Advertisement

ಕಸವಿಲೇವಾರಿ ಘಟಕದಲ್ಲಿ ಹಂದಿ ಸಾಕಾಣಿಕೆ

05:52 AM Jun 19, 2020 | Lakshmi GovindaRaj |

ತುಮಕೂರು: ನಗರದಲ್ಲಿ ಹಂದಿ, ನಾಯಿಗಳ ಹಾವಳಿ ಹೆಚ್ಚುತ್ತಿದೆ ಎಂದು ನಾಗರಿಕರಿಂದ ದೂರುಗಳ ಮೇಲೆ ದೂರು ಬರುತ್ತಿದೆ, ಇವುಗಳನ್ನು ನಿಯಂತ್ರಿಸಬೇಕಾಗಿರುವ ಹಿನ್ನೆಲೆ ಯಲ್ಲಿ ಮೊದಲು ಹಂದಿಗಳನ್ನು ಅಜ್ಜಗೊಂಡನಹಳ್ಳಿ  ಕಸವಿಲೇವಾರಿ ಘಟಕಕ್ಕೆ ಸಾಗಿಸಲು ಪಾಲಿಕೆ ನಿರ್ಧರಿಸಿದೆ. ಇಲ್ಲಿಯ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಪಾಲಿಕೆ ಮೇಯರ್‌ ಫ‌ರೀದ ಬೇಗಂ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಹಂದಿ ಸಾಕುವವರ ಮತ್ತು ಅಧಿಕಾರಿಗಳ ಸಭೆ  ಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

Advertisement

ಸಾರ್ವಜನಿಕರ ದೂರು: ನಗರದ ಎಲ್ಲಾ ಕಡೆ ಹಂದಿಗಳು ಮತ್ತು ನಾಯಿಗಳು ಸಂಚಾರ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಇದರ ನಿಯಂತ್ರಣ ಮಾಡಬೇಕು ಎಂದು ಪಾಲಿಕೆಗೆ ನಾಗರಿಕರಿಂದ ದೂರುಗಳು  ಬಂದಿದ್ದವು.

ಸಭೆಯಲ್ಲಿ ನಿರ್ಧಾರ: ನಗರದಲ್ಲಿ ಬಿಡಾಡಿ ಹಂದಿಗಳ ಹಾವಳಿ ಹೆಚ್ಚಿ ಇವುಗಳಿಂದ ಅಪಘಾತ ಗಳು ಹೆಚ್ಚುತ್ತಿದ್ದು, ನಾಗರಿಕರು ಅಪಘಾತ ಗಳಿಗೆ ಒಳಗಾಗಿ ತೀವ್ರ ಸಂಕಷ್ಟವನ್ನು ಎದುರಿಸು ವಂತಾಗಿದೆ. ನಾಗರಿಕ ಸಮಿತಿಗಳು, ಮಹಾ ನಗರ  ಪಾಲಿಕೆಯ ಸದಸ್ಯರು ನೀಡಿದ್ದ ದೂರು ಗಳ ಹಿನ್ನೆಲೆಯಲ್ಲಿ ನಗರದಲ್ಲಿ ಹಂದಿ ಸಾಕುವವರ ಸಭೆ ಕರೆದು ಚರ್ಚಿಸಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಪಾಲಿಕೆ ಆಯುಕ್ತ ಟಿ. ಭೂಬಾಲನ್‌

ಮತ್ತು ಮಹಾನಗರ ಪಾಲಿಕೆಯ ಸದಸ್ಯರು ಮತ್ತು  ಹಂದಿ ಸಾಕುವವರ ಜತೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಂಡರು. ಈ ವೇಳೆ ಹಂದಿ ಸಾಕುವವರು ತಮ್ಮ ಸಮಸ್ಯೆಯನ್ನು ಸಭೆಯಲ್ಲಿ ತಿಳಿಸಿದರು. ಅದಕ್ಕೆ ಉತ್ತರಿಸಿದ ಪಾಲಿಕೆ ಅಧಿಕಾರಿಗಳು, ಈಗ ಹಂದಿ ಸಾಕಲು ಗುರುತಿ ಸಿರುವ ಅಜ್ಜಗೊಂಡನಹಳ್ಳಿಯಲ್ಲಿ ಅಗತ್ಯ ವಿರುವ ಸೌಲಭ್ಯ ನೀಡಲಾಗುವುದು ಎಂದರು.

ಹಂದಿ ಸಾಕುವವರಿಗೆ ಭರವಸೆ: ಕಸವಿಲೇವಾರಿ ಘಟಕದಲ್ಲಿ 24/7 ನೀರಿನ ವ್ಯವಸ್ಥೆ, ವಿದ್ಯುತ್ಛಕ್ತಿ, ಸೆಕ್ಯುರಿಟಿ ಸಹ ನೀಡಲು ಪಾಲಿಕೆ ಸಿದ್ಧವಿದೆ ಎಂದು ಮೇಯರ್‌ ಫ‌ರೀದ ಬೇಗಂ ಮತ್ತು ಆಯುಕ್ತ ಟಿ.ಭೂಬಾಲನ್‌ ಹಂದಿ ಸಾಕುವವರಿಗೆ  ಭರವಸೆ ನೀಡಿದರು.

Advertisement

ಶಾಶ್ವತ ನೆಲೆ ಕಲ್ಪಿಸಿ: ಹಂದಿ ಸಾಕುವವರ ಸಂಘದ ರಾಜ್ಯಾಧ್ಯಕ್ಷೆ ರಾಮಕ್ಕ ಮಾತನಾಡಿ, ಹಂದಿ ಸಾಕುವವರಿಗೆ ಅಣ್ಣೇನಹಳ್ಳಿಯಲ್ಲಿ ಸರ್ಕಾರವು ಗುರುತಿಸಿರುವ ಜಾಗದಲ್ಲಿ ಶಾಶ್ವತ ನೆಲೆ ಕಲ್ಪಿಸಿ ಎಂದು ಮೇಯರ್‌ ಮತ್ತು  ಆಯುಕ್ತರಿಗೆ  ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌ ಫ‌ರೀದ ಬೇಗಂ ಶಾಶ್ವತ ನೆಲೆ ಕಲ್ಪಿಸಲು ಪಾಲಿಕೆಗೆ ಅಧಿಕಾರವಿಲ್ಲ. ಆ ಅಧಿಕಾರ ಇರುವುದು ಜಿಲ್ಲಾಧಿಕಾರಿಗಳಿಗೆ ಮಾತ್ರ ಎಂದು ಹೇಳಿದರು.

ಅಜ್ಜಗೊಂಡನಹಳ್ಳಿಗೆ ಭೇಟಿಗೆ ನಿರ್ಧಾರ: ಹಂದಿಗಳನ್ನು ನಗರದಿಂದ ಸಾಗಿಸಲು ಮುಂದಾಗಿರುವ ಪಾಲಿಕೆ ಹಂದಿ ಸಾಕುವವ ರೊಂದಿಗೆ ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಲು ತೀರ್ಮಾನ  ಕೈಗೊಂಡಿತು. ಪಾಲಿಕೆ ಮೇಯರ್‌, ಆಯುಕ್ತರು ಮತ್ತು ಪಾಲಿಕೆ ಸದಸ್ಯರು, ಅಧಿಕಾರಿಗಳೊಂದಿಗೆ ಜೂ.22ರಂದು ಅಜ್ಜಗೊಂಡನಹಳ್ಳಿಗೆ ಭೇಟಿ ನೀಡಿ ಜಾಗದ ಸ್ಥಿತಿಗತಿಯ ಬಗ್ಗೆ ವಿವರಿಸಿ, ತಾತ್ಕಲಿಕ ವ್ಯವಸ್ಥೆ ಮಾಡುವುದಾಗಿ ಮೇಯರ್‌  ಹೇಳಿದರು.

ಹಂದಿ ಮೇಯಿಸಲು ನಾಲ್ಕು ಎಕರೆ ಜಾಗ: ನಗರದ ಹೊರವಲಯದ ಅಜ್ಜಗೊಂಡನಹಳ್ಳಿ ಯಲ್ಲಿರುವ ತುಮಕೂರು ಮಹಾನಗರ ಪಾಲಿ ಕೆಯ 40 ಎಕರೆ ವಿಸ್ತೀರ್ಣದ ಕಸ ವಿಲೇವಾರಿ ಘಟಕವಿರುವ ಜಾಗದಲ್ಲಿ ತಾತ್ಕಾಲಿಕವಾಗಿ ಹಂದಿ  ಸಾಕಾಣಿಕೆಗೆ ನಾಲ್ಕು ಎಕರೆ ಪ್ರದೇಶದಲ್ಲಿ ಹಂದಿಗಳನ್ನು ಮೇಯಿಸಲು ಜಾಗ ನೀಡಲು ಪಾಲಿಕೆ ಯಲ್ಲಿ ತೀರ್ಮಾನಿಸಲಾಗಿದೆ ಎಂದು ಪಾಲಿಕೆ ಮೇಯರ್‌ ಫ‌ರೀದ ಬೇಗಂ ತಿಳಿಸಿದರು.

ನಗರ ವ್ಯಾಪ್ತಿಯಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ ಎಂದು ನಾಗರಿಕರಿಂದ ದೂರುಗಳು ಕೇಳಿ ಬಂದಿತ್ತು. ಹಂದಿ ಸಾಕುವ ಮಾಲೀಕ ರೊಂದಿಗೆ ಸಭೆ ನಡೆಸಿದ್ದು ತಾತ್ಕಾಲಿಕ ವಾಗಿ ಅಜ್ಜಗೊಂಡನಹಳ್ಳಿ ಕಸವಿಲೇ ವಾರಿ ಘಟಕದ 4 ಎಕರೆ  ಜಾಗದಲ್ಲಿ ಹಂದಿ ಸಾಕಲು ಅವಕಾಶ ಕಲ್ಪಿಸಲಾಗುವುದು.
-ಟಿ.ಭೂಬಾಲನ್‌, ಪಾಲಿಕೆ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next