂರಿನಲ್ಲಿ 2 ಕಡೆ ಪ್ರಾಯೋಗಿಕ ಅನುಷ್ಠಾನದ ಕುರಿತು ಮಾತುಕತೆ ನಡೆದಿತ್ತು.
Related Articles
ಮಂಜೂರಾತಿಯ ಬಳಿಕ ಮಿಂಚು ಪ್ರತಿಬಂಧಕಗಳ ಅನುಷ್ಠಾನದ ಜವಾಬ್ದಾರಿ ಯನ್ನು ಜಿಲ್ಲಾಡಳಿತವು ಖಾಸಗಿ ಸಂಸ್ಥೆಗೆ ನೀಡಿದೆ. ಈ ಸಂಸ್ಥೆಯವರು ವಿಚಾರಣೆ ನಡೆಸುವ ಸಂದರ್ಭ ಪ್ರಸ್ತಾವನೆಗೆ ತಾಂತ್ರಿಕ ಮಂಜೂರಾತಿ ಲಭಿಸಿಲ್ಲ ಎನ್ನುವ ಉತ್ತರ ನೀಡುತ್ತಿದ್ದಾರೆ. ಪ್ರಾರಂಭದ 25 ಲಕ್ಷ ರೂ.ಗಳ ಪ್ರಸ್ತಾವನೆಯನ್ನು 35 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಆದರೆ ನಾಲ್ಕೂವರೆ ವರ್ಷ ಕಳೆದರೂ ಅನುಷ್ಠಾನಗೊಳ್ಳುವ ಲಕ್ಷಣಗಳು ಮಾತ್ರ ಕಾಣುತ್ತಿಲ್ಲ.
Advertisement
ಮಾಹಿತಿ ಪಡೆದುಕೊಳ್ಳುವೆಜಿಲ್ಲೆಯಲ್ಲಿ ಮಿಂಚು ಪ್ರತಿಬಂಧಕ ಅಳವಡಿಸುವ ಪ್ರಸ್ತಾವನೆಯ ಕುರಿತು ನನಗೆ ಮಾಹಿತಿ ಇಲ್ಲ. ಹೀಗಾಗಿ ಮುಂದೆ ಅದರ ಕುರಿತು ಮಾಹಿತಿ ಪಡೆದುಕೊಂಡು ವಿಚಾರಣೆ ನಡೆಸಿ ಸ್ಪಷ್ಟ ಮಾಹಿತಿಯನ್ನು ನೀಡಲಾಗುವುದು.
– ಶಶಿಕಾಂತ ಸೆಂಥಿಲ್ ದ.ಕ. ಜಿಲ್ಲಾಧಿಕಾರಿ ಕಿರಣ್ ಸರಪಾಡಿ